ದಲಿತರ ಬಗ್ಗೆ ಕಾಳಜಿ ಇದ್ದಿದ್ರೆ ಖರ್ಗೆರನ್ನ ಯಾಕೆ ಸಿಎಂ ಮಾಡಲಿಲ್ಲ? ಸಿದ್ದುಗೆ ಬಿ.ಸಿ. ಪಾಟೀಲ್‌ ಪ್ರಶ್ನೆ

By Girish GoudarFirst Published May 31, 2022, 12:27 PM IST
Highlights

*   ಆರ್‌ಎಸ್‌ಎಸ್‌ ಇಲ್ಲದೇ ಹೋಗಿದ್ರೆ ಭಾರತ ದೇಶ ಇಷ್ಟೊತ್ತಿಗೆ ತಾಲಿಬಾನ್ ಆಗಿರುತ್ತಿತ್ತು
*  ಮುಸ್ಲಿಂರನ್ನು ಸಂತುಷ್ಟಗೊಳಿಸೋಕೆ ಸಿದ್ದರಾಮಯ್ಯ ಹೀಗೆ ಮಾತಾಡ್ತಾರೆ
*  ಸಿದ್ದರಾಮಯ್ಯ ಕಾಟಕ್ಕೆ ಖರ್ಗೆ ದೆಹಲಿಗೆ ಹೋದರು
 

ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ 

ಹಾವೇರಿ(ಮೇ.31): ಆರ್‌ಎಸ್‌ಎಸ್‌ನಲ್ಲಿ ಒಂದೇ ಜಾತಿಯ ಪದಾಧಿಕಾರಿಗಳು ಯಾಕೆ ಮುಖ್ಯ ಸ್ಥಾನದಲ್ಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಬಹಳ ಬುದ್ದಿವಂತರು ಅವರಿಗೆ ಬಹಳ ವಿಶಾಲವಾದ ಹೃದಯ ಇದೆ ಅಂತ ನಾನು ಅನ್ಕೊಂಡಿದ್ದೆ. ಸಿದ್ದರಾಮಯ್ಯ ಅವರ ಸುತ್ತ - ಮುತ್ತ ಇರೋರು ಅಷ್ಟೆ ಹಿಂದುಳಿದವರು, ದಲಿತರು ಅಂತ ಅನ್ಕೊಂಡಿದಾರೆ. ಯಾವ ಒಂದು ಜಾತಿ, ಕೋಮಿಗೆ ಆರ್‌ಎಸ್‌ಎಸ್‌ ಸೀಮಿತ ಆಗಿದೆ ಅನ್ನೋದನ್ನ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಲಿ ಅಂತ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ

Latest Videos

ಆರ್‌ಎಸ್ಎಸ್ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಮಂಗಳವಾರ) ಹಾವೇರಿ ಜಿಲ್ಲೆ ಹಿರೇಕೇರೂರಿನಲ್ಲಿರೋ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ದಲಿತರಿಗೆ ಹಿಂದುಳಿದದವರಿಗೆ ಆರ್‌ಎಸ್‌ಎಸ್‌ನಲ್ಲಿ ಅವಕಾಶ ಇಲ್ಲ ಅನ್ನೋದಾದರೆ ಈ ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಯಾವ ಜಾತಿ?ಅವರು ಆರ್‌ಎಸ್‌ಎಸ್‌ ಅಲ್ವಾ? ಈ ದೇಶದ ಪ್ರಧಾನಿ ನರೇಂದ್ರ ಮೋದಿ ಯಾವ ಜಾತಿ?, ಮೋದಿಯವರು ಎರಡು ಬಾರಿ ಪ್ರಧಾನಿ ಆಗಿದ್ದಾರೆ. ಮುಂದಿನ ಬಾರಿಯೂ ಆಗ್ತಾರೆ ಎಂದರು.

ಹೊರಟ್ಟಿ ಬಂದಿರುವುದು ಬಿಜೆಪಿಗೆ ಆನೆ ಬಲ ಬಂದಂತಾಗಿದೆ: ಜಗದೀಶ ಶೆಟ್ಟರ್‌

ಸಿದ್ದರಾಮಯ್ಯಗೆ ದಲಿತರ ಬಗ್ಗೆ ಅಷ್ಟು ಕಾಳಜಿ ಇದ್ದಿದ್ರೆ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ಯಾಕೆ ಬಿಟ್ಟು ಕೊಡಲಿಲ್ಲ?, ಸಿದ್ದರಾಮಯ್ಯ ಅವರಿಗೆ ದಲಿತರ ಬಗ್ಗೆ ಅಷ್ಟು ಕಾಳಜಿ ಇದ್ರೆ ಖರ್ಗೆಯವರು ಬಹಳ ಸೀನಿಯರ್ ಇದ್ರು. ಖರ್ಗೆ ಯವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟು ಕೊಡಬಹುದಿತ್ತು. ಯಾಕೆ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಲಿಲ್ಲ? ಅಂತ ಬಿ.ಸಿ. ಪಾಟೀಲ್‌ ಪ್ರಶ್ನೆ ಮಾಡಿದ್ದಾರೆ. 

