ಬಿಜೆಪಿ ಬಗ್ಗೆ ಮಾತನಾಡುವದಕ್ಕಿಂತ ಡಿಕೆಶಿ ತಮ್ಮ ಪಕ್ಷ ಸರಿಮಾಡಿಕೊಳ್ಳಲಿ: ಸಚಿವ ನಾಗೇಶ್

By Govindaraj SFirst Published Jan 2, 2023, 8:59 PM IST
Highlights

ರಾಹುಲ್ ಗಾಂಧಿಯವರು ಬಂದು ಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್ ಇಬ್ಬರನ್ನು ಕೈಹಿಡಿದು ಎಳೆದುಕೊಂಡು ಹೋಗಬೇಕಾದ ಸ್ಥಿತಿ ಇರುವಾಗ ಡಿಕೆಶಿ ಅವರು ಬಿಜೆಪಿ ಪಕ್ಷದ ನಾಯಕತ್ವದ ಬಗ್ಗೆ ಮಾತನಾಡುವುದಕ್ಕೆ ಏನಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜ.02):
ರಾಹುಲ್ ಗಾಂಧಿಯವರು ಬಂದು ಸಿದ್ದರಾಮಯ್ಯ ಮತ್ತು ಡಿ. ಕೆ ಶಿವಕುಮಾರ್ ಇಬ್ಬರನ್ನು ಕೈಹಿಡಿದು ಎಳೆದುಕೊಂಡು ಹೋಗಬೇಕಾದ ಸ್ಥಿತಿ ಇರುವಾಗ ಡಿಕೆಶಿ ಅವರು ಬಿಜೆಪಿ ಪಕ್ಷದ ನಾಯಕತ್ವದ ಬಗ್ಗೆ ಮಾತನಾಡುವುದಕ್ಕೆ ಏನಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ತಿರುಗೇಟು ನೀಡಿದ್ದಾರೆ. ಮಡಿಕೇರಿಯ ವಿದ್ಯಾನಗರ ವಾರ್ಡಿನಲ್ಲಿ ಬಿಜೆಪಿಯಿಂದ ನಡೆದ ಬೂತ್ ವಿಜಯ್ ಅಭಿಯಾನಕ್ಕೆ ಚಾಲನೆ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. 

ರಾಜ್ಯ ಬಿಜೆಪಿಯಲ್ಲಿ ಸಮರ್ಥ ನಾಯಕರಿಲ್ಲ, ಈಗಿರುವ ನಾಯಕರು ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಬಿಜೆಪಿಗೆ ಸೋಲು ಖಚಿತ ಎಂದು ರಾಷ್ಟ್ರನಾಯಕರ ಮೊರೆ ಹೋಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿರುವ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ. ಡಿಕೆಶಿ ಮೊದಲು ಅವರ ಪಕ್ಷದ ಬೂತ್ ಮಟ್ಟ ಅಥವಾ ಜಿಲ್ಲಾಮಟ್ಟದಲ್ಲಿ ಯಾವುದಾದರೂ ನಿರ್ಣಯ ಕೈಗೊಳ್ಳಲು ಆಗುತ್ತಾ ಎಂದು ಪ್ರಶ್ನಿಸಿದರು. ಕಾಂಗ್ರೆಸಿನಲ್ಲಿ ಸಿದ್ದರಾಮಯ್ಯ, ಡಿಕೆಶಿ ಒಟ್ಟಾಗಿ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಆ ಪಕ್ಷದ ಇದೆ. ಇಂತಹ ದಡ್ಡ ಪಕ್ಷ, ಇಂತಹವರು ಬಿಜೆಪಿ ಬಗ್ಗೆ ಮಾತನಾಡಲು ಏನಿದೆ. 

Kodagu: ವರ್ಷದ ಕೊನೆಯ ಸೂರ್ಯಾಸ್ತ ಕಣ್ತುಂಬಿಕೊಂಡ ಪ್ರವಾಸಿಗರು!

