ಕೇಂದ್ರಕ್ಕೆ ಬಿಜೆಪಿ ನಾಯಕರು ರಾಜ್ಯದ ಪಾಲು ಕೇಳಲಿ: ಸಚಿವ ಮಧು ಬಂಗಾರಪ್ಪ

By Kannadaprabha News  |  First Published Jun 20, 2023, 12:30 AM IST

ಜನರಿಗೆ ಕಾಂಗ್ರೆಸ್‌ನವರು 15 ಕೆ.ಜಿ. ಅಕ್ಕಿ ಕೊಡಲಿ ಎನ್ನುತ್ತಿರುವ ಬಿಜೆಪಿ ನಾಯಕರು ಜಿಎಸ್‌ಟಿ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲು ಬಗ್ಗೆ ಕೇಳಿದ್ದಾರಾ ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.


ಶಿವಮೊಗ್ಗ (ಜೂ.20): ಜನರಿಗೆ ಕಾಂಗ್ರೆಸ್‌ನವರು 15 ಕೆ.ಜಿ. ಅಕ್ಕಿ ಕೊಡಲಿ ಎನ್ನುತ್ತಿರುವ ಬಿಜೆಪಿ ನಾಯಕರು ಜಿಎಸ್‌ಟಿ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲು ಬಗ್ಗೆ ಕೇಳಿದ್ದಾರಾ ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು. ನಗ​ರ​ದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋತಿರುವ ಹತಾಶೆಯಲ್ಲಿ ಬಿಜೆಪಿಯವರು ಕಾಂಗ್ರೆಸ್‌ ಬಗ್ಗೆ ಟೀಕೆ ಮಾಡುತ್ತಿದ್ದಾರೆ. 

ಅದು ಕೊಡಿ, ಇದು ಕೊಡಿ ಎನ್ನುತ್ತಿರುವ ಬಿಜೆಪಿ ನಾಯಕರು ರಾಜ್ಯದಲ್ಲಿ ಪ್ರತಿಭಟನೆ ಮಾಡುತ್ತಾರೆ. ಆದರೆ, ಇದುವರೆಗೆ ಪ್ರಧಾನಿ ಮೋದಿ ಮನೆ ಎದುರು ಹೋಗಿ ರಾಜ್ಯದ ಪಾಲನ್ನು ಕೇಳಿ ಪ್ರತಿಭಟನೆ ಮಾಡಿದ್ದಾರಾ? ರಾಜ್ಯದಿಂದ ನೀಡಿದ್ದ ತೆರಿಗೆಯ ಪಾಲು ವಾಪಸ್‌ ಕೊಡಿ ಎಂದು ಸಂಸದರು ಮೋದಿ ಅವರನ್ನು ಕೇಳಬೇಕಿತ್ತು, ಕೇಳಿದ್ದಾರಾ? ಎಂದು ಹರಿಹಾಯ್ದರು.

Latest Videos

undefined

ಬಡವರ ಅನ್ನಕ್ಕೆ ಕೇಂದ್ರ ಸರ್ಕಾರದಿಂದ ಅಡ್ಡಗಾಲು: ಸಚಿವ ತಿಮ್ಮಾಪುರ

ಬಿಜೆಪಿ ಕೆಟ್ಟ​ ಬು​ದ್ಧಿ ನಿಲ್ಲಿ​ಸ​ಲಿ: ಕೇಂದ್ರ, ರಾಜ್ಯದ ನಡುವೆ ಹೊಂದಾಣಿಕೆ ಇರಬೇಕು. ಆದರೆ, ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ. ನಾವು ಕೇಳುತ್ತಿರೋದು ಹೊಟ್ಟೆಗೆ ಅನ್ನ ಹೊರತು, ಬೇರೆ ಏನೂ ಕೇಳುತ್ತಿಲ್ಲ. ನಾವು ಬೇರೆ ಏನೂ ವ್ಯಾಪಾರ ಮಾಡುತ್ತಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ಅಕ್ಕಿ ಕೊಡಲ್ಲ ಅಂತಾರೆ, ಇಲ್ಲಿನ ಬಿಜೆಪಿ ನಾಯಕರು 15 ಕೆಜಿ ಕೊಡಿ ಅಂತಿದ್ದಾರೆ. ಬಿಜೆಪಿಯವರು ಇನ್ನಾದರೂ ಕೆಟ್ಟ ಬುದ್ಧಿಯನ್ನು ನಿಲ್ಲಿಸಬೇಕು. ಬಿಜೆಪಿ ಎಂದರೆ ಬ್ಯುಸಿನೆಸ್‌ ಜನತಾ ಪಾರ್ಟಿ, ಬ್ರಿಟಿಷ್‌ ಜನತಾ ಪಾರ್ಟಿ ಎಂದು ಜನತೆ ತೋರಿಸಿಕೊಟ್ಟಿದ್ದಾರೆ ಎಂದ ವಾಗ್ದಾಳಿ ನಡೆಸಿದರು.

ಕೇಂದ್ರಕ್ಕೆ ಅತಿ ಹೆಚ್ಚಿನ 3 ಲಕ್ಷ ಕೋಟಿಯಷ್ಟು ಜಿಎಸ್‌ಟಿ ತೆರಿಗೆ ರಾಜ್ಯದಿಂದಲೇ ಹೋಗುತ್ತೆ. ಆದ್ರೆ, ಅವರು ನಮಗೆ 50ರಿಂದ 60 ಸಾವಿರ ಕೋಟಿ ಕೊಡ್ತಾರೆ ಅಷ್ಟೇ. ರಾಜ್ಯದ ವಿದ್ಯಾರ್ಥಿಗೆ ಕೇಂದ್ರದಿಂದ 2,500ದಷ್ಟು ವಿದ್ಯಾರ್ಥಿ ವೇತನ ಕೊಡುತ್ತಿದ್ದಾರೆ. ಅದೇ ಗುಜರಾತ್‌ ಸೇರಿದಂತೆ ಬೇರೆ ರಾಜ್ಯಕ್ಕೆ ಪ್ರತಿ ವಿದ್ಯಾರ್ಥಿಗೆ 6500 ರವರೆಗೂ ಕೊಡ್ತಾರೆ. ಇಲ್ಲೂ ತಾರತಮ್ಯ ಮಾಡುತ್ತಾರೆ ಎಂದು ಆರೋಪಿಸಿದರು.

ಬೆಳಗಾವಿ ಕ್ಷೇತ್ರದ ಜನರ ಉಪಕಾರ ಮರೆಯಲು ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಸೊರಬ ಕ್ಷೇತ್ರದಲ್ಲಿ ಕೆಲವರು ಅನಗತ್ಯ ಟೀಕೆ ಮಾಡುತ್ತಿದ್ದಾರೆ. ಸೊರಬ ಕ್ಷೇತ್ರದ ಜನತೆ ನನಗೆ 65,000 ಮತಗಳ ಲೀಡ್‌ ನೀಡಲು ಅವರಿಗೆ ತಲೆಕೆಟ್ಟಿಲ್ಲ. ಟೀಕೆ ಮಾಡುವವರು ಜನತೆಗೆ ಮಾತನಾಡುತ್ತಿದ್ದಾರೆ. ಅದಕ್ಕೆ ಜನರೇ ಉತ್ತರ ನೀಡುತ್ತಾರೆ
- ಮಧು ಬಂಗಾ​ರಪ್ಪ, ಉಸ್ತು​ವಾರಿ ಸಚಿ​ವ

click me!