ಗ್ಯಾರಂಟಿ​ ಯೋಜನೆಗಳ ಜಾರಿ ಅಸಾ​ಧ್ಯ​ವಾ​ದರೆ ಅಧಿಕಾರ ಬಿಡಿ: ಶಾಸಕ ಆರಗ ಜ್ಞಾನೇಂದ್ರ

By Kannadaprabha News  |  First Published Jun 20, 2023, 1:20 AM IST

ಕಾಂಗ್ರೆಸ್‌ ನೀಡಿರುವ ಭರವಸೆಯಂತೆ ಜುಲೈ 1ನೇ ತಾರೀಖಿನಿಂದ ಅಕ್ಕಿ ವಿತರಣೆ ಸೇರಿದಂತೆ ಎಲ್ಲ ಭರವಸೆಗಳನ್ನು ಜಾರಿ ಮಾಡದಿದ್ದಲ್ಲಿ ಅಧಿಕಾರ ಬಿಟ್ಟು ಇಳಿಯಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.


ತೀರ್ಥಹಳ್ಳಿ (ಜೂ.20): ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರ ಅಧಿಕಾರಕ್ಕೆ ಒಂದು ತಿಂಗಳು ಕಳೆದಿದ್ದರೂ ಚುನಾವಣೆಯಲ್ಲಿ ಮತದಾರರಿಗೆ ನೀಡಿರುವ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ ನೀಡಿರುವ ಭರವಸೆಯಂತೆ ಜುಲೈ 1ನೇ ತಾರೀಖಿನಿಂದ ಅಕ್ಕಿ ವಿತರಣೆ ಸೇರಿದಂತೆ ಎಲ್ಲ ಭರವಸೆಗಳನ್ನು ಜಾರಿ ಮಾಡದಿದ್ದಲ್ಲಿ ಅಧಿಕಾರ ಬಿಟ್ಟು ಇಳಿಯಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಮಂಡಲ ಬಿಜೆಪಿ ವತಿಯಿಂದ ಸೋಮವಾರ ಪಟ್ಟಣದಲ್ಲಿ ನಡೆಸಿದ ಪ್ರತಿಭಟನಾ ಮೆರವಣಿಗೆಯ ನಂತರ ತಾಲೂಕು ಕಚೇರಿ ಎದುರು ನಡೆಸಿದ ಸಭೆಯಲ್ಲಿ ಮಾತನಾಡಿ, ಅನ್ನ ಭಾಗ್ಯ ಯೋಜನೆಗೆ ಕೊರೊನಾ ನಂತರವೂ 80 ಕೋಟಿ ಬಿಪಿಎಲ್‌ ಕಾರ್ಡುದಾರರಿಗೆ 5 ಕೆಜಿ ಅಕ್ಕಿ ಕೊಡುತ್ತಿರುವ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಲು ಸಾಧ್ಯವಾಗದಿದ್ದರೆ, ಅಕ್ಕಿಯ ಮೊಬಲಗನ್ನು ಫಲಾನುಭವಿಗಳ ಖಾತೆಗೆ ಹಾಕಬಹುದಾಗಿದೆ ಎಂದರು.

