Anti conversion Bill : ಕಾಂಗ್ರೆಸ್ - ಬಿಜೆಪಿ ನಡುವೆ ಮ್ಯಾಚ್‌ ಫಿಕ್ಸಿಂಗ್‌ : ರೇವಣ್ಣ

By Kannadaprabha News  |  First Published Dec 24, 2021, 10:32 AM IST
  •  ಬಿಜೆಪಿ ಹಾಗೂ ಕಾಂಗ್ರೆಸ್‌ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿ ಮ್ಯಾಚ್‌ ಫಿಕ್ಸಿಂಗ್‌ 
  • ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡು ಮತಾಂತರ ನಿಷೇಧ ಮಸೂದೆ ತಂದಿವೆ
  • ಜೆಡಿಎಸ್‌ ಅನ್ನು ಬಿಜೆಪಿಯ ಬಿ-ಟೀಂ ಎನ್ನುವ ಕಾಂಗ್ರೆಸ್ಸಿನವರೇ ಬಿಜೆಪಿ ಜತೆ ಶಾಮೀಲಾಗಿ ವಿಧೇಯಕ ತಂದಿದ್ದಾರೆ

ವಿಧಾನಸಭೆ (ಡಿ.24) :  ಬಿಜೆಪಿ  (BJP) ಹಾಗೂ ಕಾಂಗ್ರೆಸ್‌ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡು ಮತಾಂತರ ನಿಷೇಧ ಮಸೂದೆ ತಂದಿವೆ. ಜೆಡಿಎಸ್‌ (JDS) ಅನ್ನು ಬಿಜೆಪಿಯ (BJP) ಬಿ-ಟೀಂ ಎನ್ನುವ ಕಾಂಗ್ರೆಸ್ಸಿನವರೇ (Congress) ಬಿಜೆಪಿ ಜತೆ ಶಾಮೀಲಾಗಿ ವಿಧೇಯಕ ತಂದಿದ್ದಾರೆ ಎಂದು ಜೆಡಿಎಸ್‌ (JDS) ಸದಸ್ಯ ಎಚ್‌.ಡಿ. ರೇವಣ್ಣ ಆರೋಪ ಮಾಡಿದರು. ಮತಾಂತರ ನಿಷೇಧ ಮಸೂದೆ ಕುರಿತು ಮಾತನಾಡಿದ ಅವರು, 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರೇ ವಿಧೇಯಕವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಬರೆದಿದ್ದಾರೆ. ಅವರು ಕಡತ ವಾಪಸು ತೆಗೆದುಕೊಂಡಿದ್ದೇನೆ ಎಂದು ಬರೆದಿದ್ದರೆ ಈ ಕ್ಷಣವೇ ರಾಜೀನಾಮೆ (Resignation) ನೀಡುತ್ತೇನೆ. ಆಗಿನಿಂದಲೂ ಚರ್ಚಿಸಿ ಈಗ ಒಟ್ಟಾಗಿ ಒಪ್ಪಂದ ಮಾಡಿಕೊಂಡು ವಿಧೇಯಕ ತಂದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಚುನಾವಣೆ (Election) ಬಂದಾಗ ಕೋಮುವಾದಿಗಳನ್ನು ದೂರ ಇಡಬೇಕು ಎನ್ನುವ ನೀವೇ ಬಿಜೆಪಿ (BJP) ಜತೆ ಸೇರಿಕೊಂಡು ಬಿಲ್‌ ತಂದಿದ್ದೀರಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು. ಈ ಮಾತಿಗೆ ಸಿದ್ದರಾಮಯ್ಯ, ನನ್ನ ಜೀವನದಲ್ಲೇ ಮ್ಯಾಚ್‌ ಫಿಕ್ಸಿಂಗ್‌ ರಾಜಕೀಯ ನನಗೆ ಗೊತ್ತಿಲ್ಲ. ಯಾವ ಮುಖ್ಯಮಂತ್ರಿ, ಸಚಿವರ ಮನೆಗೂ ಹೋದವನಲ್ಲ. ನನ್ನದು ನೇರ ರಾಜಕಾರಣ ಎಂದು ಪ್ರತಿಕ್ರಿಯಿಸಿದರು.

Tap to resize

Latest Videos

ಮಸೂದೆ ತನ್ನಿ :  ಕುಟುಂಬ ರಾಜಕಾರಣಕ್ಕೆ (Family Politics) ಇತಿಶ್ರೀ ಹಾಡಲು ಮಸೂದೆ ತಂದು ರಾಷ್ಟ್ರೀಯ ಪಕ್ಷಗಳು ಇದಕ್ಕೆ ಒಪ್ಪಿಗೆ ಸೂಚಿಸಲಿ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ (HD Revanna) ಸವಾಲು ಹಾಕಿದ್ದಾರೆ. ತಮ್ಮ ಪುತ್ರ ಸೂರಜ್‌ ರೇವಣ್ಣ (Suraj Revanna) ರಾಜಕೀಯಕ್ಕೆ (Politics) ಪ್ರವೇಶಿಸಿದ ಹಿನ್ನೆಲೆಯಲ್ಲಿ ವ್ಯಕ್ತವಾದ ಟೀಕೆಗಳಿಗೆ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಕುಟುಂಬ ರಾಜಕಾರಣಕ್ಕೆ ಇತಿ ಶ್ರೀ ಸಂಬಂಧ ಎರಡು ರಾಷ್ಟ್ರೀಯ ಪಕ್ಷಗಳು ಒಪ್ಪಿಗೆ ಸೂಚಿಸಿ ಮಸೂದೆ ತಂದು ಕೇಂದ್ರಕ್ಕೆ ಈ ಬಗ್ಗೆ ನಿರ್ಣಯ ಕಳುಹಿಸಲಿ. ನಾವು ಸಿದ್ಧ ಇದ್ದೇವೆ. ಇದು ಕುಟುಂಬ ರಾಜಕಾರಣವಲ್ಲ. ದೇವರ ಅನುಗ್ರಹ ಅಷ್ಟೇ. 2023ಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರಿಗೆ ದೇವರು ಶಕ್ತಿ ನೀಡುತ್ತಾನೆ ಎಂದರು.

