ಸುಮಲತಾ ಅಂಬರೀಶ್ ಜೊತೆಗೆ ಬಿಜೆಪಿ ಸೇರ್ಪಡೆಯಾದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ

Published : Apr 05, 2024, 01:12 PM ISTUpdated : Apr 05, 2024, 01:44 PM IST
ಸುಮಲತಾ ಅಂಬರೀಶ್ ಜೊತೆಗೆ ಬಿಜೆಪಿ ಸೇರ್ಪಡೆಯಾದ ಬಿಗ್‌ಬಾಸ್‌ ಮಾಜಿ  ಸ್ಪರ್ಧಿ

ಸಾರಾಂಶ

ಸುಮಲತಾ ಅಂಬರೀಶ್‌ ಅವರು ಏ.5ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಶಾಲು ಹಾಕಿ ಸುಮಲತಾ ಅವರನ್ನು ರಾಧಾ ಮೋಹನ್ ಅಗರ್ವಾಲ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. 

ಬೆಂಗಳೂರು (ಏ.5):  ಕಳೆದ ಐದು ವರ್ಷಗಳಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸಂಸದೆಯಾಗಿ ಉಳಿದು, ಈ ಬಾರಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ವಂಚಿತರಾದ ಸುಮಲತಾ ಅಂಬರೀಶ್‌ ಅವರು ಏ.5ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಶಾಲು ಹಾಕಿ ಸುಮಲತಾ ಅವರನ್ನು ರಾಧಾ ಮೋಹನ್ ಅಗರ್ವಾಲ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಪಕ್ಷದ ಧ್ವಜ ನೀಡಿ ಮಾಜಿ ಸಿಎಂ ಯಡಿಯೂರಪ್ಪ ಸ್ಬಾಗತ ಮಾಡಿದರು. ಸುಮಲತಾ ಅವರಿಗೆ ಪುತ್ರ ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಾಥ್ ನೀಡಿದರು. ಇನ್ನು ಸುಮಲತಾ ಅವರ ಜೊತೆಗೆ ಮಾಜಿ ಬಿಗ್‌ ಬಾಸ್ ಸ್ಪರ್ಧಿ ಕ್ರಿಕೆಟರ್‌ ದೊಡ್ಡ ಗಣೇಶ್ ಕೂಡ ಬಿಜೆಪಿ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ದೇಶದಲ್ಲಿ ಮೋದಿಜಿಯವರ ನಾಯಕತ್ವವನ್ನು ಎಲ್ಲರೂ ಒಪ್ಪಿದ್ದಾರೆ. ಮೋದಿ ಮತ್ತೊಮ್ಮೆ ಎನ್ನುವ ವಾತಾವರಣ 28 ಕ್ಷೇತ್ರದಲ್ಲಿ ನಿರ್ಮಾಣ ಆಗಿದೆ. ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗೋಕೆ ಅನೇಕರು ಇಷ್ಟ ಪಡಲಿಲ್ಲ. ಕಾರಣ ಮೋದಿ ಅಲೆ ಎಂದರು.

ಸುಮಲತಾ ಏನ್ ಮಾಡ್ತಾರೆ ಎಂದು ಚರ್ಚೆ ಆಗ್ತಾ ಇತ್ತು. ಸುಮಲತಾ ನಿನ್ನೆ ಉತ್ತರ ನೀಡಿದ್ದಾರೆ. ಅವರು ಬಿಜೆಪಿ ಸೇರಿದ್ದಾರೆ. ಅವರಿಗೆ ನಾನು ಸ್ವಾಗತ ಮಾಡುತ್ತೇನೆ. ಅಂಬರೀಶ್ ಅವರಿಗೆ ಇದ್ದ ಜನಪ್ರಿಯತೆ ಮತ್ತು ಸಂಸದೆ ಆಗಿ ಮಾಡಿರುವ ಕೆಲಸ ಸುಮಲತಾ ಬಂದಿದ್ದು ಇಡಿ ರಾಜ್ಯಕ್ಕೆ ಸಂದೇಶ ನೀಡಿದಂತಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಮಂಡ್ಯ ಸ್ಪರ್ಧೆ ಬಿಟ್ಟು ಬಿಜೆಪಿ ಬೆಂಬಲಿಸುತ್ತಿರುವ ಸುಮಲತಾಗೆ ಇಡಿ, ಐಡಿ ಭಯವೇ?: ಈಶ್ವರ್ ಖಂಡ್ರೆ

