ಲೋಕಸಭಾ ಚುನಾವಣೆ 2024: ಪಕ್ಷಗಳಿಗೆ ಅಸಮಾಧಾನದ ಭಾರ..!

Published : Apr 05, 2024, 07:18 AM IST
ಲೋಕಸಭಾ ಚುನಾವಣೆ 2024: ಪಕ್ಷಗಳಿಗೆ ಅಸಮಾಧಾನದ ಭಾರ..!

ಸಾರಾಂಶ

ವರ್ಷದಿಂದ ಖಾಲಿ ಬಿದ್ದಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನವನ್ನು ಭರ್ತಿ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಎಂಎಲ್ಲಿ ಬಸವರಾಜ ಪಾಟೀಲ್ ಇಟಗಿ ಅವರನ್ನು ಡಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಿದ್ದಂತೆಯೇ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

ರಾಮಕೃಷ್ಣ ದಾಸರಿ 

ರಾಯಚೂರು(ಏ.05):  ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಮುಖಂಡರ ಅಸಮಾಧಾನ ಭಾರವಾಗಿ ಪರಿಣಮಿಸಿದ್ದು, ಒಂದು ಕಡೆ ಡಿಸಿಸಿ ಅಧ್ಯಕ್ಷರ ಆಯ್ಕೆಯಿಂದ ಕೈ ಪಾಳೆಯಲ್ಲಿ ಅಸಮಾಧಾನ ಸ್ಫೋಟಗೊಂಡರೆ, ಮತ್ತೊಂದು ಕಡೆ ಬಿಜೆಪಿ ಟಿಕೆಟ್ ವಂಚಿತರಿಂದ ಉಂಟಾಗಿರುವ ಬಂಡಾಯ ಶಮನ ವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.  ವರ್ಷದಿಂದ ಖಾಲಿ ಬಿದ್ದಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನವನ್ನು ಭರ್ತಿ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಎಂಎಲ್ಲಿ ಬಸವರಾಜ ಪಾಟೀಲ್ ಇಟಗಿ ಅವರನ್ನು ಡಿಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಿದ್ದಂತೆಯೇ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

ಕೈ ಪಕ್ಷದಲ್ಲಿ ಅಸಮಾಧಾನ: ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರ ರೇಸ್‌ನಲ್ಲಿ ಹಿರಿಯ ಮುಖಂಡ ಕೆ.ಶಾಂತಪ್ಪ, ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಹಾಗೂ ಬಸವರಾಜ ಪಾಟೀಲ್ ಇಟಗಿ ಇದ್ದರು. ಆದರೆ ಪಕ್ಷದಲ್ಲಿನ ಗುಂಪು ಸಂಘರ್ಷದ ಬಲಾ ಬಲದಡಿ ಕೊನೆಗೆ ಬಸವರಾಜ ಪಾಟೀಲ್ ಇಟಗಿಗೆ ಅಧ್ಯಕ್ಷ ಸ್ಥಾನ ದಕ್ಕಿದೆ. ಇದರಿಂದಾಗಿ ಉಳಿದ ಇಬ್ಬರು ಅಸಮಾಧಾನಗೊಂಡಿದ್ದಾರೆ. ಅಧ್ಯಕ್ಷ ಸ್ಥಾನ ವಂಚಿತ ಕೆ.ಶಾಂತಪ್ಪಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು ಸಹ ಆ ಹುದ್ದೆ ಬೇಡವೆಂದು ರಾಜೀನಾಮೆ ನೀಡಿ ರುವ ಅವರು ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.

ನಾಳೆ ಕೋಲಾರದಲ್ಲಿ ಕಾಂಗ್ರೆಸ್‌ ಪ್ರಚಾರಕ್ಕೆ ಸಿದ್ದು, ಡಿಕೆಶಿ ಕಹಳೆ..!

ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್ ನೀಡದೆ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ ನಾಯಕಗೆ ನೀಡಿದ್ದು, ಅಸಮಾಧಾನ ಪಕ್ಷದ ಆಂತರಿಕ ವಲಯದಲ್ಲಿ ಹೊಗೆಯಾಡುತ್ತಿರುವ ಸಮಯದಲ್ಲಿಯೇ ಡಿಸಿಸಿ ಅಧಕ್ಷಸ್ಥಾನದ ಆಯ್ಕೆ ವಿಚಾರದಲ್ಲಿಯೂ ಸಹ ಅಸಮಾಧಾನ ಸೃಷ್ಟಿಯಾಗಿದೆ. ಇದರೊಟ್ಟಿಗೆ ಲಿಂಗಸುಗೂರಿನಲ್ಲಿ ಜರುಗಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯ ಕರ್ತರು ಪೂರ್ವಭಾವಿ ಸಭೆಗೆ ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ ಸೇರಿದಂತೆ ಪ್ರಮುಖ ಮುಖಂಡರು ಗೈರು ಹಾಜರಾಗಿದ್ದಾರೆ. ಪಕ್ಷದ ಸಂಘಟನೆಗೆ ಹಿನ್ನಡೆ ಉಂಟಾಗುತ್ತಿದೆ. ಬಿಜೆಪಿ-ಜೆಡಿಎಸ್ ಸಭೆಗೆ ಬಿ.ವಿ.ನಾಯಕ

