ಈ ಬಾರಿ ಯಾವುದೇ ಆಪರೇಷನ್‌ನ ಮಾಡಲ್ಲ. ಸದ್ಯ ಬಿಜೆಪಿ 120 ಸ್ಥಾನದಲ್ಲಿ ಗೆಲ್ಲುವ ಸನ್ನಿವೇಶ ಇದೆ. ಸದ್ಯದಲ್ಲೇ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪ್ರವಾಸ ಮಾಡಲಿದ್ದು, 140ರಿಂದ 150 ಸ್ಥಾನ ಖಚಿತವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿವಮೊಗ್ಗ (ಏ.27): ಈ ಬಾರಿ ಯಾವುದೇ ಆಪರೇಷನ್‌ನ ಮಾಡಲ್ಲ. ಸದ್ಯ ಬಿಜೆಪಿ 120 ಸ್ಥಾನದಲ್ಲಿ ಗೆಲ್ಲುವ ಸನ್ನಿವೇಶ ಇದೆ. ಸದ್ಯದಲ್ಲೇ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪ್ರವಾಸ ಮಾಡಲಿದ್ದು, 140ರಿಂದ 150 ಸ್ಥಾನ ಖಚಿತವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಗೆಲ್ಲುವ ವಾತಾವರಣ ಹೆಚ್ಚಿದೆ. ಪಕ್ಷದ ವರಿಷ್ಠರಾಧಿಯಾಗಿ ಎಲ್ಲರೂ ಈಗಾಗಲೇ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಅಭಿವೃದ್ಧಿಯನ್ನು ಜನ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ. ಹೀಗಾಗಿ ಕರ್ನಾಟಕದಲ್ಲಿ ಈ ಬಾರಿ ಯಾವ ಆಪರೇಷನ್ ಮಾಡದೆ ಸ್ಪಷ್ಟಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದರು.
ಮನ್ ಕಿ ಬಾತ್ ಗಿನ್ನಿಸ್ ದಾಖಲೆ: ಪ್ರಧಾನಿ ಮೋದಿ ಅವರ 100ನೇ ಬಾನುಲಿ ಸಂಚಿಕೆ ‘ಮನ್ ಕಿ ಬಾತ್’ ಗಿನ್ನಿಸ್ ದಾಖಲೆ ಸೇರಲಿದೆ. ಏ.30ರಂದು ಬೆಳಗ್ಗೆ 11ರಿಂದ 11.30 ರವರೆಗೆ ಬಿತ್ತರಗೊಳ್ಳಲಿರುವ ಈ ಕಾರ್ಯಕ್ರಮವನ್ನು ದೇಶದ ಕೋಟ್ಯಂತರ ಜನರು ವೀಕ್ಷಣೆ ಮಾಡಲಿದ್ದಾರೆ. ಪ್ರಧಾನಿಯೊಬ್ಬರು ದೇಶದ ಸಣ್ಣ ಸಣ್ಣ ವಿಷಯಗಳನ್ನು ಸಮಸ್ಯೆಗಳನ್ನು, ಸಾಧಕರನ್ನು ಪರಿಚಯಿಸುತ್ತ ಕೋಟ್ಯಂತರ ಅಭಿಮಾನಿಗಳನ್ನು ಸೃಷ್ಟಿಸಿದ ಕಾರ್ಯಕ್ರಮ ಮತ್ತು 30ರಂದು ಏಕಕಾಲದಲ್ಲಿ ದೇಶದ ಕೋಟ್ಯಂತರ ಜನರು ಇದನ್ನು ವೀಕ್ಷಣೆ ಮಾಡುತ್ತಿದ್ದಾರೆ. ಹಾಗಾಗಿ, ಈ ಕಾರ್ಯಕ್ರಮ ಗಿನ್ನಿಸ್ ದಾಖಲೆಗೆ ಸೇರಬಹುದು ಎಂದರು.
ಬಿಜೆಪಿಯ ಹುಸಿ ಭರವಸೆಗಳನ್ನು ಜನ ನಂಬಬಾರದು: ಈಶ್ವರ ಖಂಡ್ರೆ
ಶಿವಮೊಗ್ಗ ಜಿಲ್ಲೆಯಲ್ಲಿಯೂ ಈ ಕಾರ್ಯಕ್ರಮ ವೀಕ್ಷಿಸಲು ಜಿಲ್ಲೆಯ ಎಲ್ಲ 1276 ಬೂತ್‌ಗಳಲ್ಲಿ ದೊಡ್ಡ ಪರದೆಯ ಮೂಲಕ ವೀಕ್ಷಿಸಲು ಅವಕಾಶ ಮಾಡಲಾಗಿದೆ. ಪ್ರತಿ ಬೂತ್‌ನಲ್ಲೂ 100ರಿಂದ 1000 ಜನರು ವೀಕ್ಷಿಸಬಹುದಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮತ್ತಷ್ಟುಮತದಾರರಿಗೆ ತಲುಪಿಸಲು ನಮ್ಮ ಕಾರ್ಯಕರ್ತರು ಸಿದ್ಧರಾಗಿದ್ದಾರೆ. ಇದು ಯಾವುದೇ ರಾಜಕೀಯಕ್ಕಾಗಿ ಅಲ್ಲ. ನಿರಂತರವಾಗಿ ಬಿತ್ತರಗೊಂಡ ಕಾರ್ಯಕ್ರಮದ ಮುಂದುವರಿದ 100ನೇ ಸಂಚಿಕೆಯಾಗಿದೆ ಎಂದರು.
ಪ್ರಧಾನಿ ಅವರು ದೇಶದ ಎಲ್ಲ ಜಿಲ್ಲೆಗಳ, ಹಳ್ಳಿಗಳ ಸಾಧಕರನ್ನು ಗುರುತಿಸಿ ತಮ್ಮ ಭಾಷಣದಲ್ಲಿ ಹೇಳುವುದರಿಂದ ಜನರಿಗೆ ತುಂಬಾ ಆಪ್ತವಾಗುತ್ತಾರೆ. 47ನೇ ಸಂಚಿಕೆಯಲ್ಲಿ ಮೋದಿ ಅವರು ಮತ್ತೂರಿನ ಸಂಸ್ಕೃತ ಗ್ರಾಮದ ಬಗ್ಗೆ ಪ್ರಸ್ತಾಪ ಮಾಡಿದ್ದನ್ನು ಇತ್ತೀಚೆಗೆ ಜಿಲ್ಲೆಯ ಸುರೇಶ್ ಮತ್ತ ಮೈತ್ರಿ ಅವರ ಅಡಕೆ ಹಾಳೆ ಉದ್ಯಮಕ್ಕೆ ಸಂಬಂಧಿಸಿದಂತೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಬಸವಣ್ಣ, ಕುವೆಂಪು ಅವರಂತಹ ಮಹಾನ್ ಪುರುಷರ ಪ್ರಸ್ತಾಪ ಮಾಡಿದ್ದರು ಎಂದರು.
ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸಿಲ್ಲ: ನಿರ್ಮಲಾ ಸೀತಾರಾಮನ್
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಧನಂಜಯ ಸರ್ಜಿ, ಶಿವರಾಜ್, ಶ್ರೀನಾಥ್, ಚಂದ್ರಶೇಖರ್, ಮಹಾಂತೇಶ್ ಮುಂತಾದವರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.