ಕೆಎಂಎಫ್ ಅನ್ನು ಗುಜರಾತಿನ ಅಮುಲ್ ಸಂಸ್ಥೆಯೊಂದಿಗೆ ವಿಲೀನದ ಯಾವುದೇ ಚಿಂತನೆ ನಡೆದಿಲ್ಲವೆಂದು ಮುಖ್ಯಮಂತ್ರಿಗಳೇ ಸ್ಪಷ್ಟವಾಗಿ ಹೇಳಿದ್ದಾರೆ. ಆದಾಗ್ಯು ಬೃಹಸ್ಪತಿಗಳು ಬೇಜವಾಬ್ದಾರಿ ಹೇಳಿ ನೀಡುತ್ತಿರುವುದು ಅವರ ಕೀಳು ಮಟ್ಟವನ್ನು ತೋರಿಸುತ್ತಿದೆ ಎಂದು ಸಿದ್ದರಾಮಯ್ಯ, ಹೆಚ್ಡಿಕೆ ವಿರುದ್ಧ ಸಚಿವ ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದರು.
ಕುದೂರು (ಜ.3) : ಕೆಎಂಎಫ್ ಅನ್ನು ಗುಜರಾತಿನ ಅಮುಲ್ ಸಂಸ್ಥೆಯೊಂದಿಗೆ ವಿಲೀನದ ಯಾವುದೇ ಚಿಂತನೆ ನಡೆದಿಲ್ಲವೆಂದು ಮುಖ್ಯಮಂತ್ರಿಗಳೇ ಸ್ಪಷ್ಟವಾಗಿ ಹೇಳಿದ್ದಾರೆ. ಆದಾಗ್ಯು ಬೃಹಸ್ಪತಿಗಳು ಬೇಜವಾಬ್ದಾರಿ ಹೇಳಿ ನೀಡುತ್ತಿರುವುದು ಅವರ ಕೀಳು ಮಟ್ಟವನ್ನು ತೋರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದರು.
ಮಾಗಡಿ(Magadi) ತಾಲೂಕು ತಿಪ್ಪಸಂದ್ರ ಹೋಬಳಿಯ ಸಂಕಿಘಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ ಮೇಲೂ ಬೇಜವಾಬ್ದಾರಿ ಹೇಳಿಕೆ ನೀಡಿ, ಯಾರೂ ಕೀಳು ಮಟ್ಟದ ರಾಜಕೀಯ ಮಾಡಬಾರದು ಎಂದರು.
ಸಚಿವ ಅಶ್ವತ್ಥ್ ನಾರಾಯಣ ಮಾದರಿ ಪ್ರತಿನಿಧಿ: ಬಿ.ಎಸ್.ಯಡಿಯೂರಪ್ಪ
ರಾಮದೇವರ ಬೆಟ್ಟ(Ramadevara betta )ಅಭಿವೃದ್ಧಿ ಬಗ್ಗೆ ಕುಮಾರಸ್ವಾಮಿ(HD Kumaraswamy) ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಸಚಿವರು, ಶ್ರೀರಂಗ ನೀರಾವರಿ ಯೋಜ(Sriranga irregation project)ನೆಗೆ ನಮ್ಮ ಸರ್ಕಾರವು 175 ಕೋಟಿ ರುಪಾಯಿ ಕೊಟ್ಟಿದೆ. ಕುಮಾರಸ್ವಾಮಿ ಕೈಯಲ್ಲಿ 20 ವರ್ಷವಾದರೂ ಈ ಕೆಲಸ ಆಗುತ್ತಿರಲಿಲ್ಲ. ಮಂಚನಬೆಲೆ ಯೋಜನೆಯ ಕತೆಯೂ ಅಷ್ಟೆಎಂದು ಕಿಡಿಕಾರಿದ ಸಚಿವರು, ಕುಮಾರಸ್ವಾಮಿರವರು ಕೆಂಪೇಗೌಡರ ಜಪ ಮಾಡುತ್ತಿದ್ದರು ಅಷ್ಟೆ. ಕೆಂಪಾಪುರದಲ್ಲಿ ಕೆಂಪೇಗೌಡರ ಸಮಾಧಿಗೆ ಪೂಜೆ ಮಾಡಿ ಹೋದವರು ನಾಪತ್ತೆಯಾದರು. ಸಮಾಧಿ ಅಭಿವೃದ್ಧಿಗೆ ಒಂದು ಗುಂಟೆ ಜಮೀನನ್ನು ಸಹ ಸ್ವಾಧೀನ ಪಡಿಸಿಕೊಳ್ಳುವುದು ಅವರಿಗೆ ಸಾಧ್ಯವಾಗಲಿಲ್ಲ. ಆದರೆ, ಬಿಜೆಪಿ ಸರ್ಕಾರ(BJP govt) ಕೆಂಪೇಗೌಡರ ನೆನಪನ್ನು ಚಿರಸ್ಥಾಯಿಯಾಗಿ ಮಾಡಿದೆ ಎಂದು ಹೇಳಿದರು.