Tap to resize

Latest Videos

ಬೆಳಗಾವಿ ಕ್ಷೇತ್ರದ ಜನರ ಉಪಕಾರ ಮರೆಯಲು ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಸುಖ​ದ ಸಿಂಹಾ​ಸ​ನ​ದಲ್ಲಿ ಕೂರಲು ಬಿಡ​ಲ್ಲ: ‘ಶಕ್ತಿ’ ಯೋಜನೆಯಲ್ಲಿ ಶೇ.50 ಮಲೆನಾಡು ಭಾಗದ ಮಹಿಳೆಯರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಸೌಲಭ್ಯ ಇಲ್ಲದ ಕಡೆಗಳಲ್ಲಿ ಹೆಚ್ಚು ಸಂಖ್ಯೆಯ ಬಸ್‌ಗಳನ್ನು ಓಡಿಸಬೇಕು. ಮಹಿಳೆಯರಿಗೆ ಖಾಸಗಿ ಬಸ್ಸುಗಳಲ್ಲೂ ಸಂಚರಿಸಲು ಸರ್ಕಾರ ಉಚಿತ ಪಾಸ್‌ ವ್ಯವಸ್ಥೆಯನ್ನು ಕಲ್ಪಿಸಬೇಕು. ವಿದ್ಯುತ್‌ ಧಾರಣೆ ಏರಿಕೆಯಿಂದ ಗ್ರಾಹಕರು ದುಪ್ಪಟ್ಟು ಬಿಲ್‌ ತೆರಬೇಕಾಗಿದೆ. ಕೆಇಆರ್‌ಸಿ ತೀರ್ಮಾನದಂತೆ ದರ ಏರಿಕೆಯಾಗಿದ್ದರೂ ಅದನ್ನು ತಡೆಹಿಡಿಯುವ ಅಧಿಕಾರ ಸರ್ಕಾರಕ್ಕಿದೆ. ಆದ್ದರಿಂದ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಗೃಹ ಸಚಿವ ಅವ​ಧಿ​ಯ​ಲ್ಲಿ ಕ್ಷೇತ್ರಾ​ಭಿ​ವೃ​ದ್ಧಿಗೆ ಹೆಚ್ಚಿನ ಅನುದಾನ: ಕಳೆದ ಅವಧಿಯಲ್ಲಿ ನನಗೆ ಗೃಹ ಸಚಿವನಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆತ ಕಾರಣ ಅತಿ ಕಡಿಮೆ ಅವಧಿಯಲ್ಲಿ ಈ ಕ್ಷೇತ್ರಕ್ಕೆ .3254 ಕೋಟಿಯಷ್ಟುದೊಡ್ಡ ಮೊತ್ತದ ಅನುದಾನವನ್ನು ತರುವುದಕ್ಕೆ ಸಾಧ್ಯವಾಗಿದೆ. ಈ ಅನುದಾನದಲ್ಲಿ ಪ್ರಸ್ತುತ ಕ್ಷೇತ್ರಾದ್ಯಂತ ನಡೆಯುತ್ತಿರುವ ಕಾಮಗಾರಿಗಳನ್ನು ನೋಡುವುದಕ್ಕೆ ಅತ್ಯಂತ ಸಂತಸ ಎನಿಸುತ್ತದೆ ಎಂದು ನೂತನ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಹಿನ್ನೆಲೆ ಪಟ್ಟಣ ಪಂಚಾಯಿತಿ ವತಿಯಿಂದ ನೀಡಲಾದ ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವ​ರು, ಜನಪ್ರತಿನಿಧಿಗಳಾದ ನಾವುಗಳು ಗೆದ್ದಾಗ ಅಹಂಭಾವ ತೋರದೇ ಅಧಿಕಾರ ನೀಡಿದವರಿಗೆ ತಲೆಬಾಗುವ ಮನೋಭಾವ ಹೊಂದಿರಬೇಕು. ಮತದಾರರ ಬೆಂಬಲದಿಂದ ದೊರಕುವ ಅಧಿಕಾರ ಕೇವಲ ಅಲಂಕಾರಕ್ಕಲ್ಲ ಎಂಬುದನ್ನೂ ಅರಿತಿರಬೇಕು. ಈ ಹಿನ್ನೆಲೆ ಮಹನೀಯರ ಮಾರ್ಗದರ್ಶನದಲ್ಲಿ ರಾಜಕೀಯ ಸಂಸ್ಕಾರವನ್ನು ಪಡೆದಿರುವ ನಾನು ರಾಜಕೀಯವನ್ನು ವ್ರತವಾಗಿ ಸ್ವೀಕರಿಸಿ, ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.

ಮೇಕೆದಾಟು ಯೋಜನೆಯಿಂದ ಹಲವು ಜಿಲ್ಲೆಗೆ ನೀರು: ಡಿ.ಕೆ.ಶಿವಕುಮಾರ್‌

ರಾಜಕಾರಣಿ ಆದವನಿಗೆ ಯಶಸ್ಸು ದೊರೆತು ಎತ್ತರಕ್ಕೆ ಹೋದಾಗ ಆತನಿಗೆ ಬಾಗುವ ಗುಣ ಇರಬೇಕು. ನನಗೆ ರಾಜಕೀಯ ಮಾರ್ಗದರ್ಶನ ಮಾಡಿದವರು ಮತ್ತು ನನಗೆ ಜೀವನವನ್ನು ನೀಡಿದವರು ನೀಡಿದ ಸಂಸ್ಕಾರದ ಫಲ ಮತ್ತು ಬಡತನವನ್ನು ಅನುಭವಿಸಿದ ನನಗೆ ಅಸಹಾಯಕರ ಮಾನಸಿಕ ಸ್ಥಿತಿಯನ್ನೂ ಅರಿತಿದ್ದೇನೆ. ರಾಜಕೀಯ ಭಿನ್ನತೆಯನ್ನು ಮರೆತು ಎಲ್ಲರೂ ಸೇರಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸೋಣ ಎಂದೂ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪಪಂ ಅಧ್ಯಕ್ಷೆ ಸುಶೀಲಾ ಶೆಟ್ಟಿಶಾಸಕರನ್ನು ಅಭಿನಂದಿಸಿ, ರಾಜಕೀಯವಾಗಿ ನಾವುಗಳು ಬೇರೆ ಪಕ್ಷದವರಾಗಿದ್ದರೂ ಪಟ್ಟಣದ ಅಭಿವೃದ್ಧಿಯಲ್ಲಿ ಶಾಸಕರು ಪ.ಪಂ.ಯ ಹಿತವನ್ನು ಬಯಸಿ, ತಾರತಮ್ಯವಿಲ್ಲದೇ ನಮಗೆ ಬೆಂಬಲ ನೀಡುತ್ತಿರುವುದಕ್ಕೆ ಆಭಾರಿಯಾಗಿದ್ದೇವೆ. ಪಟ್ಟಣಕ್ಕೆ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿವೆ. ಅವರ ಪೂರ್ಣ ಸಹಕಾರವನ್ನು ಬಯಸುತ್ತೇವೆ ಎಂದರು.

click me!