ಡಬಲ್‌ ಎಂಜಿನ್‌ ಸರ್ಕಾರದಿಂದ ಬಡವರಿಗೆ ಲಾಭ: ಕೇಂದ್ರ ಸಚಿವ ಭಗವಂತ ಖೂಬಾ

By Kannadaprabha News  |  First Published Apr 27, 2023, 10:42 PM IST

ಪ್ರತಿ ಗ್ರಾಮದಲ್ಲಿಯೂ ನಮ್ಮ ಡಬಲ್‌ ಇಂಜಿನ ಸರ್ಕಾರದಿಂದ ಎಲ್ಲಾ ಬಡವರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ ನೀಡಲಾಗಿದೆ. 5 ಲಕ್ಷದವರೆಗೆ ಆಯುಷ್ಮಾನ್‌ ಕಾರ್ಡ್‌ ಮೂಲಕ ಉಚಿತ ಚಿಕಿತ್ಸೆ, ರೈತರ ಮಕ್ಕಳಿಗೆ ರೈತ ವಿದ್ಯಾನಿ​ಧಿಯಡಿ ಪ್ರೋತ್ಸಾಹ ಧನ ನೀಡುತ್ತಿದ್ದೇವೆ.


ಹುಮನಾಬಾದ್‌ (ಏ.27): ಪ್ರತಿ ಗ್ರಾಮದಲ್ಲಿಯೂ ನಮ್ಮ ಡಬಲ್‌ ಇಂಜಿನ ಸರ್ಕಾರದಿಂದ ಎಲ್ಲಾ ಬಡವರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ ನೀಡಲಾಗಿದೆ. 5 ಲಕ್ಷದವರೆಗೆ ಆಯುಷ್ಮಾನ್‌ ಕಾರ್ಡ್‌ ಮೂಲಕ ಉಚಿತ ಚಿಕಿತ್ಸೆ, ರೈತರ ಮಕ್ಕಳಿಗೆ ರೈತ ವಿದ್ಯಾನಿ​ಧಿಯಡಿ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ಹೀಗೆ ಪ್ರತಿ ಗ್ರಾಮದ ಬಡವರಿಗೆ ಲಾಭವಾಗಿದೆ ಎಂದು ಕ್ರೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ಅವರು ಇಂದು ಹುಮನಾಬಾದ ಕ್ಷೇತ್ರದ ಕನಕಟ್ಟಾ, ರಾಜೋಳ, ಯರಂಡಗಿ, ನಿರಗುಡಿ, ದುಬಲಗುಂಡಿ, ಹುಡಗಿ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ, ಪಕ್ಷದ ಅಭ್ಯರ್ಥಿ ಡಾ ಸಿದ್ದು ಪಾಟೀಲ್‌ ಪರವಾಗಿ ಮತಯಾಚಿಸಿ ಮಾತನಾಡಿ, ಎಸ್‌ಸಿ/ಎಸ್‌.ಟಿ ಯವರಿಗೆ ಒಳ ಮಿಸಲಾತಿ ಹೆಚ್ಚಿಸಿ ದಲಿತರ ದಶಕಗಳ ಕನಸು ನನಸು ಮಾಡಿದ್ದೇವೆ. 

ಮುಂದಿನ ದಿನಗಳಲ್ಲಿಯೂ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಅಧಿ​ಕಾರಕ್ಕೆ ಬರುವುದು ಅವಶ್ಯಕವಾಗಿದೆ. ತಾವೆಲ್ಲರೂ ನಮ್ಮ ಪಕ್ಷದ ಅಭ್ಯರ್ಥಿ ಡಾ.ಸಿದ್ದು ಪಾಟೀಲ್‌ಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು. ಕಾಂಗ್ರೆಸ್‌ ಗ್ಯಾರಂಟಿ ಉಳಿ​ಯಲ್ಲ, ಅಂತಹದರಲ್ಲಿ ಕಾಂಗ್ರೆಸ್‌ ಮುಗ್ಧ ಜನರಿಗೆ ಗ್ಯಾರಂಟಿ ಕಾರ್ಡ್‌ಗಳು ನೀಡಿ ಮೋಸ ಮಾಡುತ್ತಿದೆ. ದೇಶದಲ್ಲಿ 60 ವರ್ಷಕ್ಕೂ ಅಧಿ​ಕ ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಬಡವರನ್ನ ಬಡವರನ್ನಾಗಿಯೇ ಇಟ್ಟಿದೆ. ಕೇವಲ ಅವರ ಕುಟುಂಬ ಹಾಗೂ ಅವರ ಹಿಂಬಾಲಕರನ್ನು ಶ್ರೀಮಂತಗೋಳಿಸಿದೆ ಆದ್ದರಿಂದ ಯಾರೂ ಸಹ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ಗೆ ನಂಬಬಾರದು ಎಂದು ಮನವಿ ಮಾಡಿಕೊಂಡರು.

