ಬಂಟ್ವಾಳದಲ್ಲಿ ಎಸ್‌ಡಿಪಿಐ-ಕಾಂಗ್ರೆಸ್ ಮೈತ್ರಿ: ಬಿಜೆಪಿ ಕೈ ತಪ್ಪಿದ ಪುರಸಭೆ ಅಧಿಕಾರ!

By Govindaraj SFirst Published Aug 22, 2024, 4:46 PM IST
Highlights

ದ.ಕ ಜಿಲ್ಲೆಯ ಬಂಟ್ವಾಳ ಪುರಸಭೆಯಲ್ಲಿ ಎಸ್ಡಿಪಿಐ ಪಕ್ಷದ ಜೊತೆ ಕಾಂಗ್ರೆಸ್ ಮತ್ತೊಮ್ಮೆ ಮೈತ್ರಿ ಮಾಡಿಕೊಂಡಿದ್ದು, ಎಸ್ಡಿಪಿಐ ಬೆಂಬಲದೊಂದಿಗೆ ಪುರಸಭೆ ಅಧಿಕಾರ ಹಿಡಿದಿದೆ. ದ‌.ಕ ಜಿಲ್ಲೆಯ ಬಂಟ್ವಾಳ ಪುರಸಭೆ ಆಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಇಂದು ನಡೆದಿದೆ.
 

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು (ಆ.22): ದ.ಕ ಜಿಲ್ಲೆಯ ಬಂಟ್ವಾಳ ಪುರಸಭೆಯಲ್ಲಿ ಎಸ್ಡಿಪಿಐ ಪಕ್ಷದ ಜೊತೆ ಕಾಂಗ್ರೆಸ್ ಮತ್ತೊಮ್ಮೆ ಮೈತ್ರಿ ಮಾಡಿಕೊಂಡಿದ್ದು, ಎಸ್ಡಿಪಿಐ ಬೆಂಬಲದೊಂದಿಗೆ ಪುರಸಭೆ ಅಧಿಕಾರ ಹಿಡಿದಿದೆ. ದ‌.ಕ ಜಿಲ್ಲೆಯ ಬಂಟ್ವಾಳ ಪುರಸಭೆ ಆಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಇಂದು ನಡೆದಿದೆ. ‌ಆದರೆ ಎಸ್ಡಿಪಿಐ-ಕಾಂಗ್ರೆಸ್ ಮೈತ್ರಿಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಬಂಟ್ವಾಳ ಪುರಸಭಾ ಅಧ್ಯಕ್ಷರಾಗಿ ನಿರೀಕ್ಷೆಯಂತೆ ಕಾಂಗ್ರೆಸ್ ಸದಸ್ಯ ವಾಸು ಪೂಜಾರಿ ಲೊರೆಟ್ಟೋ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಸ್.ಡಿ.ಪಿ.ಪಕ್ಷದ ಸದಸ್ಯ ಮೋನಿಸ್ ಆಲಿ ಅವರು ಆಯ್ಕೆಯಾಗಿದ್ದಾರೆ. 

Latest Videos

ಬಂಟ್ವಾಳ ಪುರಸಭೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಎಸ್.ಡಿ.ಪಿ.ಐ.ಪಕ್ಷ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ನಾಮಪತ್ರ ಸಲ್ಲಿಸಿದ್ದು, ಎಸ್.ಡಿ.ಪಿ.ಐ‌.ಪಕ್ಷದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆಗಳಿಗೆಯಲ್ಲಿ ಎಸ್.ಡಿ.ಪಿ.ಐ.ಅಧ್ಯಕ್ಷ ಸ್ಥಾನದ ನಾಮಪತ್ರ ಹಿಂದೆಗೆದುಕೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಮತ್ತು ‌ಎಸ್.ಡಿ.ಪಿ.ಐ ಮೈತ್ರಿಕೂಟದ ಅಭ್ಯರ್ಥಿ ವಾಸು ಪೂಜಾರಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಪುರಸಭೆಯಲ್ಲಿ ಕಾಂಗ್ರೇಸ್ ಮತ್ತು ಎಸ್.ಡಿ.ಪಿ.ಐ.ಪಕ್ಷ ಮೈತ್ರಿಯಾಗಿ ಆಡಳಿತ ನಡೆಸಲಿದೆ. 

ಆಲಮಟ್ಟಿ ಡ್ಯಾಂ ಎತ್ತರಕ್ಕೆ ಕೇಂದ್ರ ಸರ್ಕಾರ ನೋಟಿಫಿಕೇಷನ್‌ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಮೈತ್ರಿಯಾದ್ದರಿಂದ ಒಟ್ಟು 15 ಮತಗಳು ಪಡೆದರೆ ಬಿಜೆಪಿಗೆ ಶಾಸಕ ಹಾಗೂ ಸಂಸದರ ಮತ ಸೇರಿ ಒಟ್ಟು 13 ಮತಗಳು ಸಿಕ್ಕಿದೆ. ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ವಾಸು ಪೂಜಾರಿ ಒಬ್ಬರೇ  ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ  ಸ್ಥಾನಕ್ಕೆ  ಕಾಂಗ್ರೆಸ್ ಸ್ಪರ್ಧೆ ಮಾಡದೆ ಎಸ್.ಡಿ.ಪಿ.ಐ.ಜೊತೆ ಹೊಂದಾಣಿಕೆ ಮಾಡಿಕೊಂಡು ಅವರಿಗೆ ಬಿಟ್ಟುಕೊಟ್ಟಿದೆ. ಎಸ್.ಡಿ.ಪಿ.ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಇದ್ರೀಸ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೋನಿಸ್ ಆಲಿ ನಾಮಪತ್ರ ಸಲ್ಲಿಸಿದ್ದರು. 

