ರಾಜ್ಯದ ಜನ ನೋಡ್ತಿದ್ದಾರೆ. ಹೀಗೆ ಮುಂದುವರೆದ್ರೆ ಮುಂಬರುವ ಚುನಾವಣೆಯಲ್ಲಿ ಸೋಲನುಭವಿಸಿ ಪೋಸ್ಟರ್ ಹಚ್ಚುವ ಕೆಲಸವೇ ಕಾಂಗ್ರೆಸ್ ಗೆ ಕಾಯಂ ಆಗುತ್ತೆ: ಸಿ.ಸಿ. ಪಾಟೀಲ್
ಗದಗ(ಸೆ. 27): ಪೇಸಿಎಂ ಅಭಿಯಾನ ಕಾಂಗ್ರೆಸ್ ಅಧಃಪತನಕ್ಕೆ ಕಾರಣವಾಗುತ್ತೆ ಅಂತ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ ಭವಿಷ್ಯ ನುಡಿದಿದ್ದಾರೆ. ಇಂದು(ಮಂಗಳವಾರ) ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಂತಹ ನಾಯಕರು ಪೇಸಿಎಂ ಅಭಿಮಾನ ಮಾಡ್ತಿರೋದು ನೋವು ತಂದಿದೆ. ಕಾಂಗ್ರೆಸ್ ಪಕ್ಷ ಅತ್ಯಂತ ಕೀಳುಮಟ್ಟದ ರಾಜಕೀಯ ಮಾಡ್ತಿದೆ. ಪೇಸಿಎಂ ಅಭಿಯಾನದಿಂದ ರಾಜ್ಯದ ಜನರಿಗೆ ಕಾಂಗ್ರೆಸ್ ಏನು ಸಂದೇಶ ನೀಡುತ್ತಿದೆ ಅಂತ ಪ್ರಶ್ನಿಸಿದ ಅವರು, ರಾಜದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದೆ ಅವರೇ ಉತ್ತರ ಕೊಡ್ತಾರೆ. ಮೊದಲೆಲ್ಲ ಸಿನಿಮಾ ಪೋಸ್ಟರ್ ಹಚ್ಚುತ್ತಿದ್ರು, ನಾವು ನೋಡಿದ್ದೇವೆ. ಈಗ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಪೇಸಿಎಂ ಪೋಸ್ಟರ್ ಹಚ್ಚುತ್ತಿದ್ದಾರೆ ಅಂತ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
2023ರಲ್ಲಿ ಪೋಸ್ಟರ್ ಹಚ್ಚುವ ಕೆಲಸ ಕಾಯಂ
undefined
ರಾಜ್ಯದ ಜನ ನೋಡ್ತಿದ್ದಾರೆ. ಹೀಗೆ ಮುಂದುವರೆದ್ರೆ ಮುಂಬರುವ ಚುನಾವಣೆಯಲ್ಲಿ ಸೋಲನುಭವಿಸಿ ಪೋಸ್ಟರ್ ಹಚ್ಚುವ ಕೆಲಸವೇ ಕಾಂಗ್ರೆಸ್ ಗೆ ಕಾಯಂ ಆಗುತ್ತೆ. ಅಧಿವೇನದ ಮೊದಲು 40% ಸರ್ಕಾರ ಅಂತ ಆರೋಪ ಮಾಡಿದ್ದರು. ಆದ್ರೆ, ಅಧಿವೇಶನದ 10 ದಿನದಲ್ಲಿ 40 % ಸುಳಿವು ಎತ್ತಲ್ಲಿಲ್ಲ. ಕೆಂಪಣ್ಣ ಅವರನ್ನ ಕಾಂಗ್ರೆಸ್ ಬಳಸಿಕೊಂಡಿದೆ. ಅವರು ನಮ್ಮ ಆಫೀಸಿಗೆ ಬಂದಿದ್ರು, ಯಾರೋ ಬರೆದುಕೊಟ್ಟಿದನ್ನು ಸಹಿ ಮಾಡಿದ್ದೇನೆ ಅಂತ ಬಂದು ಹೇಳಿದ್ದಾರೆ ಅಂತಾ ಪರ್ಸೆಂಟೇಜ್ ಆರೋಪಕ್ಕೆ ಕಿಡಿಕಾರಿದ್ದಾರೆ.
