Karnataka Politics: 'ಬಿಜೆಪಿಯಿಂದ ಅಭಿವೃದ್ಧಿಯಾದ್ರೆ ರಾಜಕೀಯದಿಂದಲೇ ನಿವೃತ್ತಿ'

By Kannadaprabha NewsFirst Published Dec 24, 2021, 7:46 AM IST
Highlights

*   ಒಂದು ರುಪಾಯಿ ಅನುದಾನ ತರಲು ಶಾಸಕ ಬಸವರಾಜ ದಢೇಸುಗೂರ್‌ಗೆ ಆಗಿಲ್ಲ
*  ಶ್ರೀಸಾಮಾನ್ಯರು ಜೀವನ ನಡೆಸದಷ್ಟು ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆರಿವೆ
*  ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ

ಕಾರಟಗಿ(ಡಿ.24):  ಕಳೆದ ಮೂರುವರೆ ವರ್ಷಗಳ ಆಡಳಿತಾವಧಿಯಲ್ಲಿ ಪಟ್ಟಣದಲ್ಲಿ ಅಭಿವೃದ್ಧಿಗಾಗಿ ಮಹತ್ವದ ಯೋಜನೆ ಜಾರಿಯಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ್‌ ತಂಗಡಗಿ(Shivaraj Tangadagi) ಸವಾಲು ಹಾಕಿದ್ದಾರೆ. ಇಲ್ಲಿನ ಪುರಸಭೆ ಚುನಾವಣೆ ಅಂಗವಾಗಿ ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್‌(Congress) ಅಭ್ಯರ್ಥಿಗಳ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಈ ವರೆಗೆ ಪುರಸಭೆಗೆ ಒಂದು ರುಪಾಯಿ ಅನುದಾನ ತರಲು ಶಾಸಕ ಬಸವರಾಜ ದಢೇಸುಗೂರ(Basavaraj Dadesugur) ಅವರಿಗೆ ಆಗಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಮಂಜೂರಾದ ಅನುದಾನದಿಂದ ಶಾಸಕರು ಭೂಮಿ ಪೂಜೆ ಮಾಡಿಕೊಂಡು ಓಡಾಡುತ್ತಿದ್ದಾರೆ. ನನ್ನ ಅವಧಿಯಲ್ಲಿ ಕಾರಟಗಿ-ಕನಕಗಿರಿ ತಾಲೂಕು, ಪಪಂ, ಪುರಸಭೆ, ವಿಶೇಷ ಎಪಿಎಂಸಿ, ರೈಸ್‌ ಪಾರ್ಕ್, ಡಿಪ್ಲೊಮಾ ಕಾಲೇಜು, ಕುಡಿಯುವ ನೀರು, ಉಪನೋಂದಣಿ ಕಚೇರಿ, ಕೆರೆ ತುಂಬಿಸುವ ಯೋಜನೆ, ಏತ ನೀರಾವರಿ ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ಕ್ಷೇತ್ರಕ್ಕೆ ನೀಡಿದ್ದೇನೆ ಎಂದು ತಿಳಿಸಿದರು.

Karnataka Politics: ಮತದಾರರೇ ಹಣ ನೀಡಿ ಗೆಲ್ಲಿಸಬೇಕು, ನಾನ್ಯಾರಿಗೂ ದುಡ್ಡು ನೀಡೋದಿಲ್ಲ: ರಾಯರೆಡ್ಡಿ

ಬಿಜೆಪಿ(BJP) ಆಡಳಿತದಲ್ಲಿ ಶ್ರೀಸಾಮಾನ್ಯರು ಜೀವನ ನಡೆಸದಷ್ಟು ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆರಿವೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕನಕಗಿರಿ(Kanakagiri) ಕ್ಷೇತ್ರಕ್ಕೆ ಈ ವರೆಗೂ ಒಂದು ಮಹತ್ವದ ಯೋಜನೆ ಮತ್ತು ಅನುದಾನ ತಂದಿಲ್ಲ. ಒಂದು ವೇಳೆ ಅಂತಹ ಯೋಜನೆ ತಂದಿರುವುದನ್ನು ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಶಾಸಕರಿಗೆ ಸವಾಲು ಹಾಕಿದರು.

ವಾರ್ಡ್‌ 1,2,3,5,7,11ರಲ್ಲಿ ಪ್ರಚಾರ ನಡೆಸಿದರು. ಕವಡೇ ಪೀರ್‌ ದರ್ಗಾ, ಡಾ. ರಾಜ್‌ ರಂಗಮಂದಿರ, ದಲಾಲಿ ಬಜಾರ್‌, ಚನ್ನಳ್ಳಿ ಕ್ರಾಸ್‌, ಚಿಕ್ಕಯ್ಯಪ್ಪ ದೇವಸ್ಥಾನದ ಬಳಿ ಬಹಿರಂಗ ಪ್ರಚಾರ ಸಭೆ ನಡೆಸಿ ಅಭ್ಯರ್ಥಿಗಳ ಪರ ತಂಗಡಗಿ ಮತಯಾಚಿಸಿದರು.

