'ಬಿಜೆಪಿ ಯಾರ ಸ್ವಂತ ಆಸ್ತಿಯಲ್ಲ, ಸ್ವಪ್ರತಿಷ್ಠೆಗೆ ಮತದಾರರೇ ಪಾಠ ಕಲಿಸ್ತಾರೆ'

By Kannadaprabha News  |  First Published Apr 12, 2023, 12:49 PM IST

ಶಾಸಕರು ಯಾರೂ ಸ್ವಂತ ತಮ್ಮ ಮನೆಯಿಂದ ಹಣ ತಂದು ಮನೆ ಕಟ್ಟಿಕೊಡಲ್ಲ. ಸರ್ಕಾರದ ಹಣದಲ್ಲಿ ಮಾಡುತ್ತಾರೆ. ಇಲ್ಲಿನ ಜನರಿಗೆ ಏನು ಸಮಸ್ಯೆ ಇದೆ ಎಂಬುದನ್ನು ತಿಳಿದು ಕೆಲಸ ಮಾಡಬೇಕು. ಅದನ್ನು ಬಿಟ್ಟು ಕೇವಲ ಉದ್ದಕ್ಕೆ ರಸ್ತೆ ಮಾಡಿದರೆ ಅಲ್ಲ. ರಸ್ತೆ ಮಾಡಲು ಶಾಸಕರೇ ಬರಬೇಕಿಲ್ಲ: ಮಲ್ಲಿಕಾರ್ಜುನ ಚರಂತಿಮಠ


ಬಾಗಲಕೋಟೆ(ಏ.12): ಬಿಜೆಪಿ ಪಕ್ಷ ಯಾರ ಸ್ವಂತ ಆಸ್ತಿಯೂ ಅಲ್ಲ. ದೇಶದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಅಟಲ್‌ ಬಿಹಾರಿ ವಾಜಪೇಯಿ, ಆಡ್ವಾಣಿ ಅವರು ಪಕ್ಷ ಕಟ್ಟಿದ್ದಾರೆ. ರಾಜ್ಯದಲ್ಲಿ ಅನಂತಕುಮಾರ, ಯಡಿಯೂರಪ್ಪ ಅವರು ಹಳ್ಳಿ ಹಳ್ಳಿಗೆ ಸಂಚರಿಸಿ ಪಕ್ಷವನ್ನು ಬೆಳೆಸಿದ್ದಾರೆ. ಆದರೆ, ಇಲ್ಲಿನ ಕೆಲವರು ಬಿಜೆಪಿ ಅಂದರೆ ತಮ್ಮ ಸ್ವಂತ ಆಸ್ತಿಯಂತೆ ಮಾಡಿಕೊಂಡಿದ್ದಾರೆ. ಅಂಥವರಿಗೆ ಕಾರ್ಯಕರ್ತರು, ಮತದಾರರು ಈ ಬಾರಿ ತಕ್ಕ ಪಾಠ ಕಲಿಸಬೇಕು ಎಂದು ಯುವ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.

ಮುಚಖಂಡಿ ಕ್ರಾಸ್‌ನ ಜಯನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರು ಯಾರೂ ಸ್ವಂತ ತಮ್ಮ ಮನೆಯಿಂದ ಹಣ ತಂದು ಮನೆ ಕಟ್ಟಿಕೊಡಲ್ಲ. ಸರ್ಕಾರದ ಹಣದಲ್ಲಿ ಮಾಡುತ್ತಾರೆ. ಇಲ್ಲಿನ ಜನರಿಗೆ ಏನು ಸಮಸ್ಯೆ ಇದೆ ಎಂಬುದನ್ನು ತಿಳಿದು ಕೆಲಸ ಮಾಡಬೇಕು. ಅದನ್ನು ಬಿಟ್ಟು ಕೇವಲ ಉದ್ದಕ್ಕೆ ರಸ್ತೆ ಮಾಡಿದರೆ ಅಲ್ಲ. ರಸ್ತೆ ಮಾಡಲು ಶಾಸಕರೇ ಬರಬೇಕಿಲ್ಲ ಎಂದು ಹೇಳಿದರು.

Tap to resize

Latest Videos

undefined

2028ರಲ್ಲಿ 150 ಸ್ಥಾನ ಗೆದ್ದು ಇತಿಹಾಸ ನಿರ್ಮಿಸುವೆ: ಜನಾರ್ದನ ರೆಡ್ಡಿ

ಯಾರೇ ಶಾಸಕರಾದರೂ ರಸ್ತೆ, ಮೂಲ ಸೌಲಭ್ಯಗಳನ್ನು ಕಲ್ಪಿಸಲೇಬೇಕು. ಅದನ್ನು ಬಿಟ್ಟು ಹೊಸದಾಗಿ ಜನರ ಬದುಕು ಬದಲಾಗಲು ಏನು ಮಾಡಿದ್ದಾರೆ? ಹೇಳಲಿ. ಸರ್ಕಾರಿ ವೈದ್ಯಕೀಯ ಕಾಲೇಜು ಬಾಗಲಕೋಟಕ್ಕೆ ಬಂದಿದ್ದರೆ ಸುಮಾರು 2 ಸಾವಿರ ಜನರಿಗೆ ಉದ್ಯೋಗ ದೊರೆಯುತ್ತಿತ್ತು. ಬಡ ಮಕ್ಕಳಿಗೆ ವೈದ್ಯಕೀಯ ಶಿಕ್ಷಣವೂ ಸಿಗುತ್ತಿತ್ತು. ಅದು ಬಾರದಂತೆ ನೋಡಿಕೊಂಡವರು ಯಾರು? ಎಂಬುದು ಜನ ಅರಿಯಬೇಕು ಎಂದರು.

ಯುವ ಮುಖಂಡ ಸಂತೋಷ ಹೊಕ್ರಾಣಿ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ವಿಜಯ ಸುಲಾಖೆ, ಅಶೋಕ ಮುತ್ತಿನಮಠ, ಅರುಣ ಲೋಕಾಪುರ, ರಾಜು ಗೌಳಿ, ಸಚಿನ ಮರಿಶೆಟ್ಟಿ, ಬಸವರಾಜ ತುಂಬರಮಟ್ಟಿ, ವಿಶಾಲ ಮಾಂಡಗಿ, ಮಹಾಂತೇಶ ರೇವಡಿ, ನಾಗೇಶ ಬಡಿಗೇರ, ಅನ್ನಪೂರ್ಣ ಗುಣಾರೆ, ಗಿರೀಜಾ ತುಂಬರಮಟ್ಟಿ, ಪಮ್ಮವ್ವ ಮುಳ್ಳೂರ, ಮೀನಾಕ್ಷಿ ಅಮರಾವತಿ, ಅಖಿಲೇಶ ಉಪಸ್ಥಿತರಿದ್ದರು.

ಬೆಲೆ ಏರಿಕೆಯೇ ಬಿಜೆಪಿ ಮಾಡಿರೋ ದೊಡ್ಡ ಸಾಧನೆ: ಜೆ.ಟಿ.ಪಾಟೀಲ

ಬೆಂಗಳೂರಿನಲ್ಲಿ ಒಬ್ಬ ಚಾಲಕರಿಗೆ 30000 ಸಂಬಳವಿದೆ. ಬಾಗಲಕೋಟೆಯಲ್ಲಿ ಪದವಿ ಆದವರು ಕೇವಲ 8 ಸಾವಿರ ಸಂಬಳಕ್ಕೆ ದುಡಿಯುತ್ತಿದ್ದಾರೆ. ಇಲ್ಲಿ ಒಂದು ವೈದ್ಯಕೀಯ ಕಾಲೇಜು ಆಗಿದ್ದರೆ 2 ಸಾವಿರ ಜನರಿಗೆ ಉದ್ಯೋಗ ಸಿಗುತ್ತಿತ್ತು. ಇಲ್ಲಿ ಮುಳುಗಡೆಯಿಂದಾಗಿ ಜನರಿಗೆ ಉದ್ಯೋಗವೇ ಇಲ್ಲ. ಇದಕ್ಕಾಗಿ 18 ವರ್ಷ ಶಾಸಕರಾದವರು ಏನು ಮಾಡಿದ್ದಾರೆ? ಪಕ್ಷವನ್ನು ಸ್ವಂತ ಆಸ್ತಿಯಂತೆ ಮಾಡಿಕೊಂಡಿರುವವರಿಗೆ ತಕ್ಕ ಪಾಠ ಕಲಿಸಿ ಅಂತ ಯುವ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!