Uttara Kannada: ಸಾವಿರಾರು ಬೆಂಬಲಿಗರೊಂದಿಗೆ ಸಾಮೂಹಿಕ ರಾಜೀನಾಮೆ ನೀಡಿದ ಘೋಟ್ನೇಕರ್: ಕಾಂಗ್ರೆಸ್ ಪಾಳಯದಲ್ಲಿ ನಡುಕ

By Govindaraj SFirst Published Jan 2, 2023, 11:41 PM IST
Highlights

ಜಿಲ್ಲೆಯಲ್ಲಿ ಹೈಪ್ರೊಫೈಲ್ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಹಳಿಯಾಳದಲ್ಲಿ ಗುರು- ಶಿಷ್ಯರ ನಡುವಿನ ಕಾಳಗ ಇಂದಿನಿಂದ ಬಹಿರಂಗವಾಗಿಯೇ ಘೋಷಣೆಯಾಗಿದೆ. ಮಾಜಿ ಸಚಿವ ಹಾಗೂ ಶಾಸಕ ಆರ್.ವಿ. ದೇಶ್‌ಪಾಂಡೆಯವರ ಬಲಗೈ ಬಂಟನೆಂದೇ ಗುರುತಿಸಿಕೊಂಡಿದ್ದ ಎಸ್.ಎಲ್.ಘೋಟ್ನೇಕರ್, ತನ್ನ ಸಾವಿರಾರು ಕಾರ್ಯಕರ್ತರ ಜತೆಗೆ ಇಂದು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ‌ ನೀಡಿದ್ದಾರೆ.

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಜ.02): ಜಿಲ್ಲೆಯಲ್ಲಿ ಹೈಪ್ರೊಫೈಲ್ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಹಳಿಯಾಳದಲ್ಲಿ ಗುರು- ಶಿಷ್ಯರ ನಡುವಿನ ಕಾಳಗ ಇಂದಿನಿಂದ ಬಹಿರಂಗವಾಗಿಯೇ ಘೋಷಣೆಯಾಗಿದೆ. ಮಾಜಿ ಸಚಿವ ಹಾಗೂ ಶಾಸಕ ಆರ್.ವಿ. ದೇಶ್‌ಪಾಂಡೆಯವರ ಬಲಗೈ ಬಂಟನೆಂದೇ ಗುರುತಿಸಿಕೊಂಡಿದ್ದ ಎಸ್.ಎಲ್.ಘೋಟ್ನೇಕರ್, ತನ್ನ ಸಾವಿರಾರು ಕಾರ್ಯಕರ್ತರ ಜತೆಗೆ ಇಂದು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ‌ ನೀಡಿದ್ದಾರೆ. ಇದರಿಂದ ಕಾಂಗ್ರೆಸ್ ಪಾಳಯದಲ್ಲಿ ಕೊಂಚ ನಡುಕವೂ ಪ್ರಾರಂಭವಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. 

ಹೌದು! 90ರ ದಶಕದಿಂದ ಈವರೆಗೆ ಎಂಟು ಬಾರಿ ವಿಧಾನಸಭೆಗೆ ಪ್ರವೇಶಿಸಿದ ಕಾಂಗ್ರೆಸ್‌ನ ಹಿರಿಯ ಧುರೀಣ ಆರ್.ವಿ. ದೇಶಪಾಂಡೆ ಅವರ ಶಿಷ್ಯ, ವಿಧಾನಸಭಾ ಪರಿಷತ್ ಮಾಜಿ ಸದಸ್ಯ ಎಸ್.ಎಲ್‌. ಘೋಟ್ನೇಕರ್ ಇಂದು ಬಹಿರಂಗವಾಗಿಯೇ ತನ್ನ ಗುರುವಿನ ವಿರುದ್ಧ ಯುದ್ಧ ಘೋಷಣೆ ಮಾಡಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲಿ ಅರ್ಜುನನಂತೆ ಹೋರಾಡುವ ಆರ್. ವಿ. ದೇಶಪಾಂಡೆ ಅವರ ರಥದ ಸಾರಥಿಯಾಗಿ ವಿಧಾನಪರಿಷತ್ ಮಾಜಿ ಸದಸ್ಯ, ಮರಾಠ ಸಮುದಾಯದ ಮುಖಂಡ ಎಸ್.ಎಲ್ ಘೋಟ್ನೆಕರ್ ಇರುತ್ತಿದ್ದರು. ಆದರೆ, ಈ ಬಾರಿ ದೇಶಪಾಂಡೆಯವರ ರಥ ಇಳಿದಿರುವ ಘೋಟ್ನೆಕರ್ ಅವರ ಕಾಂಗ್ರೆಸ್‌ನಿಂದ ದೂರ ಸರಿದಿದ್ದಾರೆ. 

ಸಾಹಿತ್ಯ ಸಮ್ಮೇಳನದ ವಸತಿ ವ್ಯವಸ್ಥೆ ಮಾಡಿರುವ ಶಾಲಾ-ಕಾಲೇಜುಗಳಿಗೆ ಜ.4ರಿಂದಲೇ ರಜೆ ಘೋಷಣೆ

ಈ ಹಿನ್ನೆಲೆಯಲ್ಲಿ ಇಂದು ಹಳಿಯಾಳದಲ್ಲಿ ಕಾರ್ಯಕ್ರಮ ಆಯೋಜಿಸಿದ ಘೋಟ್ನೇಕರ್, ಸಾಮೂಹಿಕವಾಗಿ ತನ್ನ ಸಾವಿರಾರು ಅನುಯಾಯಿಗಳ ಜತೆ ಕಾಂಗ್ರೆಸ್‌ಗೆ ರಾಜೀನಾಮೆ‌ ನೀಡಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್ ಜತೆ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯ ಮುಖಂಡರ ಜತೆ ಮಾತನಾಡಿದ್ರೂ ಏನೂ ಪ್ರಯೋಜನವಾಗಿಲ್ಲ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಂತೂ ಖಂಡಿತ. ಬಿಜೆಪಿಯಿಂದ ಆಫರ್ ಬಂದಲ್ಲಿ ಮುಂದೆ ನೋಡುವ ಏನಾಗುತ್ತೆಂತಾ. ಚುನಾವಣೆಯಲ್ಲಿ ಸ್ಪರ್ಧಿಸುವುದು ಹೌದಾದ್ರೂ, ಗೆಲುವಿನ ಬಗ್ಗೆ ಹಾಗೂ ಬಿಜೆಪಿ ಸೇರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. 