ಗೈರು: 

ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕಗೆ ಲೋಕಸಭಾ ಟಿಕೆಟ್ ಘೋಷಣೆ ಯಾದ ನಂತರ ಇದೇ ಮೊದಲ ಬಾರಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಸೇರಿ ಕೊಂಡು ಒಟ್ಟಾಗಿ ನಡೆಸಿದ ಸಮನ್ವಯ ಸಮಿತಿ ಸಭೆಗೆ ಟಿಕೆಟ್ ಆಕಾಂಕ್ಷಿ, ಮಾಜಿ ಸಂಸದ ಬಿ.ವಿ.ನಾಯಕ ಗೈರು ಹಾಜರಾಗಿದ್ದರು. ಟಿಕೆಟ್ ಪೈಪೋಟಿಯಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರೊಟ್ಟಿಗೆ ಬಿ.ವಿ.ನಾಯಕ ತಿಪ್ಪರಾಜು ಹವಲ್ದಾರ್ ಅವರಿದ್ದರು. ಕೊನೆಗೆ ಹಾಲಿ ಸಂಸ ದರಿಗೆ ಪಕ್ಷ ಮತ್ತೊಮ್ಮೆ ಟಿಕೆಟ್ ನೀಡಿದ್ದರಿಂದ ಉಳಿದಿಬ್ಬರು ಅಸಮಾಧಾನಗೊಂಡಿದ್ದರು. ಪಕ್ಷದ ಉಸ್ತುವಾರಿಗಳು ಇಬ್ಬರ ಅಸಮಾ ಧಾನವನ್ನು ತಣಿಸುವ ಪ್ರಯತ್ನ ನಡೆಸಿದ್ದರು. ಇದರ ಪರಿಣಾಮವಾಗಿ ತಿಪ ರಾಜು ಹವಾ ಲ್ದಾರ್‌ಮೈತ್ರಿ ಪಕ್ಷಗಳಸಭೆಗೆ ಹಾಜರಾಗಿದ್ದರು. ಆದರೆ ಬಿ.ವಿ.ನಾಯಕ ಮಾತ್ರ ಗೈರು ಹಾಜರಾಗುವುದರ ಮುಖಾಂತರ ಅಸಮಾಧಾನದ ಬೆಂಕಿ ಜೀವಂತವಾಗಿದೆ ಎನ್ನುವ ಸಂದೇಶ ಕೊಟ್ಟರು. 

Lok Sabha Election 2024: ಕರ್ನಾಟಕ ಬೂತ್‌ ಅಧ್ಯಕ್ಷರ ಜತೆಗಿಂದು ಮೋದಿ ಸಂವಾದ

ಯಾವುದೇ ರಾಜಕೀಯ ಪಕ್ಷದಲ್ಲಿ ಗುಂಪುಗಾರಿಕೆ ಭಿನ್ನಮತ ಸಹಜ. ಅದರಂತೆ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇದೆ. ಕೂಡಲೇ ಹಿರಿಯ ನಾಯಕರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತೇವೆ ಎಂದು ಸಚಿವ ಎನ್.ಎಸ್ ಬೋಸರಾಜು ತಿಳಿಸಿದ್ದಾರೆ. 

ಬಿಜೆಪಿ ಹಿರಿಯರು, ಮುಖಂಡರು ಮತ್ತೊಮ್ಮೆ ಅವಕಾಶ ಕೊಟ್ಟು ಟಿಕೆಟ್ ಟಿಕೆಟ್ ಸಿಗದ ಆಕಾಂಕ್ಷಿಗಳಲ್ಲಿ ಅಸಮಾಧಾನ ಸಹಜ ಎಲ್ಲರ ಲ್ಲಿಯೂ ಮಾತನಾಡಿದ್ದೇನೆ. ಅದೇ ರೀತಿ ಬಿ.ವಿ.ನಾಯಕ ಅವರೊಂದಿಗೂ ಚರ್ಚಿಸಿದ್ದು ಎರಡೂರು ದಿನಗಳಲ್ಲಿ ಎಲ್ಲರೂ ಒಟ್ಟುಗೂಡಿ ಚುನಾವಣೆ ಎದುರಿಸಲಾಗುವುದು ಎಂದು ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