Latest Videos

undefined

ಕಾಂಗ್ರೆಸ್‌ ಕೊಟ್ಟ ಭರವಸೆ ಈಡೇರಿಸಿಲ್ಲ: ನಿರ್ಮಲಾ ಸೀತಾರಾಮನ್‌

ಕೋವಿಡ್‌ ಸಂದರ್ಭದಲ್ಲಿ ಮೋದಿ ಸರ್ಕಾರದಿಂದ 80 ಕೋಟಿ ಜನರಿಗೆ ಉಚಿತ ಪಡಿತರ, 130 ಕೋಟಿ ಜನರಿಗೆ ಉಚಿತವಾಗಿ ಎರಡೆರಡು ಬಾರಿ ಕೋವಿಡ್‌ ಲಸಿಕೆ ನೀಡಿ, ನಿಮ್ಮೆಲ್ಲರ ಪ್ರಾಣ ಕಾಪಾಡಿದ್ದೇವೆ. ನಮ್ಮ ಪಕ್ಷದ ಮೇಲೆ ನಂಬಿಕೆಯಿಟ್ಟು ನಮ್ಮ ಅಭ್ಯರ್ಥಿಯನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಡಿ ಎಂದು ಜನರಲ್ಲಿ ಮತಯಾಚನೆ ಮಾಡಿದರು. ಸಂಸದನಾದ ಮೇಲೆ 9 ವರ್ಷಗಳಿಂದ ನಿಮ್ಮೆಲ್ಲರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಪಿಎಮ್‌ ಕಿಸಾನ್‌ ಅಡಿಯಲ್ಲಿ ಒಟ್ಟು 1.91 ಲಕ್ಷ ರೈತರಿಗೆ 13 ಕಂತುಗಳಲ್ಲಿ 556 ಕೋಟಿ ಪ್ರೋತ್ಸಾಹ ಧನ ನೀಡಿದ್ದೇವೆ. ಫಸಲ್‌ ಬಿಮಾ ಯೋಜನೆಯಡಿ ಜಿಲ್ಲೆಗೆ 500 ಕೋಟಿ ರುಪಾಯಿ ಪರಿಹಾರ ಬಂದಿದೆ. 

ಕ್ಷೇತ್ರದಲ್ಲಿ ಗ್ರಾಮ್‌ ಸಡಕ್‌ ಯೋಜನೆಯಡಿ ಗ್ರಾಮೀಣ ರಸ್ತೆಗಳು, ಹೆದ್ದಾರಿಗಳು, ರೈಲ್ವೆಗಳು ಬಂದಿವೆ. ಏರ್‌ಪೋರ್ಟ್‌, ಪಾಸ್‌ ಪೋರ್ಟ್‌ ಸೇವಾ ಕೇಂದ್ರ, ಶೌಚಾಲಯಗಳು, ಮನೆಗಳ ನಿರ್ಮಾಣ, ರೈತರಿಗೆ ಬೆಂಬಲ ಬೆಲೆ ಇತ್ಯಾದಿ ಸವಲತ್ತುಗಳು ಮಾಡಿಸಿಕೊಟ್ಟಿದ್ದೇನೆ. ಹುಮನಾಬಾದ್‌ ಮತಕ್ಷೇತ್ರದ ಪ್ರತಿ ಬೂತ್‌ನಲ್ಲಿ ಕನಿಷ್ಟಶೇ.90 ಮತ ಹಾಕಿಸಬೇಕು. ಅದರಲ್ಲಿ ಶೇ.75 ಮತ ಬಿಜೆಪಿಗೆ ಬೀಳಬೇಕು. ಈ ನಿಟ್ಟಿನಲ್ಲಿ ತಾವೆಲ್ಲರೂ ಕೆಲಸ ಮಾಡಬೇಕು. ಆದ್ದರಿಂದ ನಮ್ಮ ಪಕ್ಷದ ಅಭ್ಯರ್ಥಿ ಡಾ. ಸಿದ್ದು ಪಾಟೀಲ್‌ಗೆ ತಾವೆಲ್ಲರೂ ಬರುವ ಮೇ 10 ರಂದು ಮತ ನೀಡಿ ಗೆಲ್ಲಿಸಬೇಕು.

ಅಳೆದು ತೂಗಿ ಯೋಗ್ಯರಿಗೆ ನಿಮ್ಮ ಮತ ನೀಡಿ: ಸಿ.ಟಿ.ರವಿ

ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಡಾ. ಸಿದ್ದು ಪಾಟಿಲ್‌, ಪಕ್ಷದ ಮುಖಂಡರಾದ ಬಸವರಾಜ ಆರ್ಯ, ಮಲ್ಲಪ್ಪ ಕುಂಬಾರ, ಗೋಪಾಲಕೃಷ್ಣ ಮೊಹಲೆ, ಅಣೆಪ್ಪ ಖಾನಾಪೂರೆ, ಇತರರು ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!