ಈ ಮೂಲಕ ಪರೋಕ್ಷವಾಗಿ ಬಿಜೆಪಿ ಸೇರುವ ಒಲವು ವ್ಯಕ್ತಪಡಿಸಿದ್ದಾರೆ. ಎಸ್.ಎಲ್. ಘೋಟ್ನೇಕರ್ ತನ್ನ ಸಾವಿರಾರು ಬೆಂಬಲಿಗರೊಂದಿಗೆ ಸಾಮೂಹಿಕ‌ ರಾಜೀನಾಮೆ‌ ನೀಡಿರುವುದು ಕಾಂಗ್ರೆಸ್ ಪಾಳಯದಲ್ಲಿ ಕೊಂಚ ನಡುಕ ಮೂಡಿಸಿದೆ. ಆದರೂ, ಘೋಟ್ನೇಕರ್ ಹಾಗೂ‌ ಅನುಯಾಯಿಗಳ ರಾಜೀನಾಮೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮಾಜಿ ಸಚಿವ, ಶಾಸಕ ಆರ್.ವಿ. ದೇಶ್‌ಪಾಂಡೆ ಹೇಳಿದ್ದಾರೆ. ಘೋಟ್ನೇಕರ್ ಕಾಂಗ್ರೆಸ್ ಬಿಟ್ಟು ಹೋಗುವಂತೆ ಯಾವತ್ತೂ ಹೇಳಲ್ಲ. ಅವರು ಒಬ್ಬ ಉತ್ತಮ ಕಾರ್ಯಕರ್ಯ.

ಆದರೆ, ಮೊದಲೇ ಪಕ್ಷ ಬಿಡುವ ಸೂಚನೆ ನೀಡಿದ್ದರಿಂದ ನಾನೂ‌ ನನ್ನ‌ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಹಳಿಯಾಳದಲ್ಲಿ 1.80 ಲಕ್ಷ ಕಾಂಗ್ರೆಸ್ ಮತದಾರರಿದ್ದಾರೆ. ಹಳಿಯಾಳ ಕಾಂಗ್ರೆಸ್‌ನ ಭದ್ರ ಬುನಾದಿಯಾಗಿದ್ದು, ನಾನಲ್ಲದೇ, ಬೇರೆಯವರು ನಿಂತರೂ ಇಲ್ಲಿ ಗೆಲ್ಲುತ್ತಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಮುಖ್ಯವಲ್ಲ, ಜನರ ಆಶೀರ್ವಾದ ಪಡೆಯುವುದು ಮುಖ್ಯ. ಮುಂದಿನ ಬಾರಿಯೂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಬಿಜೆಪಿ ಜನಪರ ಕೆಲಸ ಮಾಡದ ಕಾರಣ ರಾಜ್ಯದಲ್ಲಿ ಕಾಂಗ್ರೆಸ್ ಪರ ಒಲವು ಹೆಚ್ಚಿದೆ. ಪುತ್ರ ಪ್ರಶಾಂತ್ ದೇಶ್‌ಪಾಂಡೆಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. 

Vijayapura: ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಸ್ವಾಮೀಜಿ ನಿಧನ: ಯಾರು ಈ ಸಂತ ಸಿದ್ಧೇಶ್ವರ ಸ್ವಾಮೀಜಿ?

ಈ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ತಾನು‌ ಮತ್ತೆ ಗೆದ್ದು ಬರುವುದಾಗಿ ಶಾಸಕ ಆರ್.ವಿ. ದೇಶ್‌ಪಾಂಡೆ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಹಳಿಯಾಳದಲ್ಲಿ ಗುರು ಶಿಷ್ಯರ ನಡುವಿನ ಜಗಳ‌ ಇದೀಗ‌ ಬಹಿರಂಗವಾಗಿಯೇ ಯುದ್ಧಕ್ಕೆ ಕಾರಣವಾಗಿದೆ. ಆರ್‌ವಿಡಿ ಕಾಂಗ್ರೆಸ್‌ನ ಅಭ್ಯರ್ಥಿಯಾಗೋದು ಪಕ್ಕಾ ಆಗಿರೋದ್ರಿಂದ ಘೋಟ್ನೇಕರ್ ಪರೋಕ್ಷವಾಗಿ ಬಿಜೆಪಿ ಪರ ಒಲವು ತೋರಿಸುತ್ತಿದ್ದಾರೆ. ಕಾಂಗ್ರೆಸ್‌ ಬಿಟ್ಟು ಬಂದ ಘೋಟ್ನೇಕರ್‌ಗೆ ಬಿಜೆಪಿ ಮಣೆ ಹಾಕುತ್ತಾ ಅಥವಾ ಗುರು- ಶಿಷ್ಯರ ಸ್ಪರ್ಧೆಯನ್ನೇ ಲಾಭವನ್ನಾಗಿಸುತ್ತಾ ಎಂದು ಕಾದು ನೋಡಬೇಕಷ್ಟೇ.

click me!