ಕೆಂಪೇಗೌಡರ ಹೆಸರು ಹೇಳಿದರೆ ವಿನಾಃ ಒಂದು ನಯಾಪೈಸೆ ಕೆಲಸ ಮಾಡಲಿಲ್ಲ. ಮಾಗಡಿ ಚತುಷ್ಪಥ ರಸ್ತೆ ಅಭಿವೃದ್ಧಿ ಏನಾಯಿತು ಎಂದು ಪ್ರಶ್ನಿಸಿದ ಸಚಿವರು, 65 ಕೋಟಿ ರುಪಾಯಿ ವೆಚ್ಚದಲ್ಲಿ ಜಿಟಿಟಿಸಿ, ಸಂಸ್ಕೃತ ವಿವಿ ಕ್ಯಾಂಪಸ್, ಕುದೂರಿನಲ್ಲಿ ಕೈಗಾರಿಕಾ ಪ್ರದೇಶ ರಚನೆ, ಮಾಗಡಿ - ಸೋಮವಾರಪೇಟೆ ಚತುಷ್ಪಥ ರಸ್ತೆ ಇವೆಲ್ಲವೂ ಬಿಜೆಪಿ ಸರ್ಕಾರದ ಜಿಲ್ಲೆಗೆ ಕೊಟ್ಟಿರುವ ಯೋಜನೆಗಳಾಗಿವೆ. ಇದನ್ನು ಕುಮಾರಸ್ವಾಮಿ ನೆನಪಿಸಿಕೊಳ್ಳಬೇಕು ಎಂದು ಕುಟುಕಿದರು.
ಸಿದ್ರಾಮುಲ್ಲಾಖಾನ್ ಅಂತ ಹೆಸರು ಬದಲಿಸಿ: ಸಚಿವ ಅಶ್ವತ್ಥ್ ನಾರಾಯಣ
ಬಿಜೆಪಿ ಸರ್ಕಾರ ಎಲ್ಲರಿಗೂ ಉದ್ಯೋಗ ಸಿಗುವ ಕೆಲಸ ಮಾಡುತ್ತಿದ್ದೇವೆ. ಒಬ್ಬರಿಗೆ ಒಂದು ಉದ್ಯೋಗ ಕೊಡಿಸುವ ಕೆಲಸವನ್ನು ಅವರು ಮಾಡಲಿಲ್ಲ. ಆದರೆ, ಕೋಟಿ ಜನರಿಗೆ ಕೌಶಲ್ಯ ಕೊಡಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ. ಶಿಕ್ಷಣ, ಅರೋಗ್ಯ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ. ಅಭಿವೃದ್ಧಿ ಅಂದರೆ ಮೂಲಭೂತವಾಗಿ ಏನು ಬೇಕೊ ಅದನ್ನು ಕೊಡುವುದಾಗಿದೆ. ರಾಜಕೀಯ ಮಾಡುವುದು ಕೇವಲ ಲಾಭಕ್ಕಾಗಿ ಅಲ್ಲ. ರಾಜಕೀಯ ಮಾಡುವುದು ಅಭಿವೃದ್ಧಿಗಾಗಿ ಎಂಬುದನ್ನು ವಿರೋಧಿಗಳು ತಿಳಿದುಕೊಳ್ಳಬೇಕು ಎಂದು ಅಶ್ವತ್ಥ ನಾರಾಯಣ ಸಲಹೆ ನೀಡಿದರು.