ಕುಮಾರಸ್ವಾಮಿ ಅವರ ಕೈಯಲ್ಲಿ 10.38 ಲಕ್ಷ ರು. ನಗದು ಇದ್ದರೆ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಬಳಿ 10.77 ಲಕ್ಷ ರು. ನಗದು ಇದೆ. ಅನಿತಾ ನಿರ್ವಹಿಸುವ ನಿಖಿಲ್ ಮತ್ತು ಕಂಪನಿ ಖಾತೆಯಲ್ಲಿ 66.14 ಲಕ್ಷ ನಗದು ಇದೆ. ಚರಾಸ್ತಿ, ಸ್ಥಿರಾಸ್ತಿಯಲ್ಲಿ ಕುಮಾರಸ್ವಾಮಿ ಅವರಿಗಿಂತ ಪತ್ನಿ ಅನಿತಾ ಅವರೇ ಶ್ರೀಮಂತೆಯಾಗಿದ್ದಾರೆ.
ಮಂಡ್ಯ(ಏ.05): ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಮಾಣ ಪತ್ರದಲ್ಲಿ 219 ಕೋಟಿ ರು. ಆಸ್ತಿ ಘೋಷಣೆ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಕೈಯಲ್ಲಿ 10.38 ಲಕ್ಷ ರು. ನಗದು ಇದ್ದರೆ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಬಳಿ 10.77 ಲಕ್ಷ ರು. ನಗದು ಇದೆ. ಅನಿತಾ ನಿರ್ವಹಿಸುವ ನಿಖಿಲ್ ಮತ್ತು ಕಂಪನಿ ಖಾತೆಯಲ್ಲಿ 66.14 ಲಕ್ಷ ನಗದು ಇದೆ.
ಚರಾಸ್ತಿ, ಸ್ಥಿರಾಸ್ತಿಯಲ್ಲಿ ಕುಮಾರಸ್ವಾಮಿ ಅವರಿಗಿಂತ ಪತ್ನಿ ಅನಿತಾ ಅವರೇ ಶ್ರೀಮಂತೆಯಾಗಿದ್ದಾರೆ. ಎಚ್‌ಡಿಕೆ ಅವರ ಬಳಿ 10.41 ಕೋಟಿ ರು. ಚರಾಸ್ತಿ ಇದ್ದರೆ, ಅನಿತಾ ಅವರ ಬಳಿ 90.32 ಕೋಟಿ ರು. ಚರಾಸ್ತಿ ಇದೆ. ಕುಮಾರಸ್ವಾಮಿ ಅವರ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗಿ 1.20 ಕೋಟಿ ರು. ಚರಾಸ್ತಿ ಬಂದಿದೆ. ಒಟ್ಟಾರೆ 102.23 ಕೋಟಿ ಮೌಲ್ಯದ ಚರಾಸ್ತಿ ಇದೆ.
ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಕ್ಕೆ 358 ಅಭ್ಯರ್ಥಿಗಳ ನಾಮಪತ್ರ
ಎಚ್‌ಡಿಕೆ ಅವರ ಬಳಿ 44 ಕೋಟಿ ರು. ಸ್ಥಿರಾಸ್ತಿ ಇದ್ದರೆ ಅನಿತಾ ಅವರ ಬಳಿ 64 ಕೋಟಿ ರು. ಸ್ಥಿರಾಸ್ತಿ ಇದೆ. ಅವಿಭಕ್ತ ಕುಟುಂಬದ ಆಸ್ತಿಯಾಗಿ 7 ಕೋಟಿ ರು. ಬಂದಿದೆ. ಒಟ್ಟಾರೆ ಸ್ಥಿರಾಸ್ತಿ 115 ಕೋಟಿ ರು. ಮೌಲ್ಯದ್ದಾಗಿದೆ. ಕುಮಾರಸ್ವಾಮಿ ಅವರಿಗೆ 19 ಕೋಟಿ ರು. ಸಾಲ ಇದ್ದರೆ, ಅನಿತಾ ಅವರ ಬಳಿ 63 ಕೋಟಿ ರು. ಸಾಲವಿದೆ. ಸಾಲದಲ್ಲೂ ಅನಿತಾ ಮುಂದಿದ್ದಾರೆ. ಅತ್ತಿಗೆ ಭವಾನಿ ರೇವಣ್ಣರಿಂದ 3.26 ಲಕ್ಷ ರೂ ಸಾಲ ಹಾಗೂ ಪತ್ನಿ ಅನಿತಾರಿಂದ 8.5 ಕೋಟಿ ಸಾಲ ಪಡೆದಿದ್ದಾರೆ.
ಕುಮಾರಸ್ವಾಮಿ ಅವರ ಬಳಿ ಕಾರು ಇಲ್ಲ, 12 ಲಕ್ಷ ರು. ಮೌಲ್ಯದ ಒಂದು ಟ್ರ್ಯಾಕ್ಟರ್ ಇದೆ. ಅನಿತಾ ಬಳಿ 11 ಲಕ್ಷ ರು. ಮೌಲ್ಯದ ಇನ್ನೋವಾ ಕಾರು ಇದೆ. ಎಚ್‌ಡಿಕೆ ಅವರ ಬಳಿ 47 ಲಕ್ಷ ಮೌಲ್ಯದ 750 ಗ್ರಾಂ ಚಿನ್ನ, 10 ಲಕ್ಷ ರು. ಮೌಲ್ಯದ 12 ಕೆ.ಜಿ ಬೆಳ್ಳಿ, 2.60 ಲಕ್ಷ ರು. ಮೌಲ್ಯದ 4 ಕ್ಯಾರೆಟ್ ವಜ್ರಾಭರಣವಿದೆ.
ಅನಿತಾ ಅವರ ಬಳಿ 2.42 ಕೋಟಿ ಮೌಲ್ಯದ 3.85 ಕೆ.ಜಿ ಚಿನ್ನಾಭರಣ, 13 ಲಕ್ಷ ರು.ಮೌಲ್ಯದ 17 ಕೆ.ಜಿ ಬೆಳ್ಳಿ, 33 ಲಕ್ಷ ರು.ಮೌಲ್ಯದ 51 ಕ್ಯಾರೆಟ್ ವಜ್ರಾಭರಣವಿದೆ. ಕುಮಾರಸ್ವಾಮಿ ಅವರ ಬಳಿ 6.40 ಲಕ್ಷ ರು. ಮೌಲ್ಯದ 20 ಹಸುಗಳಿವೆ, 6.14 ಲಕ್ಷ ರು. ಮೌಲ್ಯದ 52 ಬನ್ನೂರು ಕುರಿಗಳಿವೆ. ಲೋಕಾಯುಕ್ತದಲ್ಲಿ ವಿಚಾರಣೆ ಹಂತದಲ್ಲಿರುವ 3 ಕ್ರಿಮಿನಲ್, ಸಿವಿಲ್ ಪ್ರಕರಣಗಳನ್ನು ಕುಮಾರಸ್ವಾಮಿ ಎದುರಿಸುತ್ತಿದ್ದಾರೆ.