
ಕಲಬುರಗಿ/ ಬಳ್ಳಾರಿ (ಮೇ.9) : ನಾನು ಈ ಮಣ್ಣಿನ ಮಗ. ನನ್ನ ಗೌರವ ಕಳೆಯುವುದು, ಹೆಚ್ಚಿಸುವುದು ನಿಮ್ಮ ಕೈಯಲ್ಲಿದೆ. ಖರ್ಗೆ ಕುಟುಂಬ ಸಾಫ್ ಮಾಡ್ತಾರಂತೆ. ನನ್ನ ಮುಗಿಸಿದರೆ, ಪ್ರಶ್ನೆ ಕೇಳುವ ಮತ್ತೊಬ್ಬ ಹುಟ್ಟುತ್ತಾನೆ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸೋಮವಾರದಂದು ಕಲಬುರಗಿ, ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮಾಂತರದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಲಬುರಗಿ, ಕರ್ನಾಟಕ ಅಂದಾಕ್ಷಣ ಕಡೆಗಣ್ಣಿಂದ ನೋಡಿರೋ ಬಿಜೆಪಿ ಮಂದಿ ಈಗ ಮತಕ್ಕಾಗಿ ನಿತ್ಯ ಬೆಂಗಳೂರು, ಕಲಬುರಗಿ ಸುತ್ತುತ್ತಿದ್ದಾರೆ. ಇವರ ಮಾತಿಗೆ ಮರಳಾಗಬೇಡಿ.
ಸೋನಿಯಾ ಗಾಂಧಿಯ 'ಕರ್ನಾಟಕಕ್ಕೆ ಸಾರ್ವಭೌಮತ್ವ' ಹೇಳಿಕೆ, ಚುನಾವಣಾ ಆಯೋಗದಿಂದ ಖರ್ಗೆಗೆ ನೋಟಿಸ್!
ಇದು ಬರೀ ಪೈಪೋಟಿಗಾಗಿ ನಡೆಯುತ್ತಿರೋ ಚುನಾವಣೆಯಲ್ಲ, ಕರ್ನಾಟಕದ ಭವಿಷ್ಯ ನಿಧÜರ್‍ರಿಸೋ ಚುನಾವಣೆ. ನನ್ನ ಪಕ್ಷದ ಹೆಚ್ಚಿನ ಶಾಸಕರು ನನ್ನೂರಿನಿಂದ ಆಯ್ಕೆಯಾದಲ್ಲಿ ಭೇಷ್ ಅಂತಾರೆ, ಇಲ್ದೆ ಹೋದ್ರೆ, ಎಐಸಿಸಿ ಅಧ್ಯಕ್ಷರಾದರೂ ಎಂಎಲ್‌ಎಗಳನ್ನು ಗೆಲ್ಲಿಸಲಾಗಲಿಲ್ಲ ಎಂದು ನಿಂದಿಸ್ತಾರೆ. ನನ್ನ ನಿಂದನೆಗೆ ಗುರಿ ಪಡಿಸೋದು, ಗೌರವ ಹೆಚ್ಚಿಸೋದು ಎರಡೂ ನಿಮ್ಮ ಕೈಯಲ್ಲಿದೆ. ಕಾಂಗ್ರೆಸ್‌ಗೆ ಕಣ್ಮುಚ್ಚಿ ಮತ ಹಾಕ್ರಿ ಎಂದರು.
ಮಳೆಯಲ್ಲಿಯೇ ಖರ್ಗೆ ಭಾಷಣ:
ಬಳ್ಳಾರಿ ನಗರದ ಕಣೇಕಲ್ ಬಸ್ ನಿಲ್ದಾಣದಲ್ಲಿ ಜರುಗಿದ ಕಾಂಗ್ರೆಸ್ ಪ್ರಚಾರ ಸಭೆ (Congress campaing bellary)ವೇಳೆ ತುಂತುರು ಮಳೆ ಶುರುವಾಯಿತು. ಮಳೆಯ ನಡುವೆ ಭಾಷಣ ಮುಂದುವರಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC President mallikarjun kharge) ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಖರ್ಗೆ ತವರಲ್ಲಿ ಕಮಲ ಅರಳಿಸಲು ಬಿಜೆಪಿ ಯತ್ನ: ಚಿತ್ತಾಪುರದಲ್ಲಿ ಪ್ರಿಯಾಂಕ್ ಜೊತೆ ಮಣಿಕಂಠ ಜಂಗಿಕುಸ್ತಿ
ಖರ್ಗೆ ಕುಟುಂಬ ಸಾಫ್ ಮಾಡ್ತಾರಂತೆ
ಬಿಜೆಪಿ ಚಿತ್ತಾಪುರ ಹುರಿಯಾಳು ನಮ್ಮ ಕುಟುಂಬ ಮುಗಿಸಿ ಬಿಡುತ್ತಾರೆ ಎನ್ನುವ ಆಡಿಯೋ ವೈರಲ್(Audio viral) ಆಗಿದೆ. ಬಿಜೆಪಿ ಮುಖಂಡರು ಈತನ ಹಿಂದಿಲ್ಲದೆ ಇಂತಹ ಮಾತು ಆಡಲು ಹೇಗೆ ಸಾಧ್ಯ? ಭಾರತೀಯರ ಸರಾಸರಿ ಆಯುಷ್ಯ 70ರಿಂದ 71 ವರ್ಷ. ತಮಗೀಗ 81 ವರ್ಷ, ಈಗಾಗಲೇ ಬೋನಸ್‌ನಲ್ಲಿರುವೆ. ನನ್ನ ಮುಗಿಸುವವರು ಮುಗಿಸಲಿ, ಹಾಗಂತ ಅವರು ನಿಶ್ಚಿಂತೆಯಿಂದ ಇಲಾಗದು. ನನ್ನಂತೆಯೇ ಇನ್ನೊಬ್ಬರು ಹುಟ್ಟಿಇವರಿಗೆ ಪ್ರಶ್ನೆ ಕೇಳುತ್ತಾರೆಂದು ಖರ್ಗೆ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.