ಪ್ರತ್ಯೇಕ ರಾಜ್ಯದ ಪರವಾಗಿ ಧ್ವನಿ ಎತ್ತಿರುವ ಸಚಿವ ಉಮೇಶ್ ಕತ್ತಿ ಬುದ್ಧಿ ಇಲ್ಲದ ಅವಿವೇಕಿ. ಚುನಾವಣೆ ಹತ್ತಿರ ಬಂದಾಗಲೆಲ್ಲಾ ಇಂತಹ ಬೇಜವಾಬ್ದಾರಿ ಕೂಗು ಶುರು ಮಾಡುತ್ತಾರೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು (ಜೂ.25): ಪ್ರತ್ಯೇಕ ರಾಜ್ಯದ ಪರವಾಗಿ ಧ್ವನಿ ಎತ್ತಿರುವ ಸಚಿವ ಉಮೇಶ್ ಕತ್ತಿ ಬುದ್ಧಿ ಇಲ್ಲದ ಅವಿವೇಕಿ. ಚುನಾವಣೆ ಹತ್ತಿರ ಬಂದಾಗಲೆಲ್ಲಾ ಇಂತಹ ಬೇಜವಾಬ್ದಾರಿ ಕೂಗು ಶುರು ಮಾಡುತ್ತಾರೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿಗೆ ಅರಣ್ಯ ಇಲಾಖೆಯಂತ ಬಹುಮುಖ್ಯ ಖಾತೆ ಇದ್ದರೂ ಕೆಲಸ ಇಲ್ಲದಂತೆ ಇದ್ದಾನೆ. ಕತ್ತಿ ಮುಖ್ಯಮಂತ್ರಿ ಆಗುವ ಆಸೆ ಇದ್ದರೆ ಇಲ್ಲೇ ಆಗಲಿ. ಅದಕ್ಯಾಕೆ ಪ್ರತ್ಯೇಕ ರಾಜ್ಯ ಬೇಕು?
ಉತ್ತರ ಕರ್ನಾಟಕ ಅಭಿವೃದ್ಧಿ ಆಗಲಿಲ್ಲ ಅಂದ್ರೆ ಅದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಅಧಿಕಾರದಲ್ಲಿ ಇರುವವರು ನೀವೇ ತಾನೆ? ಏನು ಆಗಿದೆ, ಏನು ಆಗಿಲ್ಲ ಎಂಬ ಪಟ್ಟಿನಿಮ್ಮ ಬಳಿಯೇ ಇರುತ್ತದೆ ನೋಡಿಕೊಳ್ಳಬೇಕು. ಲಕ್ಷಾಂತರ ಜನರ ಹೋರಾಟದ ಫಲವಾಗಿ ಅಖಂಡ ಕರ್ನಾಟಕ ಸೃಷ್ಟಿಯಾಗಿದೆ. ಇದನ್ನು ಪದೇ ಪದೇ ಒಡೆಯುವ ಮಾತನಾಡಬೇಡಿ ಎಂದರು.
undefined
ಮೈಸೂರಲ್ಲದೇ ಮಂಡ್ಯದಲ್ಲೂ ಪ್ರತಾಪ್ ಆಕ್ಟೀವ್, ಕುತೂಹಲ ಮೂಡಿಸಿದ ಸಿಂಹ ನಡೆ
ಇದು ದಪ್ಪ ಚರ್ಮದ ಸರ್ಕಾರ- ಕಿಡಿ: ಪರಿಷ್ಕೃತ ಪಠ್ಯಕ್ರಮ ವಾಪಸ್ ಪಡೆಯುವುದಿಲ್ಲ ಎಂಬ ಸರ್ಕಾರದ ನಿಲುವಿಗೆ ಪ್ರತಿಕ್ರಿಯಿಸಿದ ಅವರು, ಇದು ದಪ್ಪ ಚರ್ಮದ ಸರ್ಕಾರ. ಅವರಿಗೆ ಕಣ್ಣು ಕಾಣುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಜನಾಭಿಪ್ರಾಯಕ್ಕೆ ಈ ಸರ್ಕಾರ ಯಾವತ್ತೂ ಮನ್ನಣೆ ನೀಡಿಲ್ಲ. ಇದು ಕೋಮುವಾದದ ಅಫೀಮನ್ನು ಪಠ್ಯಪುಸ್ತಕದಲ್ಲಿ ಸೇರಿಸುವುದು ಅವರ ಉದ್ದೇಶ. ಇದಕ್ಕಾಗಿ ಯಾರ ಮಾತನ್ನೂ ಕೇಳುತ್ತಿಲ್ಲ ಎಂದು ಕಿಡಿಕಾರಿದರು. ಈ ಸರ್ಕಾರಕ್ಕೆ ಅಂಬೇಡ್ಕರ್, ಬಸವಣ್ಣ, ಕುವೆಂಪು, ಕನಕದಾಸರು ಯಾರ ಮೇಲೂ ಗೌರವ ಇಲ್ಲ. ಇದು ಪಠ್ಯ ಪರಿಷ್ಕರಣೆಯ ಮೂಲಕ ಮತ್ತೆ ಸಾಬೀತಾಗಿದೆ. ಬರಗೂರು ಸಮಿತಿ ತಪ್ಪು ಮಾಡಿಲ್ವಾ ಎಂದು ಈಗ ಹೇಳುವುದು ಸಮರ್ಥನಿಯವಲ್ಲ ಎಂದರು.
