ಮೋದಿ ಆಡಳಿತದಿಂದ ಮಾತ್ರ ದೇಶಕ್ಕೆ ವಿಶ್ವಗುರು ಪಟ್ಟ ಸಾಧ್ಯ: ಬೊಮ್ಮಾಯಿ

By Kannadaprabha News  |  First Published Apr 5, 2024, 1:05 PM IST

ಜಗತ್ತಿಗೆ ಭಾರತ ದೇಶ ವಿಶ್ವಗುರುವಿನ ಪಟ್ಟ ಪಡೆಯಬೇಕು ಎಂದರೆ ಅದು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ಮಾತ್ರ ಸಾಧ್ಯ ಎಂದು ಹಾವೇರಿ, ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.


ಹಿರೇಕೆರೂರು (ಏ.05): ಜಗತ್ತಿಗೆ ಭಾರತ ದೇಶ ವಿಶ್ವಗುರುವಿನ ಪಟ್ಟ ಪಡೆಯಬೇಕು ಎಂದರೆ ಅದು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ಮಾತ್ರ ಸಾಧ್ಯ ಎಂದು ಹಾವೇರಿ, ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ಮತಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೋದಿ ನೇತೃತ್ವದ ಆಡಳಿತದಿಂದ ಮಾತ್ರ ದೇಶ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಸ್ಮಾರ್ಟ ಸಿಟಿ, ವಿದ್ಯುತ್ ರೈಲ್ವೆ ಸಂಚಾರ, ಹೊಸ ರೈಲು ಮಾರ್ಗಗಳ ನಿರ್ಮಾಣ, ಮನೆಮನೆಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ, ರಸ್ತೆ ನಿರ್ಮಾಣ, ವಿಮಾನ ನಿಲ್ದಾಣ ಯೋಜನೆ ಸೇರಿದಂತೆ ದೇಶದಲ್ಲಿ ಸಮಗ್ರ ಅಭಿವೃದ್ಧಿಗೆ ಹಲವಾರು ಯೋಜನೆ ಜಾರಿಗೆ ತಂದಿದ್ದಾರೆ. 

ಮೋದಿಯವರು ಹ್ಯಾಟ್ರಿಕ್ ಜಯ ಸಾಧಿಸಿ ಮತ್ತೆ ಅಧಿಕಾರದ ಗದ್ದುಗೆ ಎರಲು ನನ್ನನ್ನು ಹೆಚ್ಚು ಮತಗಳಿಂದ ಆಯ್ಕೆ ಮಾಡಬೇಕು ಎಂದರು. ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಜಗತ್ತೆ ಭಾರತದತ್ತ ನಿಬ್ಬೆರಗಾಗಿ ತಿರುಗಿ ಮೋಡುವಂತೆ ಮಾಡಿದ, ಈ ದೇಶ ಕಂಡ ಅತ್ಯುತ್ತಮ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರು, ಕೊರೋನಾ ಮಹಾಮಾರಿಯ ಸಂದಿಗ್ಧ ಸ್ಥಿತಿಯನ್ನು ಅತ್ಯಂತ ಧೈರ್ಯವಾಗಿ ಎದುರಿಸಿ, ದೇಶದ ಜನತೆಗೆ ಉಚಿತವಾಗಿ ಲಸಿಕೆ ಹಾಕಿಸಿ ಪ್ರಾಣ ರಕ್ಷಣೆ ಮಾಡಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ ಎಂದರು.

Latest Videos

undefined

ಬಿಜೆಪಿ-ಜೆಡಿಎಸ್‌ನದು ನ್ಯಾಚುರಲ್‌ ಅಲೈಯನ್ಸ್: ಜಗದೀಶ್‌ ಶೆಟ್ಟರ್‌

ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ವಿಧಾನಸಭೆ ಮಾಜಿ ಸಚೇತಕ ಡಿ.ಎಂ.ಸಾಲಿ, ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಲಿಂಗರಾಜ ಚಪ್ಪರದಳ್ಳಿ, ರವಿಶಂಕರ ಬಾಳಿಕಾಯಿ, ಟಿಎಪಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ಡಿ.ಸಿ. ಪಾಟೀಲ, ಎನ್.ಎಂ. ಈಟೇರ, ಪಾಲಾಕ್ಷಗೌಡ ಪಾಟೀಲ, ರಮೇಶ ಪ್ಯಾಟಿ, ಗಂಗಾಧರ ಮಾಗನೂರ, ಮನೋಹರ್ ವಡ್ಡಿನಕಟ್ಟಿ, ಮಂಜುಳಾ ಬಾಳಿಕಾಯಿ, ದೇವರಾಜ ನಾಗಣ್ಣನವರ, ಬಸವರಾಜ ನೂಲಗೇರಿ, ಮಹೇಶ ಗುಂಡಗಟ್ಟಿ, ಬಸವರಾಜ ಬಣಕಾರ, ಗಂಗಾಧರ ಬಡಲಿಂಗಪ್ಪನವರ್, ಶಿವುನಾಯ್ಕ ಲಮಾಣಿ ಸೇರಿದಂತೆ ಬಿಜೆಪಿ ವಿವಿದ ಘಟಕಗಳ ಎಲ್ಲ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಇದ್ದರು.

click me!