ಬಾಗಲಕೋಟೆಯ ಲೋಕಾಯುಕ್ತ ಕಚೇರಿಯಲ್ಲಿ ಸಿಪಿಐ ಆಗಿರುವ ವಿಜಯಪುರ ಮೂಲದ ಮಹೇಂದ್ರಕುಮಾರ್ ನಾಯಕ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಲೋಕಾಯುಕ್ತ ಇಲಾಖೆಯಲ್ಲಿ ಸಿಪಿಐ ಆಗಿರುವ ಮಹೇಂದ್ರ ನಾಯಕ್ ಮತ್ತೆ ರಾಜಕಾರಣಕ್ಕು ನುಗ್ಗುವ ಲಕ್ಷಣಗಗಳು ಗೋಚರಿಸುತ್ತಿದೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಫೆ.2): ವಿಜಯಪುರ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಅದರಲ್ಲು ನಾಗಠಾಣ ಮತ ಕ್ಷೇತ್ರದ ಅಖಾಡ ಚುನಾವಣಾ ಯುದ್ಧಕ್ಕೆ ಸಿದ್ಧವಾಗಿದೆ. ಈಗ ನಾಗಠಾಣ ಕ್ಷೇತ್ರದ ರಾಜಕಾರಣಕ್ಕೆ ಪೊಲೀಸ್ ಅಧಿಕಾರಿಯ ಎಂಟ್ರಿಯಾಗ್ತಿದ್ದು ಕುತೂಹಲ ಕೆರಳಿಸಿದೆ. ಖಾಕಿ ಎಂಟ್ರಿಯಿಂದ ನಾಗಠಾಣ ವಿಧಾನಸಭಾ ಕ್ಷೇತ್ರದ ರಾಜಕಾರಣದಲ್ಲಿ ಹಲ್‌ಚಲ್ ಶುರುವಾಗಿದೆ.
ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿದ ಮಹೇಂದ್ರಕುಮಾರ್ ನಾಯಕ!
ಬಾಗಲಕೋಟೆಯ ಲೋಕಾಯುಕ್ತ ಕಚೇರಿಯಲ್ಲಿ ಸಿಪಿಐ ಆಗಿರುವ ವಿಜಯಪುರ ಮೂಲದ ಮಹೇಂದ್ರಕುಮಾರ್ ನಾಯಕ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಿಸ್ತೃತವಾದ ರಾಜೀನಾಮೆ ಪತ್ರ ಬರೆದಿರುವ ಮಹೇಂದ್ರ ನಾಯಕ್ ಪೊಲೀಸ್ ಮಹಾನಿರ್ದೇಶಕರಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ. ಮನೆಯಲ್ಲಿ ಹಿರಿಜೀವಗಳಿಗೆ ಅನಾರೋಗ್ಯವಿದೆ. ಅವರ ಆರೈಕೆಯ ಅವಶ್ಯಕತೆ ಇರೋದ್ರಿಂದ ತಮ್ಮ ರಾಜೀನಾಮೆ ಮಾನ್ಯ ಮಾಡುವಂತೆ ಪತ್ರದಲ್ಲಿ ಕೋರಿದ್ದಾರೆ. ಮನೆಯ ವಯಕ್ತಿಕ ಸಮಸ್ಯೆಗಳಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಆದ್ರೆ ಈ ವರೆಗೂ ರಾಜೀನಾಮೆ ಸ್ವೀಕೃತಗೊಂಡಿಲ್ಲ.
ನಾಗಠಾಣ ಕ್ಷೇತ್ರಕ್ಕೆ ಮಹೇಂದ್ರ ನಾಯಕ ಎಂಟ್ರಿ!
ಲೋಕಾಯುಕ್ತ ಇಲಾಖೆಯಲ್ಲಿ ಸಿಪಿಐ ಆಗಿರುವ ಮಹೇಂದ್ರ ನಾಯಕ್ ಮತ್ತೆ ರಾಜಕಾರಣಕ್ಕು ನುಗ್ಗುವ ಲಕ್ಷಣಗಗಳು ಗೋಚರಿಸುತ್ತಿದ್ದು, ಬರುವ ವಿಧಾನ ಸಭಾ ಚುನಾವಣೆಯಲ್ಲಿ ಮಹೇಂದ್ರಕುಮಾರ್ ನಾಯಕ ನಾಗಠಾಣ ಕ್ಷೇತ್ರದ ಮೂಲಕ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗ್ತಿದೆ. ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ಮಹೇಂದ್ರಕುಮಾರ್ ನಾಯಕ್ ಟಿಕೇಟ್ ಸಿಗುವ ಭರವಸೆಯಲ್ಲಿದ್ದಾರೆ..
2009ರ ಬ್ಯಾಚ್‌ನ ಪೊಲೀಸ್ ಅಧಿಕಾರಿ:
2009ರ ಬ್ಯಾಚಲ್ಲಿ ಸಿವಿಲ್ ಪಿಎಸೈ ನೇಮಕಗೊಂಡ ಮಹೇಂದ್ರಕುಮಾರ್ ನಾಯಕ, ಮೊದಲಿಗೆ ಬಳ್ಳಾರಿ ಹಿರೇಹಡಗಲಿ ಠಾಣೆಗೆ ಅಧಿಕಾರಿ ವಹಿಸಿಕೊಂಡಿದ್ರು. ಬಳಿಕ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈಗ ರಾಜಕೀಯದಲ್ಲಿ ಧುಮುಕುವ ಆಸೆಯಿಂದ ಇನ್ಸ್ಪೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಿಜಯಪುರ ಗೋಳಗುಮ್ಮಟ ಠಾಣೆ, ಗ್ರಾಮೀಣ ಠಾಣೆ ಸೇರಿದಂತೆ ವಿಜಯಪುರ ಜಿಲ್ಲೆಯಲ್ಲು ಕರ್ತವ್ಯ ನಿರ್ವಹಿಸಿದ್ದಾರೆ.
2005ರಲ್ಲೆ ರಾಜಕೀಯ ಎಂಟ್ರಿಯಾಗಿತ್ತು:
ಸಿಪಿಐ ಎಂದ ಮಾತ್ರಕ್ಕೆ ಮಹೇಂದ್ರಕುಮಾರ್ ನಾಯಕಗೆ ರಾಜಕೀಯ ಅನುಭವ ಇಲ್ಲ ಎನ್ನಲಾಗಲ್ಲ. ಯಾಕಂದ್ರೆ 2005ರಲ್ಲಿ ನಾಗಠಾಣ ಕ್ಷೇತ್ರ ವ್ಯಾಪ್ತಿಯ ಅಲಿಯಾಬಾದ್ ತಾ.ಪಂ ಕ್ಷೇತ್ರದಿಂದ ಬಹುಮತದ ಮೂಲಕ ಆಯ್ಕೆಯಾಗಿದ್ದರು. ಆಗ ಸ್ಥಳೀಯ ಸಂಸ್ಥೆಗೆ ಆಯ್ಕೆಯಾದ ಅತಿ ಕಿರಿಯ ವಯಸ್ಸಿನ ಜನಪ್ರತಿಧಿ ಎನ್ನುವ ಖ್ಯಾತಿಯನ್ನು ಗಳಸಿದ್ದರು. ಆದ್ರೆ ಇವರು ತಾ.ಪಂ ಸದಸ್ಯರಾಗಿದ್ದಾಗಲೆ ಪಿಎಸೈ ಪರೀಕ್ಷೆ ಬರೆದು ಉತ್ತೀರ್ಣರಾಗಿ, ತಾ.ಪಂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕರ್ತವ್ಯಕ್ಕೆ ಹಾಜರಾಗಿದ್ದರು. 2005 ರಿಂದ 2010 ರವರೆಗೆ ನಾಗಠಾಣ ಕ್ಷೇತ್ರದ ಅಲಿಯಾಬಾದ್ ತಾಲೂಕು ಪಂಚಾಯತ್ ಸದಸ್ಯರಾಗಿದ್ರು.. ಜೊತೆಗೆ ತಾಲೂಕು ಪಂಚಾಯತ್ ನ ವಿರೋಧ ಪಕ್ಷದ ನಾಯಕರು ಆಗಿದ್ರು ಅನ್ನೋದು ವಿಶೇಷ.
ಸಿಪಿಐ ಅಖಾಡಕ್ಕೆ, ಲೆಕ್ಕಾಚಾರಗಳೇ ಉಲ್ಟಾಪಲ್ಟಾ
ಸಿಪಿಐ ಮಹೇಂದ್ರಕುಮಾರ್ ನಾಯಕ್ ಅಖಾಡಕ್ಕೆ ಇಳಿದ್ರೆ ಎಲ್ಲ ಲೆಕ್ಕಾಚಾರಗಳು ಉಲ್ಟಾಪಲ್ಟಾ ಆಗುವ ಸಾಧ್ಯತೆಗಳು ಗಟ್ಟಿಯಾಗಿವೆ.. ಸಿಪಿಐ ರಾಜಕೀಯ ಎಂಟ್ರಿಯಿಂದ ಏನೆಲ್ಲ ಆಗಲಿದೆ ಅನ್ನೋದನ್ನ ನೋಡುವುದಾದರೆ. ನಾಗಠಾಣ ಕ್ಷೇತ್ರದಲ್ಲಿ ಸಿಪಿಐ ಮಹೇಂದ್ರಕುಮಾರ್ ಎಂಟ್ರಿಯಿಂದ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆಗಳು ದಟ್ಟವಾಗಿವೆ. ಮಹೇಂದ್ರಕುಮಾರ್ ನಾಯಕ್ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದು, ಟಿಕೇಟ್ ಸಿಕ್ಕ ಟಫ್ ಪೈಟ್ ನೀಡ್ತಾರೆ ಎನ್ನುವ ಮಾತಿದೆ. ಆದ್ರೆ ಕಾರಜೋಳರ ಪುತ್ರ ಗೋಪಾಲ್ ಕಾರಜೋಳಗೆ ಟಿಕೇಟ್ ಪಿಕ್ಸ್ ಆದ್ರೆ, ಮಹೇಂದ್ರಕುಮಾರ್ ನಾಯಕ ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
Udupi: ಪುತ್ತಿಗೆ ಶ್ರೀ ಕೈಯಲ್ಲಿ ಇಸ್ಲಾಂ ಪುಸ್ತಕ! ಈ ವಿವಾದದ ರಹಸ್ಯವೇನು ಗೊತ್ತಾ?
ಮಹೇಂದ್ರಕುಮಾರ್ ಸ್ಪರ್ಧೆಯಿಂದ ಹಾಲಿ ಶಾಸಕರಿಗೆ ಹಿನ್ನಡೆ
ಸಿಪಿಐ ಮಹೇಂದ್ರಕುಮಾರ್ ನಾಯಕ ಸ್ಪರ್ಧೆಯಿಂದ ಹಾಲಿ ಶಾಸಕ ದೇವಾನಂದ ಚೌಹಾನ್ ಎದೆಯಲ್ಲಿ ಢವಢವ ಶುರುವಾಗಿದೆ. ಮಹೇಂದ್ರಕುಮಾರ್ ನಾಯಕ್ ಪ್ರಬಲ ಬಂಜಾರ ಸಮುದಾಯದವ್ರು, ನಾಗಠಾಣ ಕ್ಷೇತ್ರದಲ್ಲಿ 40 ರಿಂದ 44 ಸಾವಿರದಷ್ಟು ಬಂಜಾರಾ ಮತಗಳಿವೆ. ಹಾಲಿ ಜೆಡಿಎಸ್ ಶಾಸಕ ದೇವಾನಂದ ಚೌಹಾನ್ ಹಾಗೂ ಮಹೇಂದ್ರಕುಮಾರ್ ನಾಯಕ್ ನಡುವೆ ಈ ಮತಗಳು ಡಿವೈಡ್ ಆಗೋದು ಪಕ್ಕಾ ಎನ್ನಲಾಗ್ತಿದೆ. ಹೀಗಾಗಿ ಮಹೇಂದ್ರಕುಮಾರ್ ನಾಯಕ್ ಸ್ಪರ್ಧೆಯಿಂದ ಶಾಸಕ ದೇವಾನಂದರಿಗೆ ಹಿನ್ನಡೆಯಾಗೋದು ಪಿಕ್ಸ್ ಅನ್ನೋದು ನಾಗಠಾಣ ಕ್ಷೇತ್ರದ ಜನರ ಮಾತು.
Chikkamagaluru: ಬಿಜೆಪಿಗೆ ಸೇರ್ಪಡೆಯಾಗಿದ್ದಕ್ಕೆ ಯುವಕನ ಕೈ ಮುರಿದ ಕಾಂಗ್ರೆಸ್
ಬಿಜೆಪಿ ಪಕ್ಷ, ಆರ್‌ಎಸ್‌ಎಸ್ ಮುಖಂಡರ ಜೊತೆಗೆ ಉತ್ತಮ ನಂಟು
ಇತ್ತ ಮಹೇಂದ್ರಕುಮಾರ್ ನಾಯಕ್ ಗೆ ಬಿಜೆಪಿಯಲ್ಲಿ ಉತ್ತಮ ಸಂಬಂಧವಿದೆ ಎನ್ನಲಾಗ್ತಿದೆ. ಮಹೇಂದ್ರಕುಮಾರ್ ನಾಯಕ ಮೂಲತಃ ಅಖಿಲ ಭಾರತ ವಿಧ್ಯಾರ್ಥಿ ಪರಿಷತ್‌ನಲ್ಲಿ ಸಕತ್ ಆಕ್ಟಿವ್ ಆಗಿದ್ದವರು. ಆರ್ ಎಸ್ ಎಸ್ ಮುಖಂಡರ ಜೊತೆಗು ಇಂದಿಗೂ ಉತ್ತಮ ನಂಟಿದೆ ಎನ್ನುವ ಮಾತಿವೆ.. ಹಾಗಿದ್ರೆ ಕಾರಜೋಳ ಪುತ್ರರ ಟಿಕೈಟ್ ಪೈಟ್ ನಡುವೆ ಬಿಜೆಪಿ ಟಿಕೇಟ್ ಮಹೇಂದ್ರಕುಮಾರ್ ನಾಯಕಗೆ ಸಿಗುತ್ತಾ? ಇಲ್ಲವೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ತಾರಾ ಕಾದುನೋಡಬೇಕಿದೆ.