ಬರಿ ಬೊಗಳೆ ಬಿಟ್ಟು ಓಡಾಡುವವರ ಜೊತೆ ಏನು ಚರ್ಚೆ ಮಾಡೋದು?: ಮೈಸೂರಿನ ಅಭಿವೃದ್ಧಿ ಚರ್ಚೆಗೆ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಬರಲಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಮಾಡಿರೋ ಅಭಿವೃದ್ಧಿ ಕಣ್ಣಿಗೆ ಕಾಣುತ್ತಿದೆ. ಏನೂ ಕೆಲಸ ಮಾಡದೇ ಬರೀ ಬೊಗಳೆ ಬಿಟ್ಟುಕೊಂಡು ಅವರು ಓಡಾಡುತ್ತಿದ್ದಾರೆ. ಬರಿ ಬೊಗಳೆ ಬಿಟ್ಟು ಓಡಾಡುವವರ ಜೊತೆ ಏನು ಚರ್ಚೆ ಮಾಡೋದು? ಅವರು ಏನಾದರೂ ಅಭಿವೃದ್ಧಿ ಮಾಡಿದ್ದರೆ ತಾನೆ ಚರ್ಚೆ ಮಾಡೋದು. ಸುಮ್ಮನೆ ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಾ ಕೂತಿದ್ದಾರೆ. ನಾವು ಜಿಲ್ಲಾಸ್ಪತ್ರೆ ಕಟ್ಟದಿದ್ದರೆ ಕೋವಿಡ್ ಸಂದರ್ಭದಲ್ಲಿ ರೋಗಿಗಳನ್ನು ಎಲ್ಲಿ ಮಲಗಿಸುತ್ತಿದ್ದರು? ಇಂತಹ ನೂರು ಕೆಲಸ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು.
ಪಕ್ಷಾಂತರಿಗಳು 10 ವರ್ಷ ಚುನಾವಣೆಗೆ ನಿಲ್ಲಬಾರದು: ಸಿದ್ದು
ಮುರ್ಮು ಆಯ್ಕೆ ಸಾಮಾಜಿನ ನ್ಯಾಯದ ಸಂಕೇತವಲ್ಲ: ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಸಾಮಾಜಿಕ ನ್ಯಾಯದ ಸಂಕೇತವಲ್ಲ. ದ್ರೌಪದಿ ಮುರ್ಮು ಅವರು ಬಿಜೆಪಿಯಲ್ಲಿ ಹಲವು ಘಟಕಗಳಲ್ಲಿ ಕೆಲಸ ಮಾಡಿದ್ದಾರೆ. ಜಾತಿ ನೋಡಿ ಅವರಿಗೆ ಸ್ಥಾನ ಕೊಡುವುದಾದರೆ ಅದು ತಪ್ಪು, ಅವರ ಕಾರ್ಯ ವೈಖರಿ ನೋಡಿ ಸ್ಥಾನ ಕೊಡಬೇಕು. ಬಿಜೆಪಿ ಇದರಲ್ಲೂ ಜಾತಿ ನಮೂದಿಸುತ್ತಾ ಸಂವಿಧಾನಕ್ಕೆ ಅಗೌರವ ತೋರುತ್ತಿದೆ ಎಂದು ಅವರು ಕಿಡಿಕಾರಿದರು.