ಒಟ್ಟು 27 ಸದಸ್ಯ ಬಲದ ಪುರಸಭೆಯಲ್ಲಿ ಬಹುಮತಕ್ಕೆ 14 ಮತಗಳ ಅಗತ್ಯ ಇತ್ತು. ಕಾಂಗ್ರೆಸ್ 12 ಸ್ಥಾನ ಹೊಂದಿತ್ತಾದರೂ ಕಾಂಗ್ರೆಸ್ ಸದಸ್ಯರೊಬ್ಬರ ರಾಜೀನಾಮೆಯಿಂದ ಕಾಂಗ್ರೆಸ್ ಬಲ 11ಕ್ಕೆ ಕುಸಿದಿತ್ತು. ಬಿಜೆಪಿ 11 ಹಾಗೂ ಎಸ್‌ಡಿಪಿಐ 4 ಸದಸ್ಯರ ಬಲ ಹೊಂದಿತ್ತು. 11 ಸ್ಥಾನ ಹೊಂದಿರುವ ಬಿಜೆಪಿಗೆ ಸ್ಥಳೀಯ ಶಾಸಕರು ಮತ್ತು ಸಂಸದರ ಮತ ಸೇರಿ 13 ಮತಗಳಿದ್ದವು.‌ಆದರೆ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಮೈತ್ರಿ ಸಾಧಿಸಿ 15 ಮತಗಳ ಬಹುಮತದ ಮೂಲಕ‌ ಅಧಿಕಾರಕ್ಕೆ ಬಂದಿದೆ.

ಆನೆ ಹೋಗುತ್ತಿರುತ್ತೆ, ನರಿಯೊಂದು ಅದೇನೋ ಬೀಳುತ್ತೇ ಅಂಥ ಕಾಯ್ತಿರುತ್ತೆ: ಸಚಿವ ಮಹದೇವಪ್ಪ

ಎಸ್.ಡಿ.ಪಿ.ಐ ಯಾವ ಪಕ್ಷದ ಬಿ.ಟೀಮ್ ಎಂಬುದು ಸ್ಪಷ್ಟವಾಗಿದೆ: ಕಾಂಗ್ರೆಸ್ ಮತ್ತು ಎಸ್.ಡಿ.ಪಕ್ಷ ಹೊಂದಾಣಿಕೆಯಿಂದ ಪುರಸಭೆಯ ಅಧಿಕಾರ ಪಡೆದುಕೊಂಡಿದೆ. ಇದರಿಂದ ಜನತೆಗೆ ಸ್ಪಷ್ಟವಾದ ಸಂದೇಶ ರವಾನೆ ಆಗಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.  ಎಸ್.ಡಿ.ಪಿ.ಐ.ನ್ನು  ಯಾವ ಪಕ್ಷದ ಬಿ.ಟೀಮ್ ಎಂಬುದು  ಜನತೆಗೆ ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ. ಬಿಜೆಪಿ 13 ಮತಗಳನ್ನು ಅತ್ಯಂತ ಹೆಚ್ಚು ಮತಗಳನ್ನು ಪಡೆದರು ಕೂಡ ಕಾಂಗ್ರೆಸ್ ಮತ್ತು ಎಸ್ ಡಿಪಿ ಐ ಪಕ್ಷದ ಹೊಂದಾಣಿಕೆಯಿಂದ ಅಧಿಕಾರ ಪಡೆದುಕೊಂಡಿದ್ದಾರೆ. ಎಸ್.ಡಿ.ಪಿ.ಐ ಯಾವ ಪಕ್ಷದ ಬಿ.ಟೀಮ್ ಎಂಬುದು ಸ್ಪಷ್ಟವಾಗಿದೆ. ಇದರಿಂದ ಬಂಟ್ವಾಳದ ಜನತೆಗೆ ಒಂದು ಸಂದೇಶ ರವಾನೆ ಆಗಿದೆ. ಬಹಳಷ್ಟು ಸಮಯದಿಂದ ನಾವು ಮತೀಯವಾದಿಗಳೊಂದಿಗೆ ಇಲ್ಲ ಎಂದು ಹೇಳಿಕೊಂಡು ಬರುತ್ತಿದ್ದ ಕಾಂಗ್ರೆಸ್ ಒಳಗಿಂದ ಒಳಗೆ ಒಪ್ಪಂದ ಮಾಡಿಕೊಂಡೇ ಬರುತ್ತಿತ್ತು ಎಂದು  ಅರೋಪ ಮಾಡಿದ್ದಾರೆ.

click me!