ಬಿಜೆಪಿ ಸೇರ್ಪಡೆಯಾಗಿ ಮಾತನಾಡಿದ ಸುಮಲತಾ ಅವರು, ರಾಜಕೀಯ ಜೀವನದ ಸುದಿನ ಇಂದು. ಐದು ವರ್ಷಗಳ ಹಿಂದೆ ಜನ ಗೆಲ್ಲಿಸಿದ್ರು. ಅಂಬರೀಶ್ ಅಭಿಮಾನಿಗಳು ಶಕ್ತಿ ನೀಡಿದ್ರು. ಬಿಜೆಪಿ ಬಾಹ್ಯ ಬೆಂಬಲ ನೀಡಿದ್ರು. ಮೈಸೂರಿಗೆ ಬಂದಾಗ ಮೋದಿಜಿ ನಂಗೆ ಗೌರವ ನೀಡಿದ್ರು. ಅಂಬರೀಶ್ ಅವರಿಗೆ ಗೌರವ ಸಲ್ಲಿಸಿದ್ರು. ನಾನು ರಾಜಕೀಯದಿಂದ ದೂರ ಇದ್ದೆ. ನಾನು ಲೋಕಸಭಾಗೆ ಬಂದ ಮೇಲೆ ಬಿಜೆಪಿಯ ಹಿರಿಯ ನಾಯಕರು ಮಾರ್ಗದರ್ಶನ ನೀಡಿದ್ದಾರೆ. ಮೋದಿ ನನಗೆ ಸ್ಪೂರ್ತಿ. ಅವರ ಮಾತು ಅವರ ಕಲ್ಪನೆ ಬಹಳ ಇಷ್ಟ ಆಯಿತು. ಅವರ ಮಾತು ಕೆಲಸ ನೋಡಿದ ಮೇಲೆ ಬಿಜೆಪಿ ಸೇರೋದೆ ಸೂಕ್ತ ಎಂದು ತೀರ್ಮಾನ ಮಾಡಿದೆ.

ಸುಮಲತಾ ಸಭೆ ನಡೆಸಿದ ಬೆನ್ನಲ್ಲೇ, ಮಂಡ್ಯ ಪ್ರವಾಸ ಹೊರಟ ಹೆಚ್‌ಡಿಕೆ

ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸಹಕಾರ ನೀಡಿದರು. ಮೈ ಶುಗರ್ ಓಪನ್ ಮಾಡಿಸಿಕೊಡಿ ಎಂದೆ. ಯಡಿಯೂರಪ್ಪ ಅವರು ಸಭೆ ಮಾಡಿ, ಪೂರಕವಾಗಿ ಕೆಲಸ ಮಾಡಿದ್ರು. ಬಳಿಕ ಬೊಮ್ಮಾಯಿ‌ ಅವರು 50 ಕೋಟಿ ನೀಡಿ, ಓಪನ್ ಮಾಡಿದ್ರು. ಈಗ ಕ್ರೆಡಿಟ್ ಯಾರ್ ಯಾರೊ ತೆಗೆದುಕೊಳ್ಳೋಕೆ ಪ್ರಯತ್ನ ಮಾಡ್ತಾರೆ. ಮೈ ಶುಗರ್ ಈಗ ಬೇರೆ ಬೇರೆಯವರು ಕ್ರೆಡಿಟ್ ತಗೊಳ್ಳೊದು ಸರಿ ಅಲ್ಲ. ಆ ಕ್ರೆಡಿಟ್ ಬಿಜೆಪಿಗೆ ಸೇರಬೇಕು ಎಂದರು.

ಮೋದಿ ನುಡಿದಂತೆ ನಡೆಯುತ್ತಾರೆ. ನನಗೆ ನನ್ನ ಭವಿಷ್ಯದ ಚಿಂತೆ. ನನ್ನ ದೇಶ, ರಾಜ್ಯ ನನ್ನ ಜಿಲ್ಲೆ ಮುಖ್ಯ. ನನಗೆ ನನ್ನ ಭವಿಷ್ಯ ಚಿಂತೆ ಇಲ್ಲ. ನಾನು ಬಿಜೆಪಿ ಸೇರಿದ್ದು ಹೆಮ್ಮೆ ಸಂಗತಿ. ನಂಗೆ ಜನ ಸಹಕಾರ ಮಾಡ್ತೀರಿ ಎಂದು ನಂಬಿದ್ದೇನೆ ಎಂದು ಸುಮಲತಾ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸದನದಲ್ಲಿ ಶಾ ಒತ್ತಡದಲ್ಲಿದ್ರು, ಕೈ ಕಂಪಿಸುತ್ತಿತ್ತು : ರಾಹುಲ್‌
ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