ಹೊರಟ್ಟಿ ಬಂದಿರುವುದು ಬಿಜೆಪಿಗೆ ಆನೆ ಬಲ ಬಂದಂತಾಗಿದೆ: ಜಗದೀಶ ಶೆಟ್ಟರ್‌

By Kannadaprabha News  |  First Published May 31, 2022, 7:26 AM IST

*  ಶಿಕ್ಷಕರು ಅವರನ್ನು ಹೋರಾಟದ ಹೊರಟ್ಟಿ ಎನ್ನುತ್ತಾರೆ
*  ನಾಲ್ಕು ಜಿಲ್ಲೆಗಳಿಗೆ ಬಿಜೆಪಿ ಪ್ರಬಲವಾಗಿದೆ
*  ಹೊರಟ್ಟಿ ಅವರ ಗೆಲುವು ಸುಲಭವಾಗಲಿದೆ 


ಹಾವೇರಿ(ಮೇ.31): ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ಕಳೆದ 40 ವರ್ಷಗಳಿಂದ ಹೋರಾಟದ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಅವರು ಬಿಜೆಪಿಗೆ ಬಂದಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಈ ಬಾರಿ ಹೊರಟ್ಟಿಹಾಗೂ ಬಿಜೆಪಿ ಒಂದಾಗಿದ್ದು ಅವರು ಹೆಚ್ಚಿನ ಪ್ರಾಶಸ್ತ್ಯದ ಮತಗಳಿಂದ ಗೆಲವು ಸಾಧಿಸಲಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಈವರೆಗೂ ಬಿಜೆಪಿ ಹಾಗೂ ಹೊರಟ್ಟಿಅವರ ನಡುವೆ ಸ್ಪರ್ಧೆ ನಡೆಯುತ್ತಿತ್ತು. ಕಾಂಗ್ರೆಸ್‌ ಚಿತ್ರಣದಲ್ಲೇ ಇರುತ್ತಿರಲಿಲ್ಲ. ಸತತವಾಗಿ 7 ಬಾರಿ ಆಯ್ಕೆಯಾಗಿರುವ ಅವರು 8ನೇ ಬಾರಿ ಆಯ್ಕೆಯಾಗಿ ದಾಖಲೆ ಸೃಷ್ಟಿಸಲಿದ್ದಾರೆ. ಶಿಕ್ಷಕರು ಅವರನ್ನು ಹೋರಾಟದ ಹೊರಟ್ಟಿಎನ್ನುತ್ತಾರೆ. ನಾಲ್ಕು ಜಿಲ್ಲೆಗಳಿಗೆ ಬಿಜೆಪಿ ಪ್ರಬಲವಾಗಿದೆ. ಹೀಗಾಗಿ ಹೊರಟ್ಟಿಅವರ ಗೆಲುವು ಸುಲಭವಾಗಲಿದೆ ಎಂದರು.

Tap to resize

Latest Videos

undefined

ಕ್ಷೀಣಿಸುತ್ತಿರುವ ಕಾಂಗ್ರೆಸ್‌:

ದೇಶದಲ್ಲಿ ನರೇಂದ್ರ ಮೋದಿ ಅಭಿವೃದ್ಧಿ ಪರ ಆಡಳಿತ ನೀಡುತ್ತಿದ್ದಾರೆ. ಕೊರೋನಾ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಉಚಿತವಾಗಿ ಲಸಿಕೆ ನೀಡಿದ್ದಾರೆ. ಹೀಗಾಗಿ ದೇಶದಲ್ಲಿ ಕಾಂಗ್ರೆಸ್‌ ದಿನೆದಿನೇ ಕ್ಷೀಣಿಸುತ್ತಾ ಸಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಗಲಾಟೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಪತನವಾಗುತ್ತಿದೆ. ಒಬ್ಬರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ ಕೂಡಲೇ ಮತ್ತೊಬ್ಬರು ಕಾಂಗ್ರೆಸ್‌ ಪಕ್ಷದಿಂದ ಹೊರಹೋಗಲಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಆರ್‌ಎಸ್‌ಎಸ್‌ ಟೀಕಿಸುತ್ತಿದ್ದಾರೆ. ರಾಜ್ಯದ 4 ಪದವೀಧರ, ಶಿಕ್ಷಕರ ವಿಧಾನಪರಿಷತ್‌ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಎಲ್ಲ ಕಡೆ ಬಹುದೊಡ್ಡ ಅಂತರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.

