Gadag: ಇನ್ನೆರೆಡು ದಿನದಲ್ಲಿ ಶಿವಸೇನೆ ಖಾಲಿಯಾಗುತ್ತೆ: ಪ್ರಹ್ಲಾದ್ ಜೋಶಿ

By Govindaraj SFirst Published Jun 25, 2022, 10:06 PM IST
Highlights

ಶಿವ ಸೇನೆಯ 38 ಬಂಡಾಯ ಶಾಸಕರು ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ಮಧ್ಯೆ ಬಂಡಾಯ ಶಾಸಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಅನ್ನೋ ಮಾತುಗಳು ಹರಿದಾಡ್ತಿವೆ. ಇನ್ನು ಈ ಬಗ್ಗೆ ಗದಗನಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇನ್ನೆರಡು ದಿನ ತಡೆದ್ರೆ ಉದ್ಧವ್ ಠಾಕ್ರೆ, ಅವ್ರ ಪುತ್ರ ಆದಿತ್ಯ ಠಾಕ್ರೆ ಇಬ್ಬರನ್ನ ಬಿಟ್ಟು ಎಲ್ಲರೂ ಪಕ್ಷ ಬಿಡುತ್ತಾರೆ ಅಂತಾ ಲೇವಡಿ ಮಾಡಿದರು. 

ವರದಿ: ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣನ್ಯೂಸ್, ಗದಗ

ಗದಗ (ಜೂ.25): ಶಿವ ಸೇನೆಯ 38 ಬಂಡಾಯ ಶಾಸಕರು ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ಮಧ್ಯೆ ಬಂಡಾಯ ಶಾಸಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಅನ್ನೋ ಮಾತುಗಳು ಹರಿದಾಡ್ತಿವೆ. ಇನ್ನು ಈ ಬಗ್ಗೆ ಗದಗನಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇನ್ನೆರಡು ದಿನ ತಡೆದ್ರೆ ಉದ್ಧವ್ ಠಾಕ್ರೆ, ಅವ್ರ ಪುತ್ರ ಆದಿತ್ಯ ಠಾಕ್ರೆ ಇಬ್ಬರನ್ನ ಬಿಟ್ಟು ಎಲ್ಲರೂ ಪಕ್ಷ ಬಿಡುತ್ತಾರೆ ಅಂತಾ ಲೇವಡಿ ಮಾಡಿದರು. ಮಹಾ ಅಘಾಡಿ ಅಸ್ಥಿರತೆಗೆ ಬಿಜೆಪಿ ಕಾರಣವಾಗಿ ಅನ್ನೋ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು, ಹೊರಗಿನವರು ಷಡ್ಯಂತ್ರ ರೂಪಿಸಿ ಇಡೀ ಪಾರ್ಟಿ ತೆಗೆದುಕೊಂಡು ಹೋಗುವುದಕ್ಕೆ ಆಗಲ್ಲ. ಅವರ ವಿಚಾರಧಾರೆ ಯಾವುದು ಅನ್ನೋದು ಅವರಿಗೆ ಗೊತ್ತಿಲ್ಲ ಹೀಗಾಗಿ ಶಿವ ಸೇನೆಗೆ ಈ ಪರಿಸ್ಥಿತಿ ಬಂದಿದೆ ಎಂದರು. 

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಶಿವ ಸೇನೆಯ ಒಳಗಿನ ಜಗಳ ಕಾರಣ. ಶಿವಸೇನೆ ಎಂಎಲ್‌ಎಗಳು ಬರೆದಿರುವ ಪತ್ರ ಸಾಕ್ಷಿ ಈ ವಿದ್ಯಮಾನಕ್ಕೆ ಸಾಕ್ಷಿ.. ಲೋಕ ಸಭೆ ಹಾಗೂ ಮಹಾರಾಷ್ಟ್ರ ಪ್ರವಾಸದಲ್ಲಿ ಭೇಟಿಯಾದಾಗ ಕೆಲ ನಾಯಕರು ನಮ್ಮ ಬಳಿ ಹೇಳಿಕೊಂಡಿದ್ದಿದೆ. ಅದು ಅಸ್ವಾಭಾವಿಕ ಮೈತ್ರಿ ಅಂತಾ ಹೇಳಿಕೊಂಡಿದ್ದರು. ಪರಿಣಾಮವೇ ಇವತ್ತು ಬಂಡಾಯ ಎದ್ದಿದ್ದಾರೆ ಅಂತಾ ಹೇಳಿದರು. ಎನ್‌ಸಿಪಿ ಹಾಗೂ ಕಾಂಗ್ರೆಸ್ ವಿರುದ್ಧ ಶಿವಸೇನೆ ಸಂಸ್ಥಾಪಕ ನಾಯಕ ಬಾಳಾ ಸಾಹೇಬರು ಹೋರಾಟ ಮಾಡಿದವರು. ಆದ್ರೆ, ಬಾಳ ಸಾಹೇಬರ ತೀರಿಹೋದ ಬಳಿಕ ಅಧಿಕಾರಕ್ಕಾಗಿ ಎನ್‌ಸಿಪಿ, ಕಾಂಗ್ರೆಸ್ ಜೊತೆ ಶಿವ ಸೇನೆ ಸೇರಿತ್ತು. 