ಎರಡು ಪಕ್ಷಗಳಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡಿದ್ದರೆ ಮಾಡಿದ ಊಟ ಕರಗುವುದಿಲ್ಲ. ಅವರವರ ಶಕ್ತಿ ಮೇಲೆ ಗೆಲ್ಲುತ್ತಾರೆ. ಹಿಂದಿನ ಬಾಗಿಲಿನಿಂದ ಹೋಗುವುದಿಲ್ಲ. ನಾವು ಜನರ ಮುಂದೆ ಹೋಗಿದ್ದೇವೆ ಎಂದರು.

ಶಾಸಕರ ಸಭೆ : ಕೋವಿಡ್‌ (Covid) ಮೂರನೇ ಅಲೆಗೆ ಸರ್ಕಾರದ ಸಿದ್ಧತೆ, ಮಹದಾಯಿ, ಉತ್ತರ ಕರ್ನಾಟಕದ (North Karnataka) ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಸದನದಲ್ಲಿ ಗಮನ ಸೆಳೆಯಲು ಜೆಡಿಎಸ್‌ ಶಾಸಕರು ತೀರ್ಮಾನಿಸಿದ್ದಾರೆ.

ಜೆಡಿಎಸ್‌ (JDS) ಮುಖಂಡ ಬಂಡೆಪ್ಪ ಕಾಶೆಂಪೂರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸದನದಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ಕೃಷ್ಣಾ, ಮಹದಾಯಿ, ಕೋವಿಡ್‌ ವಿಚಾರ ಸೇರಿದಂತೆ ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರಸ್ತಾಪಿಸಲು ನಿರ್ಧರಿಸಲಾಯಿತು.

ವಿಧಾನಸಭೆಯಲ್ಲಿ ಅಂಗೀಕಾರ : 

  ಹಲವು ವಿರೋಧಗಳ ನಡುವೆ ಮತಾಂತರ ಬಿಲ್ (ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ) (Anti-Conversion Bill) ಕರ್ನಾಟಕ (Karnataka) ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಬೆಳಗಾವಿ (Belagavi) ಸುವರ್ಣ ಸೌಧದಲ್ಲಿ ಗುರುವಾರ ಬೆಳಗ್ಗಿನಿಂದ ಮತಾಂತರ ಬಿಲ್ ಮೇಲೆ ಚರ್ಚೆ ನಡೆಯಿತು.

ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿಕ ನೀಡಿ,  ಮತಾಂತರ ನಿಷೇಧ ವಿಧೇಯಕ ವಿಧಾನ ಸಭೆಯಲ್ಲಿ ಅಂಗೀಕಾರ ಆಗಿದೆ. ಅನೇಕ ಟೀಕೆಗಳನ್ನ ಮಾಡಿದ್ದಾರೆ. ಹಿಡಿನ್ ಅಜೇಂಡಾ ಅಂದಿದ್ದಾರೆ.. ಯಾವುದೇ ಹಿಡನ್ ಅಜೇಂಡಾದಿಂದ ಈ ವಿಧೇಯಕ ತಂದಿಲ್ಲ. ಮತಾಂತರ ಮಾಡುವ ಹಕ್ಕು ಯಾರಿಗು ಇಲ್ಲ.. ಆಮಿಷದ ಮತಾಂತರಕ್ಕೆ ತಡೆಯುವ ಪ್ರಯತ್ನವನ್ನ ಈ ವಿಧೇಯಕದಲ್ಲಿ ತಂದಿದ್ದೇವೆ. ಮತಾಂತರ ಆದ್ರೆ, ದಲಿತರು ತಮಗೆ ಸಿಗುವ ಸೌಲಭ್ಯಗಳನ್ನ ಕಳೆದುಕೊಳ್ತಾರೆ.

ಮತಾಂತರ ನಿಷೇಧ ಕಾಯ್ದೆ ಮಂಡನೆ: ವಿಧೇಯಕದ ಪ್ರಮುಖ ಅಂಶಗಳು ಇಲ್ಲಿವೆ

ಎಸ್.ಸಿ ಮತ್ತು ಎಸ್.ಟಿ ವರ್ಗದವರಿಗೆ ಸರ್ಕಾರದಿಂದ ಮೊದಲು ಸಿಗ್ತಿದ್ದ ಸೌಲಭ್ಯಗಳು ಸಿಗೊದಿಲ್ಲ ಈ ರೀತಿಯ ಅಂಶ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಹಲವು ಕೋಲಾಹಲಗಳ ನಡುವೆ ಗೃಹ ಸಚಿವ ಆರಗ ಜ್ಞಾನೇಂದ್ರ  ಬಿಲ್ ನ್ನು ಮಂಡನೆ ಮಾಡಿದ್ದರು. ಮಂಡನೆ ಆದ ತಕ್ಷಣವೇ ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧ ವ್ಯಕ್ತಪಡಿಸಿಕೊಂಡೇ ಬಂದಿತ್ತು.

click me!