ಶಿಕ್ಷಕರ ಆಶಯದಂತೆ ಬಿಜೆಪಿಗೆ:

ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ, ಪ್ರಸ್ತುತ ಚುನಾವಣೆಯಲ್ಲಿ ನಾಲ್ಕೂ ಜಿಲ್ಲೆಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈ ಚುನಾವಣೆಯಲ್ಲಿ ಅಷ್ಟೊಂದು ಪೈಪೋಟಿ ಇಲ್ಲ, ಅಖಾಡದಲ್ಲಿರುವ 8 ಅಭ್ಯರ್ಥಿಗಳು ಯಾರಿಗೂ ಗೊತ್ತಿಲ್ಲ, ಇದರಿಂದಾಗಿ ಈ ಬಾರಿಯೂ ಶಿಕ್ಷಕ ಮತದಾರರು ಗೌರವದಿಂದ ಗೆಲ್ಲಿಸಿ ಕಳುಹಿಸುತ್ತಾರೆ ಎಂಬ ವಿಶ್ವಾಸವಿದೆ. ಯಾವ ರಾಜಕೀಯ ಪಕ್ಷದಲ್ಲೂ ಸಿದ್ದಾಂತ ಉಳಿದಿಲ್ಲ, ಶಿಕ್ಷಕರು ಈ ಸಾರಿ ಬಿಜೆಪಿಯಿಂದ ಸ್ಪರ್ಧಿಸಿ ಎಂದು ಒತ್ತಡ ಹಾಕಿದ್ದರಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದಾನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಭಾಪತಿ ಆಗಬಹುದೆಂಬ ಆಸೆಯಿಂದ Basavaraj Horatti ಕೋಮುವಾದಿ‌ಪಕ್ಷಕ್ಕೆ ಶಿಫ್ಟ್

ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಎಂದೂ ಗೆದ್ದಿಲ್ಲ, ಶಿಕ್ಷಕರಿಗೆ ನಿವೃತ್ತಿ ವೇತನ ಕೊಡಿಸುವುದಾಗಿ ಕಾಂಗ್ರೆಸ್‌ ಅಭ್ಯರ್ಥಿ ಈಗ ಹೇಳುತ್ತಿದ್ದಾರೆ. ಈವರೆಗೂ ಈ ಬಗ್ಗೆ ಅವರು ಎಲ್ಲಿಯೂ ಚಕಾರ ಎತ್ತಿಲ್ಲ, ಹೋರಾಟ ಮಾಡಿಲ್ಲ, ಈಗ ಚುನಾವಣೆ ಬಂದಿರುವುದರಿಂದ ಮಾತನಾಡುತ್ತಿದ್ದಾರೆ. ಶಿಕ್ಷಕರಿಗೆ ಹೆದರಿಸಿ, ಬೆದರಿಸಿ ಮತ ಹಾಕಿಸಿಕೊಳ್ಳುತ್ತಾರೆ ಎಂದು ಕೆಲವರು ಆರೋಪಿಸುತ್ತಾರೆ. ಆದರೆ, ಯಾರು ಯಾರನ್ನೂ ಹೆದರಿಸಲು ಸಾಧ್ಯವಿಲ್ಲ, ಎಲ್ಲರೂ ನನ್ನ ಮೇಲೆ ಪ್ರೀತಿ, ವಿಶ್ವಾಸ ಇಟ್ಟುಕೊಂಡು ಅಭಿಮಾನದಿಂದ ಮತ ಹಾಕಿ ಆರಿಸಿ ಕಳುಹಿಸುತ್ತಿದ್ದಾರೆ. ನನ್ನ ಕೆಲಸ, ಹೋರಾಟದ ಬಗ್ಗೆ ಶಿಕ್ಷಕರಿಗೆ ಗೊತ್ತಿದೆ. ಹೀಗಾಗಿ ಕಾಂಗ್ರೆಸ್ಸಿಗರ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ವಿಪ ಸದಸ್ಯರಾದ ಎಸ್‌.ವಿ. ಸಂಕನೂರ, ಆರ್‌. ಶಂಕರ್‌, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಶಿವರಾಜ ಸಜ್ಜನರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಇತರರು ಇದ್ದರು.
 

click me!