ಗದಗ: ಸರ್ಕಾರಿ ಇಲಾಖೆಗಳಿಂದಲೇ ಭೀಷ್ಮ ​ಕೆ​ರೆ​ ಅತೀ ಹೆಚ್ಚು ಅತಿಕ್ರಮಣ

ಎನ್‌ಸಿಪಿಯವರೇ ಮುಖ್ಯಮಂತ್ರಿಗಳನ್ನ ರಿಮೋಟ್ ಕಂಟ್ರೋಲ್‌ನಲ್ಲಿ ಇಟ್ಟಿದ್ದರು ಅನ್ನೋ ಆರೋಪ ಇದೆ. ಹೀಗಾಗಿ ಶಿವ ಸೈನಿಕರು, ಎಂಎಲ್‌ಎ, ಎಂಪಿಗಳು ನಿರಾಶೆಗೊಂಡಿದ್ದರು. ಇವರ ತಪ್ಪಿಂದ ಇಡೀ ಪಕ್ಷವೇ ಅಸಮಾಧಾನಗೊಂಡಿದೆ. ಸಾಮಾನ್ಯವಾಗಿ ಅಸಮಾಧಾನಗೊಂಡರೆ ಒಂದಿಬ್ಬರು ಪಕ್ಷ ತೊರೆಯಬಹುದು. ಆದ್ರೆ ಇಲ್ಲಿ ಪಕ್ಷಕ್ಕೆ ಪಕ್ಷವೇ ಹೋಗಿದೆ ಎಂದರು. ಕಾಂಗ್ರೆಸ್ ವಿರುದ್ಧ ಷಡ್ಯಂತ್ರ ಅನ್ನೋ ಆರೋಪಕ್ಕೆ ಉತ್ತರಿಸಿ, ಕಾಂಗ್ರೆಸ್ ಪಾರ್ಟಿ ಮಹಾರಾಷ್ಟ್ರ ದಲ್ಲಿ ಏನಿದೆ? ಕಾಂಗ್ರೆಸ್ ಪಾರ್ಟಿ ಏನೋ 40 ಸೀಟ್ ಇದೆ. ಅಲ್ಲಿ ಇಲ್ಲಿ ಮೇಯಿಕೊಂಡು ಇದ್ದರು. ಕಾಂಗ್ರೆಸ್‌ನ್ನ ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಅದಾಗಿಯೆ ಮುಗಿದು ಹೋಗುತ್ತಿದೆ. ಕಾಂಗ್ರೆಸ್‌ಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ. ಅವರು ವಿರೋಧ ಪಕ್ಷವಾಗಿ ಅಸ್ಥಿತ್ವ ಉಳಿಸಿಕೊಳ್ಳಲಿ ಎಂದರು. 

Gadag; ಗೋಮೂತ್ರ, ಪಂಚಗವ್ಯ ಮೂಲಕ ಕ್ಯಾನ್ಸರ್ ಗೆ ಚಿಕಿತ್ಸೆ

ಶಾಸಕರನ್ನ ಖರೀದಿಗೆ ಎಲ್ಲಿಂದ ಹಣ ಬಂತು ಅನ್ನೋ ಸಿದ್ದರಾಮಯ್ಯ ಪ್ರಶ್ನೆಗೆ, ಶಾಸಕರನ್ನ ಖರೀದಿ ಮಾಡುವ ಪ್ರಶ್ನೆ ಇಲ್ಲ. ಎನ್‌ಸಿಪಿ, ಕಾಂಗ್ರೆಸ್ ಅವರಿಂದ ಸಮಸ್ಯೆಯಾಗಿದೆ. 50 ಜನಕ್ಕಿಂತ ಹೆಚ್ಚು ಜನರು ದುಡ್ಡಿನಿಂದ ಹೋಗುತ್ತಾರಾ ಅಂತಾ ಮರು ಪ್ರಶ್ನೆ ಹಾಕಿದ ಅವರು, ಸ್ವಯಂಕೃತ ಅಪರಾಧದಿಂದ ಶಿವ ಸೇನೆ ಕೆಟ್ಟ ಪರಿಸ್ಥಿತಿಗೆ ಸಿಲುಕಿದೆ ಎಂದರು. ಹಿಂದೂಗಳ ವೋಟ್‌ಗಾಗಿ ಶಿವ ಸೇನೆಯನ್ನ ಮುಗಿಸಲು ಬಿಜೆಪಿ ಮುಂದಾಗುದೆ ಎನ್ನುವ ಉದ್ಧವ್ ಠಾಕ್ರೆ ಹೇಳಿಕೆ ಪ್ರತಿಕ್ರಿಯೆ ನೀಡಿ, ಹಿಂದೂ ವೋಟ್‌ಕಿಂತನೂ ಸಮಾನ ಮನಸ್ಕರರು ಒಂದೆಡೆ ಇದ್ದೇವೆ. ಶಿವಸೇನೆ ಹೊರಗೆ ಹೋಗಿತ್ತು. 2014 ರ ಚುನಾವಣೆಯಲ್ಲೂ ನಾವು ಒಳ್ಳೆ ಸಾಧನೆ ಮಾಡಿದ್ದೇವೆ. ನಮಗೆ ಯಾರನ್ನೂ ಮುಗಿಸುವ ಅವಶ್ಯಕತೆ ಇಲ್ಲ ಎಂದರು.

click me!