ಕಾಂಗ್ರೆಸ್‌ನ್ನೇ ನಪುಂಸಕವನ್ನಾಗಿ ಮಾಡಿದ ದೇಶದ ಜನ: ಈರಣ್ಣಾ ಕಡಾಡಿ

Published : May 31, 2022, 11:29 AM IST
ಕಾಂಗ್ರೆಸ್‌ನ್ನೇ ನಪುಂಸಕವನ್ನಾಗಿ ಮಾಡಿದ ದೇಶದ ಜನ: ಈರಣ್ಣಾ ಕಡಾಡಿ

ಸಾರಾಂಶ

*   ಕಾಂಗ್ರೆಸ್‌ಗೆ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ *   ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ನೀವು ಯಾವ ಮೂಲದವರು?  *   ಆರ್‌ಎಸ್‌ಎಸ್‌ ಅನ್ನು ದೇಶದ ಜನ ಒಪ್ಪಿಕೊಂಡಿದ್ದಾರೆ

ಬೆಳಗಾವಿ(ಮೇ.31):  ದೇಶದ ಜನರು ಕಾಂಗ್ರೆಸ್‌ ಅನ್ನು ನಪುಂಸಕರನ್ನಾಗಿ ಮಾಡಿದ್ದಾರೆ ಹೊರತು ಆರ್‌ಎಸ್‌ಎಸ್‌ ಸಂಘಟನೆಯನ್ನು ಅಲ್ಲ ಎಂದು ಹೇಳುವ ಮೂಲಕ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಆರ್‌ಎಸ್‌ಎಸ್‌ನ ಭೂತ ಯಾಕೆ ಹಿಡಿದಿದೆ ಎಂದು ನನಗೆ ಗೊತ್ತಾಗುತ್ತಿಲ್ಲ. ಅವರು ನೇರಾನೇರ ನಮ್ಮ ಜತೆ ಚರ್ಚೆ ಮಾಡಬೇಕು. ಒಂದು ರಾಜಕೀಯ ಪಕ್ಷಕ್ಕೆ ಉತ್ತರ ಕೊಡಲಾರದ ಹೇಡಿಗಳವರು ಎಂದರು.

ಬೆಳಗಾವಿ ಮಸೀದಿಯೂ ಹಿಂದೂ ದೇವಾಲಯ: ಅಭಯ ಪಾಟೀಲ

ಆರ್‌ಎಸ್‌ಎಸ್‌ ನಪುಂಸಕ ಅಲ್ಲ, ಇಡೀ ದೇಶದ ಜನ ಕಾಂಗ್ರೆಸ್‌ ಪಕ್ಷವನ್ನು ನಪುಂಸಕ ರೀತಿಯಲ್ಲಿ ಮಾಡಿಟ್ಟಿದ್ದಾರೆ. ಅವರು ಎಲ್ಲಿಯೂ ಆಡಳಿತದಲ್ಲಿ ಇಲ್ಲ. ಆರ್‌ಎಸ್‌ಎಸ್‌ ಅನ್ನು ದೇಶದ ಜನ ಒಪ್ಪಿಕೊಂಡಿದ್ದಾರೆ. ಆರ್‌ಎಸ್‌ಎಸ್‌ ಒಂದು ರಾಷ್ಟ್ರವಾದಿ ಸಂಘಟನೆ, ದೇಶದ ಶಾಂತಿ, ಸುವ್ಯವಸ್ಥೆ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಗಟ್ಟಿಯಾಗಿ ನಿಂತಿದೆ ಎನ್ನುವುದು ದೇಶದ ಜನ ಗಮನಿಸಿದ್ದಾರೆ. ರಾಷ್ಟ್ರದ ಗಂಡಾಂತರ ಸಂದರ್ಭದಲ್ಲಿಯೂ ಆರ್‌ಎಸ್‌ಎಸ್‌ ತನ್ನ ಗಂಭೀರ ಪಾತ್ರ ನಿರ್ವಹಿಸಿದೆ. ದೇಶದ ಜನರ ರಕ್ಷಣೆಗೆ ಶ್ರಮ ವಹಿಸಿದೆ. ದೇಶದ ಜನರ ನೈತಿಕತೆ ಮಟ್ಟವನ್ನು ಆರ್‌ಎಸ್‌ಎಸ್‌ ಹೆಚ್ಚಿಸಿದೆ. ನೈತಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್‌ಗೆ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಗುಡುಗಿದರು.

ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ನೀವು ಯಾವ ಮೂಲದವರು? ಆರ್ಯ, ದ್ರಾವಿಡ ಬಿಡೋಣ. ಸಮಾಜವಾದಿ ಹೆಸರಿನ ಮೇಲೆ ರಾಜಕಾರಣಕ್ಕೆ ಬಂದ ಸಿದ್ದರಾಮಯ್ಯನವರು .1 ಕೋಟಿ ಬೆಲೆ ಬಾಳುವ ವಾಚ್‌ ಕಟ್ಟಿಕೊಂಡು ಮಜಾವಾದಿ ಆಗಿದ್ದಿರಿ. ಯಾವ ಕುಟುಂಬ ಆಡಳಿತ ವಿರೋಧಿಸಿ ಜೆಡಿಎಸ್‌ನಿಂದ ಹೊರಗೆ ಬಂದು ನಿಮ್ಮನ್ನು ಬೆಳೆಸಿದ ಜೆಡಿಎಸ್‌ಗೂ ಕೈ ಕೊಟ್ಟಿರಿ. ಅದೇ ಕುಟುಂಬವಾದ ಇರುವ ಕಾಂಗ್ರೆಸ್‌ನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಿರಿ. ನೀವಾಗಿಯೇ ಕಾಂಗ್ರೆಸ್‌ ಪಕ್ಷ ಬಿಡುವ ವ್ಯವಸ್ಥೆಯನ್ನೇ ಡಿ.ಕೆ. ಶಿವಕುಮಾರ ಮಾಡಿದ್ದಾರೆ. ಅದೇ ನಿಮಗೆ ತಿರುಗು ಬಾಣವಾಗಲಿದೆ ಎಂದು ತಿರುಗೇಟು ಕೊಟ್ಟರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