Election Result 2022 ಬಂಗಾಳದಾಚೆಗೆ ವರ್ಚಸ್ಸು ವೃದ್ಧಿಸುತ್ತಿರುವ ದೀದಿ

By Kannadaprabha NewsFirst Published Mar 11, 2022, 4:15 AM IST
Highlights

ಸಣ್ಣ ಸಣ್ಣ ರಾಜ್ಯದಲ್ಲಿ ಬೇರೂರುವ ಯತ್ನಕ್ಕೆ ಸಣ್ಣ ಫಲ

ಗೋವಾದಲ್ಲಿ ಗೆಲ್ಲದಿದ್ದರೂ ಗಮನಾರ್ಹ ಮತಗಳಿಕೆ

ಯುಪಿಯಲ್ಲಿ ಎಸ್‌ಪಿ ಸ್ಥಾನ ಹೆಚ್ಚಳದಕ್ಕೂ ನೆರವು

ನವದೆಹಲಿ (ಮಾ.10) 2024ರ ಲೋಕಸಭಾ ಚುನಾವಣೆಯಲ್ಲಿ(2024 Loksabha Elction) ಬಿಜೆಪಿಗೆ ಪ್ರಬಲ ಎದುರಾಳಿಯಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (West Bengal CM Mamata Banerjee) ಹಾಲಿ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ (Five State Election) ತಮ್ಮ ವರ್ಚಸ್ಸನ್ನು ಮತ್ತಷ್ಟುವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತಾವು ಕೇವಲ ಬಂಗಾಳಕ್ಕೆ ಸೀಮಿತ ಎಂಬ ಭಾವನೆ ತೊಡೆಯುವಲ್ಲಿ ಮತ್ತಷ್ಟುಸಫಲರಾಗಿದ್ದಾರೆ. ಜೊತೆಗೆ ಸದ್ದಿಯಲ್ಲದೇ ಬಿಜೆಪಿ, ಕಾಂಗ್ರೆಸ್‌ಗೆ ಪರ್ಯಾಯ ರಂಗ ಕಟ್ಟುವ ತಮ್ಮ ಕನಸಿಗೆ ಮತ್ತಷ್ಟುರೆಕ್ಕೆಪುಕ್ಕ ಜೋಡಿಸಿಕೊಂಡಿದ್ದಾರೆ.

ಗಮನಾರ್ಹ ಮತ: ಗೋವಾ (Goa Election) ವಿಧಾನಸಭೆ ಚುನಾವಣೆಯಲ್ಲಿ 26 ಕ್ಷೇತ್ರಗಳಲ್ಲಿ ಕೊನೆಯ ಹಂತದಲ್ಲಿ ಅಖಾಡಕ್ಕಿಳಿದ ಟಿಎಂಸಿ (TMC) ಪಕ್ಷ ಯಾವುದೇ ಕ್ಷೇತ್ರ ಗೆಲ್ಲದಿದ್ದರೂ ಶೇ.5.22 ಮತಗಳನ್ನು ಬಾಚಿಕೊಂಡಿದೆ. ಮೈತ್ರಿ ಪಕ್ಷ ಎಂಜಿಪಿ (ಮಹಾರಾಷ್ಟ್ರವಾಡಿ ಗೋಮಂತಕ ಪಾರ್ಟಿ) ಎರಡು ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದು, ಶೇ. 7.65ರಷ್ಟುಮತಗಳನ್ನು ಪಡೆದಿದೆ. ಗೋವಾದಲ್ಲಿ ಟಿಎಂಸಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದರೂ ಶೇ.5ಕ್ಕಿಂತ ಹೆಚ್ಚು ವೋಟ್‌ ಪಡೆದಿದ್ದು ಸಾಧನೆಯೇ ಸರಿ.

Latest Videos

ಇನ್ನು ಯುಪಿಯಲ್ಲಿ ಅಖಿಲೇಶ್‌ಗೆ ಬೆಂಬಲ ಘೋಷಿಸಿದ್ದರಿಂದ ಎಸ್‌ಪಿ (SP) ಕಳೆದ ಬಾರಿಗಿಂತ 75ಕ್ಕೂ ಹೆಚ್ಚು ಸ್ಥಾನ ಗೆಲ್ಲುವಲ್ಲಿ ದೀದಿ ಪಾತ್ರವನ್ನು ಕಡೆಗಣಿಸುವಂತಿಲ್ಲ. ಈಗಾಗಲೇ ಅರುಣಾಚಲಪ್ರದೇಶದಲ್ಲಿ ಓರ್ವ ಶಾಸಕರನ್ನು ಹೊಂದಿರುವ ಟಿಎಂಸಿ ತ್ರಿಪುರಾದಲ್ಲಿ, ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ.16.39ರಷ್ಟುಮತ ಪಡೆದಿದೆ. ಸಣ್ಣ ಸಣ್ಣ ರಾಜ್ಯಗಳಲ್ಲಿ ತಮ್ಮ ಪ್ರಭಾವ ಬೀರುತ್ತ ನಡೆದಿರುವ ದೀದಿ 2024ರಲ್ಲಿ ದೆಹಲಿ ಗದ್ದುಗೆಯತ್ತ ನಡೆದರೂ ಅಚ್ಚರಿಯಿಲ್ಲ.