Karnataka Politics: ಕಾಂಗ್ರೆಸ್ ವಿರುದ್ಧ ಬಿಜೆಪಿ ತ್ರಿವಳಿ ಅಸ್ತ್ರ
ಬಿಎಸ್‌ವೈ 2 ಮೀಸಲಾತಿ ವಿರೋಧಿ ಅಲ್ಲ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದಕ್ಕೆ ಬಿಎಸ್‌ವೈ ವಿರೋಧ ಮಾಡಿದ್ದಾರೆ ಎಂಬ ಆರೋಪ ತಳ್ಳಿಹಾಕಿದ ಸಿಸಿಪಿ, ಬಿಎಸ್ ಯಡಿಯೂರಪ್ಪ ಅವರ ಹೆಸರನ್ನು 2 ಮೀಸಲಾತಿಯಲ್ಲಿ ತೆಗೆದುಕೊಂಡಿದ್ದು ಖಂಡನೀಯ. ಪಂಚಮಸಾಲಿ ಸಾಮಾಜಕ್ಕೆ 2 ಮೀಸಲಾತಿ ಕೊಡಬಾರದು ಎಂದು ಬಿಎಸ್ ವೈ ಹೇಳಿಲ್ಲ. ಬಿಎಸ್ ವೈ ನಮ್ಮನ್ನು ಗುರುತಿಸಿ ಇಷ್ಟೊಂದು ಎತ್ತರಕ್ಕೆ ಬೆಳೆಸಿದ್ದಾರೆ. ಸಮಾಜದ ಮೂರು ಜನರು ಮಂತ್ರಿಮಂಡಲದಲ್ಲಿ ಇದ್ದೇವೆ.. ಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ಸಮಸ್ಯೆ ಬಗ್ಗೆ ಗೊತ್ತಿದೆ.. ಮೀಸಲಾತಿ ವಿಚಾರವಾಗಿ ನಿರ್ಣಯ ತೆಗೆದುಕೊಳ್ಳುವ ಶಕ್ತಿ ಸಿಎಂ ಬಸವರಾಜ್ ಬೊಮ್ಮಾಯಿ ಇದೆ. ಕಾನೂನಾತ್ಮಕವಾಗಿ ಮೀಸಲಾತಿ ಕೊಡಲಸಲು ಪ್ರಯತ್ನ ನಡೆದಿದೆ ಎಂದ್ರು..
ಪಿಎಫ್ಐ ಕಾರ್ಯಕರ್ತರ ಬಂಧನ ವಿಚಾರವಾಗಿ ಮಾತನಾಡಿದ ಅವರು, ಕಾನೂನು ತನ್ನ ಕ್ರಮ ಕೈಗೊಳ್ಳುತ್ತೆ, ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಇದೆ. ಕಾನೂನು ಕೈಗೆ ತೆಗೆದುಕೊಳ್ಳುವವರು, ಸಮಾಜದ ಸ್ವಾಸ್ಥ್ಯ ಕೆಡಿಸುವಂತವರಿಗೆ ಸೂಕ್ತ ಶಿಕ್ಷೆಯನ್ನು ಕೇಂದ್ರ ಸರ್ಕಾರ ನೀಡುತ್ತೆ ಎಂದ್ರು.. ಪಿಎಫ್ ಐ ಸಂಘಟನೆ ಸದಸ್ಯರ ಬಂಧನ ವೇಳೆ ಭೀಕರ ಮಾಹಿತಿಗಳು ಹೊರ ಬರುತ್ತಿವೆ.. ಪ್ರಧಾನಿ ಮಂತ್ರಿ ಹತ್ಯೆ ಸೇರಿದಂತೆ ಹಲವು ಮಾಹಿತಿ ಹೊರ ಬರುತ್ತಿವೆ.. ಅಂತಹ ಪಿಎಫ್ಐ ಕಾರ್ಯಕರ್ತರನ್ನು ಅಂದು ಸಿದ್ದರಾಮಯ್ಯ ಬಿಡುಗಡೆ ಮಾಡಿದ್ರು.. ಹಿಂದು ಕಾರ್ಯಕರ್ತರ ಕೊಲೆಯಾದಾಗ ಕಾಂಗ್ರೆಸ್ ಸರ್ಕಾರ ಕೂಡಲೇ ಬಿಡುಗಡೆ ಮಾಡಿತ್ತು.. ಇದು ಕಾಂಗ್ರೆಸ್ ಪಕ್ಷದ ಸುಂದರ ಪ್ರಜಾಪ್ರಭುತ್ವ, ಎಂದು ಸಿ.ಸಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ.