ಬಿಜೆಪಿಯೆಂದರೆ ಅಭಿವೃದ್ಧಿ, ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರ: ಸಚಿವ ಶ್ರೀರಾಮುಲು

Published : Oct 07, 2022, 09:30 PM IST
ಬಿಜೆಪಿಯೆಂದರೆ ಅಭಿವೃದ್ಧಿ, ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರ: ಸಚಿವ ಶ್ರೀರಾಮುಲು

ಸಾರಾಂಶ

ರೈತರ ಸಮಸ್ಯೆಗಳ ಪರವಾಗಿ ಈ ಭಾಗದ ಶಾಸಕರು ಸದನದಲ್ಲಿ ಧ್ವನಿಯೆತ್ತುವ ಮೂಲಕ 21-22ನೇ ಸಾಲಿನ ಸುಮಾರು .500 ಕೋಟಿ ಅನುದಾನವನ್ನು ತೆಗೆದಿಡುವಂತಹ ಕಾರ್ಯವನ್ನು ಮುಖ್ಯಮಂತ್ರಿ, ಸಣ್ಣ ನೀರಾವರಿ ಮಂತ್ರಿಗಳು ಮಾಡಿದ್ದಾರೆ ಎಂದ ರಾಮುಲು 

ಸಿರುಗುಪ್ಪ(ಅ.07):  ರಾಜ್ಯ ಸರ್ಕಾರದಿಂದ ರೈತರಿಗಾಗಿ ಹಲವು ಯೋಜನೆಗಳನ್ನು ನೀಡಲಾಗುತ್ತಿದೆ. ಬಿಜೆಪಿಯೆಂದರೆ ಅಭಿವೃದ್ಧಿ, ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರವೆಂಬುದು ಜನರು ತೀರ್ಮಾನ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ತಾಲೂಕಿನ ತೆಕ್ಕಲಕೋಟೆ ಪಟ್ಟಣದ ವಾಲ್ಮೀಕಿ ನಗರದಲ್ಲಿ ಜಿಲ್ಲಾಡಳಿತ, ಸಣ್ಣ ನೀರಾವರಿ, ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ವಸತಿ ಇಲಾಖೆಗಳ ಸಹಯೋಗದಲ್ಲಿ ನಡೆದ ನಡವಿ ಗ್ರಾಮದ ತುಂಗಭದ್ರಾ ನದಿಯಿಂದ ತೆಕ್ಕಲಕೋಟೆ 500 ಎಕರೆ ರೈತರ ಜಮೀನುಗಳಿಗೆ ನೀರಾವರಿ ಸಂಪರ್ಕ ಕಲ್ಪಿಸುವ ಏತ ನೀರಾವರಿ ಯೋಜನೆ ಮತ್ತು ತೆಕ್ಕಲಕೋಟೆ ಪಪಂ ವ್ಯಾಪ್ತಿಯಲ್ಲಿ ನಮ್ಮ ಮನೆ ಯೋಜನೆಯ ಹೆಚ್ಚುವರಿ 450 ಮನೆಗಳ ಕಾಮಗಾರಿ, ಕೊಳಚೆ ಪ್ರದೇಶದ ಅಭಿವೃದ್ಧಿ ಮಂಡಳಿ ವತಿಯಿಂದ ಮಂಜೂರಾದ 350 ಮನೆಗಳ ಕಾಮಗಾರಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು. ಜನರ ತೀರ್ಮಾನದಿಂದಲೇ ಇಲ್ಲಿನ ಶಾಸಕರಾದ ಸೋಮಲಿಂಗಪ್ಪ ಅವರು 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದರಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಪಕ್ಷ ಬಯಸಿದರೆ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ: ಶ್ರೀರಾಮುಲು

ಈ ಭಾಗದ ರೈತರ ಪರವಾದ ಯೋಜನೆಗಳ ಬಗ್ಗೆ, ರೈತರ ಸಮಸ್ಯೆಗಳ ಪರವಾಗಿ ಈ ಭಾಗದ ಶಾಸಕರು ಸದನದಲ್ಲಿ ಧ್ವನಿಯೆತ್ತುವ ಮೂಲಕ 21-22ನೇ ಸಾಲಿನ ಸುಮಾರು .500 ಕೋಟಿ ಅನುದಾನವನ್ನು ತೆಗೆದಿಡುವಂತಹ ಕಾರ್ಯವನ್ನು ಮುಖ್ಯಮಂತ್ರಿ, ಸಣ್ಣ ನೀರಾವರಿ ಮಂತ್ರಿಗಳು ಮಾಡಿದ್ದಾರೆ ಎಂದರು.

