ಕಾಂಗ್ರೆಸ್‌ನವರು ಕೌರವರು, ರಾವಣನಂತೆ ವರ್ತಿಸುತ್ತಿದ್ದಾರೆ. ನೋಡುತ್ತೀರಿ, ಅಯ್ಯೋಧೆಯಲ್ಲಿ ರಾಮ ಮಂದಿರದ ಬಳಿಕ ಹೊಸ ಹಿಂದೂ ಯುಗ ಆರಂಭ ಆಗುತ್ತದೆ. ಆ ಮೂಲಕ ಸನಾತನ ಧರ್ಮ ವಿಶ್ವದಲ್ಲಿ ಪ್ರಸರಿಸುತ್ತದೆ. ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ವಿಜಯಪುರ (ಜ.13):ಕಾಂಗ್ರೆಸ್‌ನವರು ಕೌರವರು, ರಾವಣನಂತೆ ವರ್ತಿಸುತ್ತಿದ್ದಾರೆ. ನೋಡುತ್ತೀರಿ, ಅಯ್ಯೋಧೆಯಲ್ಲಿ ರಾಮ ಮಂದಿರದ ಬಳಿಕ ಹೊಸ ಹಿಂದೂ ಯುಗ ಆರಂಭ ಆಗುತ್ತದೆ. ಆ ಮೂಲಕ ಸನಾತನ ಧರ್ಮ ವಿಶ್ವದಲ್ಲಿ ಪ್ರಸರಿಸುತ್ತದೆ. ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ನಾನು ಕಾಂಗ್ರೆಸ್‌ನಲ್ಲಿದ್ದಿದ್ರೆ ರಾಮಮಂದಿರಕ್ಕೆ ಹೋಗ್ತಿದ್ದೆ:
ಕಾಂಗ್ರೆಸ್ ನಿಂದ ರಾಮ ಮಂದಿರ ಉದ್ಘಾಟನೆಗೆ ಹೋಗದಿರಲು ತೀರ್ಮಾನ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ನಾನು ಒಂದು ವೇಳೆ ಕಾಂಗ್ರೆಸ್ ಪಕ್ಷದಲ್ಲಿದ್ದಿದ್ರೆ ಹೈಕಮಾಂಡ್ ಆದೇಶ ಧಿಕ್ಕರಿಸಿ ರಾಮಮಂದಿರಕ್ಕೆ ಹೋಗುತ್ತಿದ್ದೆ. ಆದರೆ ಕಾಂಗ್ರೆಸ್‌ನಲ್ಲಿ ಒಬ್ಬರಿಗೂ ಧೈರ್ಯ ಇಲ್ಲ. ಹೈಕಮಾಂಡ್ ಧಿಕ್ಕರಿಸಿ ರಾಮಮಂದಿರಕ್ಕೆ ಹೋಗುತ್ತೇವೆ ಎಂದು ಹೇಳಲು ಒಬ್ಬನಿಗೂ ಧೈರ್ಯವಿಲ್ಲ. ಕಾಂಗ್ರೆಸ್‌ನವರು ನಿಜವಾಗ್ಲೂ ರಾಮಭಕ್ತರಾಗಿದ್ರೆ ಹೋಗ್ತಾರೆ ಎಂದು ಸವಾಲು ಹಾಕಿದರು.
ಅವನು ಏನಾದ್ರೂ ಹೇಳಲಿ, ಅವನಿಗೆ ಸೋಲ್ತೀನಿ ಅನ್ನೋ ಹೆದರಿಕೆ ಶುರು ಆಗಿದೆ: ಪ್ರತಾಪ್ ಸಿಂಹ ವಿರುದ್ಧ ಸಿಎಂ ಕಿಡಿ
ಬಿಜೆಪಿ, ಆರ್‌ಎಸ್‌ಎಸ್, ವಿಶ್ವಹಿಂದೂ ಪರಿಷತ್, ಭಜರಂಗದಳ ಯಾರು ರಾಮಮಂದಿರ ಮಾಡಿದ್ದಾರೆ ಎಂದು ಕಾಂಗ್ರೆಸ್ ನವರು ನೋಡಬಾರದಿತ್ತು. ರಾಮನ ಅಸ್ತಿತ್ವ ಪ್ರಶ್ನೆ ಮಾಡಿದವರು, ರಾಮಮಂದಿರ ನಿರ್ಮಾಣ ವಿರೋಧಿಸಿ ವಕೀಲರನ್ನು ಇಟ್ಟಿದ್ದವರು, ರಾಮ ಕಾಲ್ಪನಿಕ ವ್ಯಕ್ತಿ ಎಂದಿದ್ದ ಕಾಂಗ್ರೆಸ್ ನವರು ಅಯೋಧ್ಯಗೆ ಹೋಗಲ್ಲ. ಹಿಂದು ಮತಗಳನ್ನು ಕಳೆದುಕೊಳ್ಳುವ ಆತಂಕದಲ್ಲಿ ಕಾಂಗ್ರೆಸ್‌ನವರು ತಾವೂ ರಾಮಭಕ್ತರು ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದು ಲೋಕಸಭಾ ಚುನಾವಣೆಗಾಗಿ ಆಡುತ್ತಿರುವ ನಾಟಕ. ಚುನಾವಣೆ ಮುಗಿಯುತ್ತಿದ್ದಂತೆ ಅವರ ರಾಮಭಕ್ತಿ ನೋಡುವಿರಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
'ನಾನು ಕೊಚ್ಚೆಗೆ ಕಲ್ಲು ಹಾಕುವುದಿಲ್ಲ' ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು!