ಮಹಾ ಬಿಕ್ಕಟ್ಟು ವಿಚಾರ ಸುವರ್ಣ ನ್ಯೂಸ್‌ನಿಂದ ನೋಡಿ ತಿಳಿದುಕೊಳ್ಳುತ್ತಿದ್ದೇನೆ: ಸಚಿವ ಸಿ.ಸಿ.ಪಾಟೀಲ್‌

By Govindaraj S  |  First Published Jun 25, 2022, 11:46 PM IST

ಮಹಾ ವಿಕಾಸ್ ಅಘಾಡಿ ಅಭದ್ರವಾಗಿರೋದು ಶಿವಸೇನೆ ಪಕ್ಷದ ಆಂತರಿಕ ವಿಚಾರ. ಉದ್ಧವ ಠಾಕ್ರೆ ಯಾರಿಗೂ ಅಭ್ಯ ಆಗ್ತಿರಲಿಲ್ಲ ಅನ್ನೋ ಕಾರಣಕ್ಕೆ ಸ್ವಪಕ್ಷದ ನಾಯಕರೇ ಅಸಮಾಧಾನಗೊಂಡಿದ್ದಾರೆ ಎಂದು ಸಚಿವ ಸಿಸಿ ಪಾಟೀಲ್ ಹೇಳಿದರು.


ಗದಗ (ಜೂ.25): ಮಹಾ ವಿಕಾಸ್ ಅಘಾಡಿ ಅಭದ್ರವಾಗಿರೋದು ಶಿವಸೇನೆ ಪಕ್ಷದ ಆಂತರಿಕ ವಿಚಾರ. ಉದ್ಧವ ಠಾಕ್ರೆ ಯಾರಿಗೂ ಅಭ್ಯ ಆಗ್ತಿರಲಿಲ್ಲ ಅನ್ನೋ ಕಾರಣಕ್ಕೆ ಸ್ವಪಕ್ಷದ ನಾಯಕರೇ ಅಸಮಾಧಾನಗೊಂಡಿದ್ದಾರೆ ಎಂದು ಸಚಿವ ಸಿಸಿ ಪಾಟೀಲ್ ಹೇಳಿದರು. ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಹಾರಾಷ್ಟ್ರ ಅಘಾಡಿ ಸರ್ಕಾರ ಅತಂತ್ರಕ್ಕೆ ಬಿಜೆಪಿ ಕಾರಣ ಎನ್ನುತ್ತಿದ್ದಾರೆ. ಆದರೆ ಸಚಿವ ಸಂಪುಟದ ಸಹೋದ್ಯೋಗಿಗಳು ಸಿಎಂ ಭೇಟಿಯಾಗಲು ದಿನಗಟ್ಟಲೇ ಕಾಯಬೇಕು ಅನ್ನೋದನ್ನ ಸ್ವಪಕ್ಷದ ಸಚಿವ ಶಾಸಕರೇ ಹೇಳಿದ್ದಾರೆ.‌ 

ಮಹಾರಾಷ್ಟ್ರದೊಂದಿಗೆ ನೇರ ಸಂಪರ್ಕದಲ್ಲಿ ನಾನಿಲ್ಲ. ಆದ್ರೆ ಮಧ್ಯಮದಲ್ಲಿ ನೋಡಿದ್ದೇನೆ. ಫ್ಯಾಮಿಲಿ ಕೇಂದ್ರಿಕೃತ ಅಧಿಕಾರವಾಗಿತ್ತು ಅನ್ನೋದು ಸುದ್ದಿಯ ಸಾರಾಂಶವಾಗಿದೆ. ರಾಜಕೀಯ ವಿದ್ಯಮಾನಗಳನ್ನ ಸುವರ್ಣ ನ್ಯೂಸ್‌ನಲ್ಲಿ ಗಮನಿಸಿದ್ದೇ‌ನೆ. ಏಕನಾಥ ಶಿಂಧೆ ಅವರು ಬಾಳಾ ಸಾಹೇಬರ ಶಿಷ್ಯರಾಗಿದ್ದರು ಅನ್ನೋದನ್ನ ಕೇಳಿದ್ದೇನೆ.  ಮಹಾರಾಷ್ಟ್ರ ಸರ್ಕಾರ ಅಂತಂತ್ರ ವಿಷಯ ಬಿಜೆಪಿಗೆ ಸಂಬಂಧಿಸಿದ್ದಲ್ಲ ಅಂತಾ ಸ್ಪಷ್ಟಪಡಿಸಿದರು. ಸಚಿವ ಉಮೇಶ್ ಕತ್ತಿಯವರ ಪ್ರತ್ಯೇಕ ಉತ್ತರ ಕರ್ನಾಟಕ ಹೇಳಿಕೆ ವಿಚಾರಕ್ಕೆ ಉತ್ತರಿಸಿ, ನಾವೆಲ್ಲ ಅಖಂಡ ಕರ್ನಾಟಕದ ಪರವಾಗಿದ್ದವರು. ಕರ್ನಾಟಕದ ಏಕೀಕರಣಕ್ಕಾಗಿ ಸಾಕಷ್ಟು ಜನ ಹೋರಾಡಿದ್ದಾರೆ. 

Latest Videos

undefined

ಗದಗ: ಭೀಷ್ಮ ಕೆರೆ ಆವರಣದ 101 ಅಕ್ರಮ ಕಟ್ಟಡ ಮಾಲೀಕರಿಗೆ ನೊಟೀಸ್‌..!

ಅಖಂಡ ಕರ್ನಾಟಕ ಉಳಿಯಬೇಕು ಎಂಬುದು ನಮ್ಮೆಲ್ಲರ ಆಸೆ. ಕತ್ತಿಯವರು ವಯಕ್ತಿಕವಾಗಿ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಆದ್ರೆ, ನಾವೆಲ್ಲ ಅಖಂಡ ಕರ್ನಾಟಕದ ಪರವಾಗಿದ್ದೇವೆ. ಉತ್ತರ ಕರ್ನಾಟಕದ ಸಿಎಂ ನನ್ನ ಮಗ ಅಂತಾ ಉಮೇಶ್ ಕತ್ತಿ ಅವರು ಹೇಳಿಕೆ ನೀಡಿದ್ದರು ಅನ್ನೋ ಪ್ರಶ್ನೆಗೆ, ಉತ್ತರ ಕರ್ನಾಟಕ ರಾಜ್ಯವೇ ಅಗಿಲ್ಲ ಸಿಎಂ ಆಗೋದು ಎಲ್ಲಿಂದ ಬಂತು. ಅಖಂಡ ಕರ್ನಾಟಕಕ್ಕೆ ಬಸವರಾಜ್ಯ ಬೊಮ್ಮಾಯಿ ಮುಖ್ಯಮಂತ್ರಿಗಳಿದ್ದಾರೆ. ಮುಖ್ಯಮಂತ್ರಿಗಳ ಕುರ್ಚಿ ಖಾಲಿ ಇಲ್ಲ. ಉತ್ತರ ಕರ್ನಾಟಕಕ್ಕೆ ಸಿಎಂ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದರು.  ಉಮೇಶ್ ಕತ್ತಿಯವರು ನನ್ನ ಆತ್ಮೀಯ ಸ್ನೇಹಿತರು. ಆದ್ರೆ ಆವರ ಹೇಳಿಕೆ ಸರಿಯಾದುದ್ದಲ್ಲ ಎಂದು ಸಚಿವ ಸಿಸಿ ಪಾಟೀಲ ಹೇಳಿದರು.