ಯಾವ ರಾಜ್ಯಗಳಲ್ಲಿ ಯಾರ ಆಡಳಿತ
ನವದೆಹಲಿ:
ಪಂಚರಾಜ್ಯ ಚುನಾವಣೆಯ ಫಲಿತಾಂಶ ಘೊಷಣೆಯಾಗಿದೆ. ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಣಿಪುರಗಳಲ್ಲಿ ಬಿಜೆಪಿ ಜಯಗಳಿಸಿದೆ. ಗೋವಾದಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಹುಮತಕ್ಕೆ ಒಂದು ಸ್ಥಾನವಷ್ಟೇ ಕಡಿಮೆ ಇದೆ. ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಭರ್ಜರಿ ಜಯಗಳಿಸಿದೆ. ಈ ಮೂಲಕ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಮತ್ತೊಂದು ರಾಜ್ಯವನ್ನು ಕಳೆದುಕೊಂಡತಾಗಿದೆ. ಬಿಜೆಪಿ ಮತ್ತು ಮೈತ್ರಿಕೂಟ 17 ರಾಜ್ಯಗಳಲ್ಲಿ ಅಧಿಕಾರ ಹೊಂದಿದ್ದರೆ, ಕಾಂಗ್ರೆಸ್‌ ಕೇವಲ 3 ರಾಜ್ಯಗಳಲ್ಲಿ ಅಧಿಕಾರ ಹೊಂದಿದೆ. ಇತರೆ ಪಕ್ಷಗಳು 8 ರಾಜ್ಯಗಳಲ್ಲಿ ಅಧಿಕಾರದಲ್ಲಿವೆ.

ಬಿಜೆಪಿ+ ಅಧಿಕಾರದಲ್ಲಿರುವ ರಾಜ್ಯಗಳು: ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗೋವಾ, ಗುಜರಾತ್‌, ಹರ್ಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌, ಸಿಕ್ಕಿಂ, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ

ಕಾಂಗ್ರೆಸ್‌+ ಅಧಿಕಾರದಲ್ಲಿರುವ ರಾಜ್ಯಗಳು: ಛತ್ತೀಸ್‌ಗಢ, ರಾಜಸ್ಥಾನ, ಜಾರ್ಖಂಡ್‌

ಇತರೆ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು: ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್‌, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ

ಬಿಜೆಪಿಗೆ ಯೋಗಿಯೇ 'ಉಪ-ಯೋಗಿ', ಏಳು ತಿಂಗಳ ಹಿಂದೆಯೇ ಭವಿಷ್ಯ ನುಡಿದಿತ್ತು ಏಷ್ಯಾನೆಟ್ ನ್ಯೂಸ್!
ಪಂಜಾಬ್‌ನಲ್ಲಾದ ಕ್ರಾಂತಿ ದೇಶಾದ್ಯಂತ ಪಸರಿಸಲಿದೆ: ಕೇಜ್ರಿ
ನವದೆಹಲಿ:
ಪಂಜಾಬ್‌ನಲ್ಲಿ ಸಂಭವಿಸಿರುವುದು ದೊಡ್ಡ ಕ್ರಾಂತಿ, ಈ ಕ್ರಾಂತಿ ಮೊದಲು ದೆಹಲಿಯಲ್ಲಾಯಿತು. ಇದೀಗ ಪಂಜಾಬ್‌ನಲ್ಲಾಗಿದೆ, ಮುಂದೆ ದೇಶಾದ್ಯಂತ ಪಸರಿಸಲಿದೆ.ಇದು ಅಭೂತಪೂರ್ವ ಗೆಲುವಿನ ಬಳಿಕ ದೆಹಲಿ ಮುಖ್ಯಮಂತ್ರಿ ಮತ್ತು ಆಪ್‌ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಹೇಳಿದ ಮಾತು.

ಯುಪಿ ಗೆದ್ದ ಬಿಜೆಪಿಗೆ ಈ ಒಂದು ವಿಚಾರದಲ್ಲಿ ಹಿನ್ನಡೆ, ಆಪರೇಷನ್ ಕಮಲವೇ ಮುಳುವಾಯ್ತಾ?
ದೆಹಲಿ ಕಚೇರಿಯಲ್ಲಿ ಆಪ್‌ ನಾಯಕರು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಪಂಜಾಬ್‌ನಲ್ಲಿ ನಮ್ಮ ಗೆಲುವು ತಡೆಯಲು ಅನೇಕ ಪಿತೂರಿಗಳು ನಡೆದವು. ಅವರೆಲ್ಲರೂ ಒಟ್ಟಾಗಿ ನಮ್ಮ ಮೇಲೆ ಮುಗಿಬಿದ್ದಿದ್ದರು. ಕೇಜ್ರಿವಾಲ್‌ ಉಗ್ರಗಾಮಿ ಅನ್ನೋ ಪಟ್ಟಕಟ್ಟಿದ್ದರು. ಆದರೆ ಫಲಿತಾಂಶದ ಮೂಲಕ ಜನರು ಕೇಜ್ರಿವಾಲ್‌ ಉಗ್ರಗಾಮಿಯಲ್ಲ, ಈ ದೇಶದ ಮಗ, ಅಪ್ಪಟ ದೇಶಪ್ರೇಮಿ ಎಂದು ಉತ್ತರಿಸಿದ್ದಾರೆ. ಈ ಅಭೂತಪೂರ್ವ ಗೆಲುವು ನಮಗೆ ಭಯ ಮೂಡಿಸಿದೆಯೇ ಹೊರತು ಅಹಂಕಾರವನ್ನಲ್ಲ ಎಂದರು.

click me!