ಕೊಪ್ಪಳ ಕ್ಷೇತ್ರದ ಸಂಸದ ಸಂಗಣ್ಣ ಕರಡಿ ಮಾತನಾಡಿ, ರಾಜ್ಯದ ಬಡ ಜನತೆಯ ಅಭಿವೃದ್ಧಿಗಾಗಿ ನೂರಾರು ಮನೆಗಳನ್ನು ವಿವಿಧ ಯೋಜನೆಗಳಡಿ ನೀಡಲಾಗಿದೆ ಎಂದರು. ಶಾಸಕ ಎಂ.ಎಸ್‌. ಸೋಮಲಿಂಗಪ್ಪ ಮಾತನಾಡಿ, ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಕುರಿತು ಶ್ರೀರಾಮುಲು ಜತೆಗೂಡಿ ಪ್ರಯತ್ನ ನಡೆಸಲಾಗುವುದು ಎಂದರು.

ಸಚಿವ ಆನಂದ ಸಿಂಗ್‌ ಮನೆ ಸರ್ವೆ ನಡೆಸಿ, ಒತ್ತುವರಿಯಾಗಿದ್ದರೆ ತೆರವುಗೊಳಿಸಲಿ: ನಬಿಸಾಬ್‌

ತಾಲೂಕಿನ ಗ್ರಾಪಂ ವ್ಯಾಪ್ತಿಯನ್ನೊಳಗೊಂಡು ಈಗಾಗಲೇ 3 ಸಾವಿರ ಮನೆಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ .500 ಕೋಟಿ ವೆಚ್ಚದಲ್ಲಿ ಒಂದು ಸಾವಿರ ಎಕರೆಗೂ ಅಧಿಕ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. .35 ಕೋಟಿ ವೆಚ್ಚದಲ್ಲಿ ಬಲಕುಂದಿ ಮುದೇನೂರು ಗ್ರಾಮದಲ್ಲಿ ಸೇತುವೆಯೊಂದಿಗಿನ ಜಲಾಶಯದ ಶಂಕುಸ್ಥಾಪನೆ, ಸಿರುಗುಪ್ಪ ಕುಡಿಯುವ ನೀರಿನ ಕೆರೆ, ರಾರಾವಿ ಸೇತುವೆ, ತಾಲೂಕು ಕ್ರೀಡಾಂಗಣದ ಉದ್ಘಾಟನೆ ಮುಖ್ಯಮಂತ್ರಿಗಳಿಂದ ನೆರವೇರುವುದೆಂದು ಹೇಳಿದರು.

ಸಂಸದ ವೈ. ದೇವೆಂದ್ರಪ್ಪ, ಮಾಜಿ ಸಂಸದೆ ಜೆ. ಶಾಂತಾ, ಕ.ರಾ. ಜವಳಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸಿ. ಮೃತ್ಯುಂಜಯಸ್ವಾಮಿ, ಉತ್ತರ ವಲಯದ ಮುಖ್ಯ ಎಂಜಿನಿಯರ್‌ ಪ್ರಕಾಶ ಶ್ರೀಹರಿ ಬಿ., ಕಲಬುರ್ಗಿ ವೃತ್ತದ ಅಧೀಕ್ಷಕ ಅಭಿಯಂತರ ಸುರೇಶ್‌ ಎಲ್‌. ಶರ್ಮ, ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಡಿ, ತಹಸೀಲ್ದಾರ್‌ ಎನ್‌.ಆರ್‌. ಮಂಜುನಾಥಸ್ವಾಮಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಮುರಾರಿಗೌಡ, ತೆಕ್ಕಲಕೋಟೆ ಪಪಂ ಅಧ್ಯಕ್ಷೆ ರುದ್ರಮ್ಮ, ಉಪಾಧ್ಯಕ್ಷೆ ದೊಡ್ಡರುದ್ರಮ್ಮ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣ ಇದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