ಗುಜರಾತಿನಲ್ಲಿ ಶೇ 53 ಕ್ಕಿಂತಲೂ ಹೆಚ್ಚು ಮತ ಪಡೆದು ಪಕ್ಷದ ನಿರೀಕ್ಷೆಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲುವು ಪಡೆದಿದ್ದೇವೆ. ನಮ್ಮ ಗೆಲುವು ಇರುವುದು ಬೂತ್ ಮಟ್ಟದ ಕಾರ್ಯಕರ್ತರಿಂದ ಎಂದು ಅಲ್ಲಿ ಸಹ ಪಕ್ಷದ ಹಿರಿಯರು ಹೇಳಿದ್ದಾರೆ. ಅದನ್ನು ನಾವು ಕಂಡುಕೊಂಡಿದ್ದೇವೆ. ಆದ್ದರಿಂದ ಡಿಕೆಶಿ ನಮಗೆ ಅಡ್ವೈಸ್ ಮಾಡುವುದಕ್ಕಿಂತ ಅವರ ಪಕ್ಷದಲ್ಲಿರುವ ಇರುವ ಸಮಸ್ಯೆಗಳ ಸರಿಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಇನ್ನು ಜೆಡಿಎಸ್ ಗೆದ್ದರೆ ರಾಜ್ಯ ಒಂದು ಕುಟುಂಬದ ಎಟಿಎಂ ಆಗಲಿದೆ ಎಂದು ಅಮಿತ್ ಶಾ ಹೇಳಿರುವುದಕ್ಕೆ ಅಮಿತ್ ಶಾ ಅವರು ದೇವೇಗೌಡರ ಉಗುರಿಗೂ ಸಮಾನರಲ್ಲ ಎಂದು ಹೇಳಿರುವ ಮಾಜಿ ಸಿಎಂ ಹೆಚ್‍ಡಿಕೆಗೂ ತಿರುಗೇಟು ನೀಡಿದ ಸಚಿವ ಬಿ.ಸಿ. ನಾಗೇಶ್ ಹೆಚ್‍ಡಿಕೆಗೆ ಹತಾಶೆ ಆಗಿರಬೇಕು. 

ಹೀಗಾಗಿ ಈ ರೀತಿ ಮಾತನಾಡಿರಬಹುದು, ಕುಮಾರಸ್ವಾಮಿ ಅವರು ಯಾವಾಗಲೂ ಈ ರೀತಿ ಮಾತನಾಡುವವರಲ್ಲ. ಬಹುಮತ ಪಡೆದು ಯಾವಾಗಲೂ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುವವರಲ್ಲ. ನಾವು ಎಷ್ಟೋ ಸೀಟು ಗೆದ್ದರೆ ಸಾಕು, ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದುಕೊಂಡಿದ್ದಾರೆ. ಅಂತಹವರ ಬಗ್ಗೆ ಏನು ಹೇಳುವುದು ಎಂದು ವ್ಯಂಗ್ಯ ಮಾಡಿದರು. ಮಂಡ್ಯದಿಂದಲೇ ಬಿಜೆಪಿಯನ್ನು ಮುಗಿಸುವ ಕೆಲಸ ಆರಂಭವಾಗಲಿದೆ ಎಂದು ಹೆಚ್‍ಡಿಕೆ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ. ನಾಗೇಶ್ ಅವತ್ತಿನ ಓಸ್ಟ್ ಪವರ್ ಫುಲ್ ನಾಯಕರಾಗಿದ್ದ ನೆಹರು ಅವರು ರಾಷ್ಟ್ರೀಯ ವಿಚಾರ ಹೇಳುವವರನ್ನು ಮುಗಿಸಿಬಿಡುತ್ತೇವೆ ಎಂದಿದ್ದರು. 

ಹೊಸ ವರ್ಷಕ್ಕೆ ಕೊಡಗಿನ‌ ಪ್ರಮುಖ ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಏರಿಕೆ!

ಇವತ್ತು ಅಂತಹ ಪವರ್ ಫುಲ್ ಲೀಡರ್ ಕಾಂಗ್ರೆಸಿನಲ್ಲಿ ಯಾರೂ ಇಲ್ಲ ಎಂದು ಹೇಳುವ ಮೂಲಕ ಇನ್ನು ಜೆಡಿಎಸ್‍ನಿಂದ ಏನು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅವರ ಹೆಸರು ಹೇಳದೆ ಟೀಕಿಸಿದರು. 1952 ರಿಂದಲೂ ಅಂತಹ ಸಂದರ್ಭದಿಂದಲೇ ಬಿಜೆಪಿ ಬೆಳೆಯುತ್ತಾ ಬಂದಿದೆ. ಇಂದು ಪಕ್ಷ ಎಷ್ಟು ಸೀಟು ಬಯಸಿತ್ತೋ ಅಷ್ಟು ಸ್ಥಾನಗಳನ್ನು ಜನರು ನೀಡಿದ್ದಾರೆ. ಅದೆಲ್ಲವೂ ಸಾಧ್ಯವಾಗಿರುವುದು ನಮ್ಮ ಸಂಘಟನೆಯ ಕಾರ್ರ್ಯಕರ್ತರ ಶಕ್ತಿಯಿಂದ ಹೊರತ್ತು, ವಿರೋಧ ಪಕ್ಷ ಏನು ಹೇಳುತ್ತದೆ ಎನ್ನುವುದರ ಮೇಲೆ ಅಲ್ಲ ಎಂದರು. ನಾವು ನೆಗೆಟಿವ್ ಅಂಶದ ಮೇಲೆ ಕೆಲಸ ಮಾಡಿಲ್ಲ, ಪಾಸಿಟಿವ್ ಅಂಶದ ಮೇಲೆ ಕೆಲಸ ಮಾಡಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!