ಡಿ.10ಕ್ಕೆ ಕಲಬುರಗಿಯಲ್ಲಿ ಖರ್ಗೆ ಅಭಿನಂದನಾ ಸಮಾರಂಭ: ಈಶ್ವರ ಖಂಡ್ರೆ

Published : Dec 06, 2022, 11:16 PM IST
ಡಿ.10ಕ್ಕೆ ಕಲಬುರಗಿಯಲ್ಲಿ ಖರ್ಗೆ ಅಭಿನಂದನಾ ಸಮಾರಂಭ: ಈಶ್ವರ ಖಂಡ್ರೆ

ಸಾರಾಂಶ

ನುಡಿದಂತೆ ನಡೆಯುವ ಮಲ್ಲಿಕಾರ್ಜುನ ಖರ್ಗೆ ಅವರ ಸನ್ಮಾನ ಕಾರ್ಯಕ್ರಮವು ಅದ್ಧೂರಿಯಾಗಿ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ: ಈಶ್ವರ ಖಂಡ್ರೆ 

ಬೀದರ್‌(ಡಿ.06): ಎಐಸಿಸಿ ಅಧ್ಯಕ್ಷರಾದ ಮೇಲೆ ಪ್ರಥಮ ಬಾರಿಗೆ ಕಲಬುರಗಿ ನಗರಕ್ಕೆ ಡಿ.10ರಂದು ಆಗಮಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭ ಹಾಗೂ 371(ಜೆ) ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ನಗರದ ಚಿದ್ರಿಯ ಶಾಸಕ ರಹಿಂ ಖಾನ್‌ ಫಾರ್ಮ್‌ ಹೌಸ್‌ನಲ್ಲಿ ನಡೆದ ವಿಭಾಗ ಮಟ್ಟದ ಕಾಂಗ್ರೆಸ್‌ ಮುಖಂಡರ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವ​ರು, ನುಡಿದಂತೆ ನಡೆಯುವ ಮಲ್ಲಿಕಾರ್ಜುನ ಖರ್ಗೆ ಅವರ ಸನ್ಮಾನ ಕಾರ್ಯಕ್ರಮವು ಅದ್ಧೂರಿಯಾಗಿ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಿಂದ ಹೆಚ್ಚನ ಸಂಖ್ಯೆಯ ಖರ್ಗೆ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದರು.

ಬೀದರ್ ಶಾಸಕ ರಹೀಂ ಖಾನ್‌ಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್

ಶಾಸಕ ರಹಿಂ ಖಾನ್‌ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿರುವ ಕೆಲಸದಿಂದಾಗಿ, ಪಕ್ಷದ ಮೇಲಿನ ಅವರ ಬದ್ಧತೆ, ಜನಸೇವೆಯ ಮನೋಭಾವ ಹೊಂದಿರುವುದರಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ಕಡಿಮೆ ಮಾತನಾಡಿ ಹೆಚ್ಚಿನ ಕೆಲಸ ಮಾಡುವುದು ಖರ್ಗೆ ಅವರ ಶೈಲಿಯಾಗಿದೆ. ಕೊಟ್ಟಮಾತಿಗೆ ಎಂದೂ ತಪ್ಪಿ ನಡೆದಿಲ್ಲ. ಅವೆಲ್ಲವುಗಳ ಪ್ರತಿಫಲವಾಗಿ ಇಂದು ಎಐಸಿಸಿ ಅಧ್ಯಕ್ಷರಾಗಿ ಹೊರ ಹೊಮ್ಮಿದ್ದಾರೆ. ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಡಿ.10 ಕ್ಕೆ ನಡೆ​ಯುವ ಬೃಹತ್‌ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.

ಸಭೆಯಲ್ಲಿ, ಬೀದರ್‌ ಜಿಲ್ಲೆಯಿಂದ ಎಷ್ಟುಜನರು ಪಾಲ್ಗೊಳ್ಳಲ್ಲಿದ್ದಾರೆ. ಎಲ್ಲರೂ ಹೊರಡಲು ವಾಹನಗಳ ವ್ಯವಸ್ಥೆ ಮತ್ತು ಕಾರ್ಯಕ್ರಮ ಯಾವ ರೀತಿ ಏರ್ಪಾಡು ಮಾಡಬೇಕೆಂಬುದರ ಕುರಿತು ಚರ್ಚಿಸಲಾಯಿತು. ಅನೇಕ ಮುಖಂಡರು ಸಭೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ವಿಧಾನ ಪರಿಷತ್‌ ಸದಸ್ಯ ಅರವಿಂದ ಅರಳಿ, ನಗರ ಅಧ್ಯಕ್ಷ ಮೊಹಮ್ಮದ ಯುಸುಫ್‌, ತಾಲೂಕು ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ, ಮೀನಾಕ್ಷಿ ಸಂಗ್ರಾಮ್‌, ಫಾತಿಮಾ ಅಲಿ, ನಿಸಾರ್‌ ಅಹ್ಮದ್‌, ಅಮೃತರಾವ್‌ ಚಿಮಕೋಡೆ, ಸಂಜು ದೊಡ್ಡಿ, ವಿನೋದ ಅಪ್ಪೆ, ಡಿ.ಕೆ ಸಂಜುಕುಮಾರ, ಬಾಬು ಪಾಸ್ವಾನ, ಇರ್ಷಾದ್‌ ಅಲಿ ಪೈಲ್ವಾನ್‌, ಅಬ್ದುಲ್‌ ಸತ್ತರ್‌, ಮಲ್ಲಿಕಾರ್ಜುನ ಬಿರಾದಾರ, ಅಶೋಕ ಚವ್ಹಾಣ್‌, ರಾಠೋಡ್‌, ಸಂಜಯ್‌ ಜಾಗಿರದಾರ್‌, ಫಹಿಮೋದ್ದಿನ್‌ ಶೇರಿಕಾರ್‌, ಡಾ.ಮಕ್ಸುದ್‌ ಚಂದಾ, ಸಿರಾಜ್‌ ಮಿರ್ಚಿ, ಡಾ.ಕಾಮಶೆಟ್ಟಿ, ಅನಿಲ ಕಪಲಾಪುರ, ರಾಮರಾವ್‌ ಪಾಟೀಲ್‌ ಚಾಂಬೋಳ್‌, ರಾಜು ಪಾಟೀಲ್‌ ಚಿಮಕೋಡ್‌, ನಗರ ಸಭೆಯ ಸದಸ್ಯರಾದ ಎಂ.ಡಿ ರಿಯಾಜ್‌, ಎಂ.ಡಿ ಗೌಸ್‌, ಅಬ್ದುಲ್‌ ಸಮಿರ್‌ ಬಾಬಾ, ಪ್ರಶಾಂತ ದೊಡ್ಡಿ, ಮೊಹನ್‌ ಕಲೆಕರ್‌, ದಿಗಂಬರ್‌ ಮಡಿವಾಳ, ನವೀದ್‌ ಶೇರಿಕಾರ್‌, ಸೌದ್‌ ಶೇರಿಕಾರ್‌, ಅಬ್ದುಲ್‌ ಖಲಿಕ್‌, ಅಬ್ದುಲ್‌ ಖದೀರ್‌, ಶೌಕತ್‌ ಅಲಿ, ಸಿಮೊನ, ಜೋಶ್ವಾ, ಧನರಾಜ ಹಂಗರಗಿ, ಹಣಮಂತ ಮಲ್ಕಾಪುರೆ, ಪಕ್ಷದ ಮುಖಂಡರು, ಕಾರ್ಯಕರ್ತರು, ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್