ಇದೇ ವೇಳೆ ಸ್ವಪ್ರಕಾಶ ಹಿರೇಮಠ ಬಿಜೆಪಿ ತೊರೆದು ತಂಗಡಗಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದರು. ಮಾಜಿ ಸಂಸದ ಶಿವರಾಮಗೌಡ, ಮುಕುಂದರಾವ್‌ ಭವಾನಿಮಠ, ಬ್ಲಾಕ್‌ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್‌, ಪ್ರಮುಖರಾದ ಕೆ. ಸಿದ್ಧನಗೌಡ, ಶಶಿಧರಗೌಡ ಪಾಟೀಲ್‌, ಜಿ. ಯಂಕನಗೌಡ, ಬಿ. ಶಿವರೆಡ್ಡಿ ನಾಯಕ, ಅಂಬಣ್ಣ ನಾಯಕ, ಬಸವರಾಜ ನೀರಗಂಟಿ, ಮಹಾಲಕ್ಷ್ಮೀ ಸುಂಕದ, ಭುವನೇಶ್ವರಿ ನಾಯಕ, ಸೌಮ್ಯ ಕಂದಗಲ, ಶರಣಪ್ಪ ಪರಕಿ, ಶರಣಪ್ಪ ಕಾಯಿಗಡ್ಡಿ ಇದ್ದರು.

ಪಕ್ಷಾಂತರಿಗಳಿಗೆ ಜನರಿಂದ ತಕ್ಕ ಪಾಠ

ಕನಕಗಿರಿ: ಅಧಿಕಾರ ಅನುಭವಿಸಿ ಕಾಂಗ್ರೆಸ್ಸಿಗೆ ದ್ರೋಹ ಬಗೆದು ಪಕ್ಷಾಂತರ ಮಾಡಿದವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದರು.  ಡಿ. 27ರಂದು ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆ ಅಂಗವಾಗಿ ಬ್ಲಾಕ್‌ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ವಾರ್ಡ್‌ವಾರು ಪ್ರಚಾರ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

Omicron Variant: ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಗೆ ಒಮಿಕ್ರೋನ್‌ ಕರಿನೆರಳು

ಅಧಿಕಾರ ಮುಗಿದರೂ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಲಾಗಿದ್ದರೂ ಪಕ್ಷದ ಸಿದ್ಧಾಂತವನ್ನು ಗಾಳಿಗೆ ತೂರಿ ಪಕ್ಷೇತರರಾಗಿ ಸ್ಪರ್ಧಿಸಿರುವವರು ವಿಳಾಸವಿಲ್ಲದೆ ಸೋಲಲಿದ್ದಾರೆ. ಪಕ್ಷಾಂತರ ಮಾಡಿರುವವರನ್ನು ಪಕ್ಷ ಮತ್ತು ಮನಸ್ಸಿನಿಂದ ಕಿತ್ತೊಗೆಯುತ್ತೇನೆ ಎಂದರು.

ಇನ್ನೂ ಬಿಜೆಪಿಯವರ ಸುಳ್ಳಿಗೆ ಮರುಳಾಗಬೇಡಿ. ಸುಳ್ಳು ಹೇಳಿ ಮತ ಹಾಕಿಸಿಕೊಂಡು ಅಧಿಕಾರ ಪಡೆಯುವುದಷ್ಟೇ ಅವರಿಗೆ ಗೊತ್ತಿದೆ. ಇದರಿಂದ ಮತದಾರರು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ. ಗಂಗಾಧರಸ್ವಾಮಿ ಮಾತನಾಡಿ, ಕೆಲವರು ತಮ್ಮ ಗೆಲುವಿಗಾಗಿ ಮಾಟ-ಮಂತ್ರ ಮಾಡಿಸಿಕೊಂಡು ಪ್ರಚಾರ ಶುರು ಮಾಡಿದ್ದಾರೆ. ಮತದಾರರು ಜಾಗೃತರಾಗಿರಬೇಕು. ಸತ್ಯಕ್ಕೆ ಜಯ ಸಿಗಲಿದೆ ಎಂದರು.
ಇದಕ್ಕೂ ಮೊದಲು ಕನಕಾಚಲ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿ ವಿವಿಧ ವಾರ್ಡ್‌ಗಳಲ್ಲಿ ಸಭೆ ನಡೆಸಲಾಯಿತು. ಪ್ರಮುಖರಾದ ಅಮರೇಶ ಗೋನಾಳ, ರೆಡ್ಡಿ ಶ್ರೀನಿವಾಸ, ವೀರೇಶ ಸಮಗಂಡಿ, ರಮೇಶ ನಾಯಕ, ಸಿದ್ದಪ್ಪ ನಿರ್ಲೂಟಿ, ಎಸ್‌.ಐ. ಪಾಟೀಲ್‌, ಗುರುಸಿದ್ದಪ್ಪ ಹಾದಿಮನಿ, ಅಭ್ಯರ್ಥಿಗಳಾದ ಖಾದರಬಾಷಾ ಗುಡಿಹಿಂದಲ, ಸಿದ್ಧಾರ್ಥ ಕಲುಬಾಗಿಲಮಠ ಇದ್ದರು.
 

click me!