ಗೆದ್ದು ಬಂದ ಮೇಲೆ ಕಾಂಪಿಟೇಶನ್ ಮಾಡೋದು ಸಹಜ. ಆದರೆ ಒಬ್ಬ ವ್ಯಕ್ತಿ ಗೆಲ್ಲದಂಗೆ ಮಾಡಬೇಕು ಅಂತ ಹೇಳಿ ಡಾ.ಪರಮೇಶ್ವರ್ ಅವರನ್ನು ಸೋಲಿಸಿದ್ರಲ್ಲವಾ?. ಆವಾಗ ಇವರಿಗೆ ದಲಿತರ ಬಗ್ಗೆ ಕಾಳಜಿ ಇರಲಿಲ್ಲವಾ?. ತಮ್ಮ ಸುತ್ತ ಮುತ್ತಲಿನ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳೋಕೆ ಸುಮ್ಮನೆ ಆರ್‌ಎಸ್‌ಎಸ್‌, ಆರ್‌ಎಸ್‌ಎಸ್‌ ಅಂತ ಹೇಳ್ತಾರೆ. ಈ  ದೇಶದಲ್ಲಿ ಆರ್‌ಎಸ್‌ಎಸ್‌ ಇಲ್ಲದೇ ಹೋಗಿದ್ದರೆ ಭಾರತ ದೇಶ ಇಷ್ಟೊತ್ತಿಗೆ ತಾಲಿಬಾನ್ ಆಗಿರ್ತಾ ಇತ್ತು. ಆರ್‌ಎಸ್‌ಎಸ್‌, ರಾಷ್ಟ್ರೀಯ ಸ್ವಯಂ ಸ್ವೇವಕರು ಭಾರತ ದೇಶ, ಹಿಂದೂ ಧರ್ಮದ ಬಗ್ಗೆ ಅವರು ರಾಷ್ಟ್ರ ಪ್ರೇಮವನ್ನು ವ್ಯಕ್ತಪಡಿಸುವ ಒಂದು ಸಂಘ ಅಂತ ಹೇಳಿದ್ದಾರೆ.

ಅವರ ಬಗ್ಗೆ ಇಷ್ಟು ಕೀಳಾಗಿ ಮಾತಾಡುವ ಇವರಿಗೆ ಯಾವ ನೈತಿಕ ಹಕ್ಕಿದೆ? ದಲಿತರನ್ನೆಲ್ಲಾ ಸೋಲಿಸ್ತಾರೆ. ಗೆದ್ದರೆ ಎಲ್ಲಿ ಕಾಂಪಿಟೇಟರ್ಸ್ ಆಗ್ತಾರೋ ಅಂತ ಪರಮೇಶ್ವರ್ ಅವರನ್ನು ಸೋಲಿಸ್ತಾರೆ. ಖರ್ಗೆ ಸಿದ್ದರಾಮಯ್ಯ ಕಾಟಕ್ಕೆ ದೆಹಲಿಗೆ ಹೋದರು. ಇಲ್ಲಿ ಖರ್ಗೆ ವಿರೋಧ ಪಕ್ಷದ ನಾಯಕರಿದ್ದವರನ್ನು ದೆಹಲಿಗೆ ಕಳಿಸಿಬಿಟ್ರು. ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕ ಅಂತ ಮಾಡೋವರೆಗೂ 8 ಉಪಚುನಾವಣೆ ನಡೆದರೂ ಪ್ರಚಾರಕ್ಕೆ ಬರಲಿಲ್ಲ. ಇವತ್ತು ಆರ್‌ಎಸ್‌ಎಸ್‌ ಬಗ್ಗೆ ಮಾತಾಡಿ ಕಾಂಗ್ರೆಸ್ ಧುರೀಣ ನಾನೇ ಅಂತ ಪ್ರತಿಪಾದನೆ ಮಾಡೋವಂತದ್ದು ಸರಿಯಲ್ಲ ಎಂದು‌ ಬಿ.ಸಿ ಪಾಟೀಲ್ ಕಿಡಿ ಕಾರಿದರು.

ಆರ್‌ಎಸ್‌ಎಸ್‌ ಬಗ್ಗೆ ಟ್ವೀಟ್ ಮಾಡಿದರೆ ಈ ದೇಶದ ಮುಸ್ಲಿಮರು ನನ್ನ ಜೊತೆ ಬರ್ತಾರೆ ಅನ್ನೋ ಹುಚ್ಚು ಭಾವನೆ ಸಿದ್ದರಾಮಯ್ಯ ಅವರಲ್ಲಿದೆ. ಕೇವಲ ಮುಸ್ಲಿಂರನ್ನು ಸಂತುಷ್ಟಗೊಳಿಸೋಕೆ ಸಿದ್ದರಾಮಯ್ಯ ಹೀಗೆ ಮಾತಾಡ್ತಾರೆ. ಮುಸ್ಲಿಮರಿಗೋಸ್ಕರ ಹೋರಾಟ ಮಾಡೋಕೆ ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾರೂ ಇಲ್ಲ ಅನ್ನುವಂತ ಭಾವನೆ ತೋರಿಸೋದಕ್ಕೆ ಆರ್‌ಎಸ್‌ಎಸ್‌ ಟೀಕೆ ಮಾಡ್ತಾರೆ. ಇದು ಸಿದ್ದರಾಮಯ್ಯ ಒಂದು ಕೋಮನ್ನು ಸಂತುಷ್ಟಗೊಳಿಸೋಕೆ ಮಾಡ್ತಿರೋ ನಾಟಕ ಎಂದು ಬಿ.ಸಿ‌ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ಸಭಾಪತಿ ಆಗಬಹುದೆಂಬ ಆಸೆಯಿಂದ Basavaraj Horatti ಕೋಮುವಾದಿ‌ಪಕ್ಷಕ್ಕೆ ಶಿಫ್ಟ್

