ಮಂಡ್ಯ ಲೋಕಸಭೆ ಜೆಡಿಎಸ್ ಪಾಲು? ಬಿಜೆಪಿ ನಿರ್ಧಾರಕ್ಕೆ ಸುಮಲತಾ ಕಂಗಾಲು!

By Kannadaprabha NewsFirst Published Jan 13, 2024, 3:46 PM IST
Highlights

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ತನ್ನ ಮೈತ್ರಿಕೂಟದ ಪಾಲುದಾರ ಜೆಡಿಎಸ್‌ಗೆ ನೀಡಲು ಬಿಜೆಪಿ ನಿರ್ಧರಿಸಿದೆ ಎಂಬ ಬೆಳವಣಿಗೆಯಿಂದ ಆತಂಕಗೊಂಡಿರುವ  ಸಂಸದೆ ಸುಮಲತಾ ಅಂಬರೀಶ್ ಶೀಘ್ರದಲ್ಲೇ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು (ಜ.13): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ತನ್ನ ಮೈತ್ರಿಕೂಟದ ಪಾಲುದಾರ ಜೆಡಿಎಸ್‌ಗೆ ನೀಡಲು ಬಿಜೆಪಿ ನಿರ್ಧರಿಸಿದೆ ಎಂಬ ಬೆಳವಣಿಗೆಯಿಂದ ಆತಂಕಗೊಂಡಿರುವ  ಸಂಸದೆ ಸುಮಲತಾ ಅಂಬರೀಶ್ ಶೀಘ್ರದಲ್ಲೇ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸುಮಲತಾ ಅಂಬರೀಶ್ ಪ್ರತಿನಿಧಿಸುತ್ತಿರುವ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಈಗಾಗಲೇ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ಖಚಿತಪಡಿಸಿವೆ.

Latest Videos

ಸುಮಲತಾ  ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ಆಗ ಬಿಜೆಪಿ ಸುಮಲತಾ ಅಂಬರೀಷ್ ಗೆ ಬೆಂಬಲ ನೀಡಿತ್ತು.

ದೇಶಕ್ಕೆ ಪ್ರಧಾನಿ ಮೋದಿಯವರೇ ಗ್ಯಾರಂಟಿ: ಕೇಂದ್ರ ಸಚಿವ ಕ್ರಿಶನ್ ಪಾಲ್

ಪ್ರಧಾನಿ ನರೇಂದ್ರ ಮೋದಿ  ಪ್ರಚಾರದಲ್ಲಿ ಸುಮಲತಾ ಅವರಿಗೆ ಮತ ನೀಡುವಂತೆ ಮನವಿ ಮಾಡಿದ್ದರು. ಅದಾದ ನಂತರ ಸುಮಲತಾ ಬಿಜೆಪಿ ಬೆಂಬಲಿಸಿದ್ದರು.  ಆದರೆ ಇತ್ತೀಚಿನ ಬೆಳವಣಿಗೆಗಳಿಂದಾಗಿ ಕಂಗೆಟ್ಟಿರುವ ಸುಮಲತಾ ಅನುಯಾಯಿಗಳು ಮುಂಬರುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳು ವಿವರಿಸಿವೆ.

ವಿಜಯೇಂದ್ರ ಮತ್ತು ಪಕ್ಷದ  ಪ್ರಮುಖರನ್ನು ಭೇಟಿ ಮಾಡಿ  ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಸುಮಲತಾ ಬೇಡಿಕೆ ಇಡುವ ಸಾಧ್ಯತೆ ಇದೆ. ಮತ್ತೊಂದೆಡೆ, ಗೆಲ್ಲುವ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿರುವ ಕಾಂಗ್ರೆಸ್ ಅವರನ್ನು ಪಕ್ಷಕ್ಕೆ ಸೆಳೆದು ತನ್ನ ಅಭ್ಯರ್ಥಿಯನ್ನಾಗಿ ಮಾಡಲು ಪ್ಲಾನ್ ಮಾಡಿದೆ.

ಮಂಡ್ಯಲೋಕಸಭಾ ಕ್ಷೇತ್ರ ಒಕ್ಕಲಿಗರ ಹೃದಯಭಾಗವೆಂದೇ ಪರಿಗಣಿಸಲಾಗಿದೆ,  ಜೆಡಿ (ಎಸ್)  ತನ್ನ ಪ್ರಾಬಲ್ಯಸಾಧಿಸಿದೆ, ಆದರೆ ಸುಮಲತಾ ಅಂಬರೀಶ್ ಜೆಡಿಎಸ್ (ಎಸ್)  ಸೋಲಿಸಿ ವಿಜಯಶಾಲಿಯಾದರು. ಒಕ್ಕಲಿಗ ಸಮುದಾಯದವರು  ಸುಮಲತಾ ಪತಿ ದಿವಂಗತ  ಅಂಬರೀಶ್ ಅವರ ಬಗ್ಗೆ ವಿಶೇಷ ಪ್ರೀತಿಹೊಂದಿದ್ದಾರೆ. 

ಮಂಡ್ಯ ಗೌಡ್ತಿ ಜೊತೆ ಶತ್ರುತ್ವ ಮರೆತ್ರಾ ಕುಮಾರಸ್ವಾಮಿ..?"ಸಮರ ಬಿಟ್ಟು ಸಂಧಾನಕ್ಕೆ ಸಿದ್ಧ" ಅಂದರೇಕೆ ಎಚ್‌ಡಿಕೆ..?

ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸುಮಲತಾ ಅಂಬರೀಶ್ ಕೈಜೋಡಿಸಿದರೆ, ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ಮತಗಳನ್ನು ಕಸಿಯುವ ಜೆಡಿಎಸ್ ಮತ್ತು ಬಿಜೆಪಿ ಲೆಕ್ಕಾಚಾರಗಳು ತಲೆಕೆಳಗಾಗಬಹುದು. ಬಿಜೆಪಿ ಮತ್ತು ಜೆಡಿಎಸ್‌ಗಳು ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದು, ಸುಮಲತಾ ಅಂಬರೀಶ್ ಅವರನ್ನು ಸಮಾಧಾನಪಡಿಸುವ ವಿಶ್ವಾಸದಲ್ಲಿದೆ.

click me!