BJP VS BJP : ಇಬ್ಬರು ಸಚಿವರ ನಡುವೆ ಪರಸ್ಪರ ವಾಕ್‌ಪ್ರಹಾರ

By Kannadaprabha NewsFirst Published Jun 16, 2021, 8:14 AM IST
Highlights
  •  17 ಜನ ಬಿಜೆಪಿ ಬಂದು ಸಚಿವರಾದ ಬಳಿಕ ಪಕ್ಷದಲ್ಲಿ ಗೊಂದಲ 
  • ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅಸಮಾಧಾನ
  • ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅಸಮಾಧಾನ 

ಮೈಸೂರು (ಜೂ.16):  17 ಜನ ಬಿಜೆಪಿ ಬಂದು ಸಚಿವರಾದ ಬಳಿಕ ಪಕ್ಷದಲ್ಲಿ ಗೊಂದಲ ಆರಂಭವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅಸಮಾಧಾನ ವ್ಯಕ್ತಪಡಿಸಿದ್ದು, 17 ಜನ ಬಿಜೆಪಿಗೆ ಬಂದ ಕಾರಣದಿಂದಲೇ ಸರ್ಕಾರ ಬಂದಿದೆ. 

ಸರ್ಕಾರ ಬಂದಿರುವ ಕಾರಣ ಕೆ.ಎಸ್‌.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾರೆ ಎಂದು ಟಾಂಗ್‌ ನೀಡಿದ್ದಾರೆ. ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು ‘ಈಶ್ವರಪ್ಪ ಆ ರೀತಿ ಹೇಳಿಕೆ ಕೊಟ್ಟಿದ್ದರೆ ಇದು ಸರಿಯಲ್ಲ. ಅವರು ಆ ರೀತಿ ಮಾತನಾಡಿಲ್ಲ’ ಎಂದುಕೊಳ್ಳುತ್ತೇನೆ ಎಂದರು.

ನಾಯಕತ್ವ ಬದಲಾವಣೆ: ದಿಲ್ಲಿಯಿಂದಲೇ ಬಂತು ಸ್ಪಷ್ಟ ಸಂದೇಶ

ಇದೇ ವೇಳೆ ಶಾಸಕ ಮುನಿರತ್ನಗೂ ಸಚಿವ ಸ್ಥಾನ ಸಿಗಬೇಕು ಎಂದು ಬಿ.ಸಿ.ಪಾಟೀಲ್‌ ಹೇಳಿದರು.

ಮುನಿರತ್ನಗೂ ಸಚಿವ ಸ್ಥಾನ ನೀಡಬೇಕು:  ಶಾಸಕ ಮುನಿರತ್ನಗೆ ಸಚಿವ ಸ್ಥಾನ ನೀಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೃಷಿ ಸಚಿವರು, ನನಗೆ ಈ ವಿಚಾರ ಗೊತ್ತಿಲ್ಲ. ಆದರೆ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದಾರೆ. ಅವರಿಗೂ ಸಚಿವ ಸ್ಥಾನ ಸಿಗಬೇಕಿದೆ ಎಂದು ಹೇಳಿದ್ದಾರೆ.

click me!