ಇನ್ನು ರಾಜ್ಯಸಭೆ ಚುನಾವಣೆಗೆ ಬಿಜೆಪಿ 3 ನೇ ಅಭ್ಯರ್ಥಿ ಕಣಕ್ಕಿಳಿಸಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿ.ಸಿ ಪಾಟೀಲ್, ನಮ್ ಹತ್ರ ಸಂಖ್ಯೆ ಇದೆ. 90 ಸ್ಥಾನ ಹೋದರೆ ಉಳಿದ ಸ್ಥಾನಕ್ಕೂ ನಮ್ ಹತ್ರ ಜಾಸ್ತಿ ಇದೆ. ಉಳಿದ ಪಕ್ಷಗಳಿಗೆ ಹೋಲಿಸಿದರೆ ನಮ್ ಪಕ್ಷದಲ್ಲೇ ಜಾಸ್ತಿ ಶಾಸಕರಿದಾರೆ. ಪಕ್ಷದ ವರಿಷ್ಟರು ತೀರ್ಮಾನ ಮಾಡಿ ಮೂರನೇ ಅಭ್ಯರ್ಥಿ ಹಾಕಿದಾರೆ. ಯಾರ್ಯಾರು ಆತ್ಮ ಒಪ್ಪುತ್ತೋ? ಯಾರ್ಯಾರ ಮನಸ್ಸು ಒಪ್ಪುತ್ತೋ ಅವರು ಬಂದು ಮತ ಹಾಕಬಹುದು ಎಂದರು. 

ಪೆಟ್ರೋಲ್ ,ಡೀಸೆಲ್ ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ

ಭಿತ್ತನೆ ಹುರುಪಿನಲ್ಲಿದ್ದ  ಹಾವೇರಿ ಜಿಲ್ಲೆಯ ರೈತರ ಟ್ರಾಕ್ಟರ್ ಗಳಿಗೆ ಡೀಸೆಲ್ ಅಭಾವ  ಉಂಟಾಗಿ ಬಹಳಷ್ಟು ಸಮಸ್ಯೆಗಳೇ ಸೃಷ್ಟಿಯಾಗಿವೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಡೀಸೆಲ್ ನೋ ಸ್ಟಾಕ್ ಅನ್ನೋ‌ ಬೋರ್ಡ್ ಗಳು ಸರ್ವೆ ಸಾಮಾನ್ಯವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಇಳಿತ, ಅಸಮರ್ಪಕ ಡೀಸೆಲ್ ಪೂರೈಕೆಗೆ ಬಂಕ್ ಮಾಲೀಕರು ತತ್ತರಿಸಿ ಹೋಗಿದ್ದಾರೆ. ಡೀಸೆಲ್ ಕೊರತೆಯಿಂದ ರೈತರೂ ಕೂಡ ಹೈರಾಣಾಗಿದ್ದಾರೆ. 

ಜಿಲ್ಲಾಧಿಕಾರಿಗಳಿಗೆ , ತಹಶಿಲ್ದಾರರರಿಗೆ ಸೂಚನೆ ಕೊಟ್ಟಿದೇವೆ.ಡೀಸೆಲ್ ಸ್ಟಾಕ್ ಇಟ್ಟುಕೊಂಡು ನೋ ಸ್ಟಾಕ್ ಅಂತ ಬೋರ್ಡ್ ಹಾಕಿದರೆ ಪೆಟ್ರೋಲ್ ಬಂಕ್ ಗಳ ಪರವಾನಿಗೆ ರದ್ದು ಮಾಡ್ತೀವಿ. ಕೂಡಲೇ ಎಲ್ಲಾ ಕಡೆ ಧಾಳಿ ಮಾಡಿ ಅಂತ ಸೂಚನೆ ಕೊಟ್ಟಿದೆವೆ.ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ ಕೂಡಾ ಹಿಂತೆಗೆದಿದ್ದಾರೆ.ಅನವಶ್ಯಕವಾಗಿ ಕೃತಕ ಅಭಾವ ಸೃಷ್ಟಿ ಮಾಡುವ ಜಾಲ ಈ ಕೆಲಸ ಮಾಡ್ತಿದೆ.ಇವತ್ತಿನಿಂದ ಎಲ್ಲವೂ ಸರಿಯಾಗಲಿದೆ‌ ಎಂದರು
 

click me!