
ನವದೆಹಲಿ: ಎನ್‌ಸಿಪಿ ಶಾಸಕರ ಸೇರ್ಪಡೆಯ ಬಳಿಕ ಮಹಾರಾಷ್ಟ್ರದಲ್ಲಿ ಉಂಟಾಗಿರುವ ಸಚಿವ ಸಂಪುಟ ಬಿಕ್ಕಟ್ಟಿನಿಂದಾಗಿ ಮತ್ತೊಮ್ಮೆ ಬಿಜೆಪಿಯ ದೇವೇಂದ್ರ ಫಡ್ನವೀಸ್‌ಗೆ ಆಘಾತವಾಗುವ ಸಾಧ್ಯತೆಗಳಿವೆ. ಜು.14ರ ಶುಕ್ರವಾರ ಸಚಿವ ಸಂಪುಟ ಪುನಾರಚನೆಯಾಗಲಿದ್ದು, ಹಣಕಾಸು ಖಾತೆಯನ್ನು ಎನ್‌ಸಿಪಿಯ ಅಜಿತ್ ಪವಾರ್‌ಗೆ ನೀಡಲಾಗುತ್ತದೆ ಎನ್ನಲಾಗಿದೆ.
ಶಿವಸೇನೆಯ ಶಾಸಕರೊಂದಿಗೆ ಸೇರಿ ಸರ್ಕಾರ ರಚಿಸಿದ ಸಮಯದಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದ ಫಡ್ನವೀಸ್ ಅವರನ್ನು ಉಪಮುಖ್ಯಮಂತ್ರಿ ಮಾಡಿ ಶಿವಸೇನೆಯ ಉದ್ಧವ್ ಠಾಕ್ರೆಯನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಇದೀಗ ಎನ್‌ಸಿಪಿಯಲ್ಲಿ ಬಂಡಾಯವೆದ್ದ ಶಾಸಕರು ಈ ಮೈತ್ರಿಕೂಟವನ್ನು ಸೇರ್ಪಡೆಯಾಗಿದ್ದು, ಈ ಬಾರಿ ಫಡ್ನವೀಸ್ ಹೊಂದಿರುವ ಹಣಕಾಸು ಖಾತೆಯನ್ನು ಅಜಿತ್ ಪವಾರ್‌ಗೆ ನೀಡಲಾಗುತ್ತದೆ ಎನ್ನಲಾಗುತ್ತಿದೆ.
NCP ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಶರದ್ ಪವಾರ್ ವಜಾ, ಅಜಿತ್ ಪವಾರ್ ಘೋಷಣೆ!
ಶಾ ಭೇಟಿ ಮಾಡಿದ ಅಜಿತ್, ಪ್ರಫುಲ್:
ಸಂಪುಟ ಪುನಾರಚನೆ ಬಿಕ್ಕಟ್ಟಿನ ನಡುವೆಯೇ ಎನ್‌ಸಿಪಿ ಶಾಸಕರಾದ ಅಜಿತ್ ಪವಾರ್ ಮತ್ತು ಪ್ರಫುಲ್ ಪಟೇಲ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಹಿರಿಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಎನ್‌ಸಿಪಿ ಶಾಸಕರ ಸೇರ್ಪಡೆಯ ಬೆನ್ನಲ್ಲೇ ಬಿಜೆಪಿ ಹಾಗೂ ಶಿವಸೇನೆ ಶಾಸಕರ ನಡುವೆ ಅಸಮಾಧಾನ ಆರಂಭವಾಗಿದೆ ಎಂಬ ಹೇಳಿಕೆಗಳು ಸಹ ಕೇಳಿಬಂದಿವೆ.
ಮಹಾರಾಷ್ಟ್ರದಲ್ಲಿ ಮುಂದುವರಿದ 'ಪವಾರ್ ಪ್ಲೇ'! ಎರಡು ಬಣಗಳಿಂದ ಶಕ್ತಿ ಪ್ರದರ್ಶನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.