ಇನ್ನೆರೆಡು ದಿನದಲ್ಲಿ ಶಿವಸೇನೆ ಖಾಲಿಯಾಗುತ್ತೆ: ಶಿವ ಸೇನೆಯ 38 ಬಂಡಾಯ ಶಾಸಕರು ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ಮಧ್ಯೆ ಬಂಡಾಯ ಶಾಸಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಅನ್ನೋ ಮಾತುಗಳು ಹರಿದಾಡ್ತಿವೆ. ಇನ್ನು ಈ ಬಗ್ಗೆ ಗದಗನಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇನ್ನೆರಡು ದಿನ ತಡೆದ್ರೆ ಉದ್ಧವ್ ಠಾಕ್ರೆ, ಅವ್ರ ಪುತ್ರ ಆದಿತ್ಯ ಠಾಕ್ರೆ ಇಬ್ಬರನ್ನ ಬಿಟ್ಟು ಎಲ್ಲರೂ ಪಕ್ಷ ಬಿಡುತ್ತಾರೆ ಅಂತಾ ಲೇವಡಿ ಮಾಡಿದರು. ಮಹಾ ಅಘಾಡಿ ಅಸ್ಥಿರತೆಗೆ ಬಿಜೆಪಿ ಕಾರಣವಾಗಿ ಅನ್ನೋ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು, ಹೊರಗಿನವರು ಷಡ್ಯಂತ್ರ ರೂಪಿಸಿ ಇಡೀ ಪಾರ್ಟಿ ತೆಗೆದುಕೊಂಡು ಹೋಗುವುದಕ್ಕೆ ಆಗಲ್ಲ. ಅವರ ವಿಚಾರಧಾರೆ ಯಾವುದು ಅನ್ನೋದು ಅವರಿಗೆ ಗೊತ್ತಿಲ್ಲ ಹೀಗಾಗಿ ಶಿವ ಸೇನೆಗೆ ಈ ಪರಿಸ್ಥಿತಿ ಬಂದಿದೆ ಎಂದರು. 

ಅಗ್ನಿಪಥ ಹೋರಾಟದ ಹಿಂದೆ ಕಾಂಗ್ರೆಸ್‌: ಸಚಿವ ಶ್ರೀರಾಮುಲು

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಶಿವ ಸೇನೆಯ ಒಳಗಿನ ಜಗಳ ಕಾರಣ. ಶಿವಸೇನೆ ಎಂಎಲ್‌ಎಗಳು ಬರೆದಿರುವ ಪತ್ರ ಸಾಕ್ಷಿ ಈ ವಿದ್ಯಮಾನಕ್ಕೆ ಸಾಕ್ಷಿ.. ಲೋಕ ಸಭೆ ಹಾಗೂ ಮಹಾರಾಷ್ಟ್ರ ಪ್ರವಾಸದಲ್ಲಿ ಭೇಟಿಯಾದಾಗ ಕೆಲ ನಾಯಕರು ನಮ್ಮ ಬಳಿ ಹೇಳಿಕೊಂಡಿದ್ದಿದೆ. ಅದು ಅಸ್ವಾಭಾವಿಕ ಮೈತ್ರಿ ಅಂತಾ ಹೇಳಿಕೊಂಡಿದ್ದರು. ಪರಿಣಾಮವೇ ಇವತ್ತು ಬಂಡಾಯ ಎದ್ದಿದ್ದಾರೆ ಅಂತಾ ಹೇಳಿದರು. ಎನ್‌ಸಿಪಿ ಹಾಗೂ ಕಾಂಗ್ರೆಸ್ ವಿರುದ್ಧ ಶಿವಸೇನೆ ಸಂಸ್ಥಾಪಕ ನಾಯಕ ಬಾಳಾ ಸಾಹೇಬರು ಹೋರಾಟ ಮಾಡಿದವರು. ಆದ್ರೆ, ಬಾಳ ಸಾಹೇಬರ ತೀರಿಹೋದ ಬಳಿಕ ಅಧಿಕಾರಕ್ಕಾಗಿ ಎನ್‌ಸಿಪಿ, ಕಾಂಗ್ರೆಸ್ ಜೊತೆ ಶಿವ ಸೇನೆ ಸೇರಿತ್ತು.

click me!