
ರಾಮನಗರ (ಜು.29): ಕುಮಾರಸ್ವಾಮಿ ರಾಮನಗರ ಜಿಲ್ಲೆ ಮಾಡಿದ್ದಾಗಿ ಹೇಳ್ತಾರಲ್ಲ, ಅಭಿವೃದ್ಧಿ ಮಾಡಿದ್ದಾರಾ? ನಾಲ್ಕು ಬಿಲ್ಡಿಂಗ್ ಕಟ್ಟಿದ್ದು ಬಿಟ್ರೆ, ಇನ್ನೇನಾಗಿದೆ ಅಭಿವೃದ್ಧಿ. 20 ವರ್ಷ ರಾಜ್ಯಭಾರ ಮಾಡಿ ರಾಮನಗರವನ್ನು ಕಸದ ತೊಟ್ಟಿ ಮಾಡಿದ್ದಾರೆ ಎಂದು ಶಾಸಕ ಬಾಲಕೃಷ್ಣ ಕಿಡಿಕಾರಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮನಗರ ಎಂಬ ಹೆಸರಿದ್ರೆ ಅಭಿವೃದ್ಧಿ ಆಗತ್ತಾ? ಕುಮಾರಸ್ವಾಮಿ ರಾಮನಗರವನ್ನ ಅಭಿವೃದ್ಧಿ ಮಾಡಿದ್ದಾರ? ಜಿಲ್ಲೆ ಮಾಡಿ ನಾಲ್ಕು ಬಿಲ್ಡಿಂಗ್ ಕಟ್ಟಿದ್ದು ಬಿಟ್ರೆ ಇನ್ನೇನಾಗಿದೆ ಅಭಿವೃದ್ಧಿ. 20 ವರ್ಷ ರಾಜ್ಯಭಾರ ಮಾಡಿ ಏನು ಅಭಿವೃದ್ಧಿ ಮಾಡಿದ್ದಾರೆ? ಕಸದ ತೊಟ್ಟಿ ಇದ್ದಾಗಿದೆ ರಾಮನಗರ. ಕನಕಪುರಕ್ಕೂ ರಾಮನಗರ ಅಭಿವೃದ್ಧಿ ಹೇಗಿದೆ ಗೊತ್ತ. ನಮಗೂ 20 ವರ್ಷ ಕೊಡಿ ಅಭಿವೃದ್ಧಿ ಮಾಡುತ್ತೇವೆ. ಅಭಿವೃದ್ಧಿ ಮಾಡಲಿಲ್ಲ ಅಂದ್ರೆ ಮತ್ತೆ ಬದಲಾವಣೆ ಮಾಡಿ. ಸಿಎಂ ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದಾರೆ. ಇನ್ನ ಸ್ವಲ್ಪ ದಿನದಲ್ಲಿ ರಾಮನಗರ ಹೇಗೆ ಬದಲಾವಣೆ ಆಗಲಿದೆ ಅಂತ ನೋಡಿ ಎಂದು ತಿಳಿಸಿದರು.
ರಾಮನಗರ ಜಿಲ್ಲೆ ಹೆಸರು ಮರು ಸ್ಥಾಪನೆ ಮಾಡೇ ಮಾಡ್ತೀವಿ; ಡಿಕೆಶಿಗೆ ಸವಾಲೆಸೆದ ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣ ಬೈ ಎಲೆಕ್ಷನ್ ಉಸ್ತುವಾರಿ ವಿಚಾರದ ಬಗ್ಗೆ ಮಾತನಾಡಿ, ಊರಿನಿಂದ ಊರಿಗೆ ಹೋದ ಗೌಡ ಯಾವುದಕ್ಕೂ ಬೇಡ. ನಾನು ಚನ್ನಪಟ್ಟಣಕ್ಕೆ ಹೋಗಿ ಏನು ಮಾಡಲು ಆಗತ್ತೆ. ಸುಮ್ನೆ ಕಾರ್ಯಕರ್ತರನ್ನ ನೋಡಿಕೊಳ್ಳಿ ಅಂತ ಹಾಕಿದ್ದಾರೆ. ಹೀಗಾಗಿ ಕಾರ್ಯಕರ್ತರ ಜತೆ ಒಡನಾಟ ಇಟ್ಟುಕೊಂಡಿದ್ದೀನಿ. ಕಾರ್ಯಕರ್ತರಿಗೆ ಅನುಭವದ ಮಾತುಗಳನ್ನ ಹೇಳುತ್ತಿದ್ದೀನಿ. ನಾನು ಚನ್ನಪಟ್ಟಣದಲ್ಲಿ ಓಟ್ ಹಾಕಿಸೋಕೆ ಆಗತ್ತ?. ಚನ್ನಪಟ್ಟಣ ಉಸ್ತುವಾರಿ ಇಷ್ಟ ಇದೆ. ಆದ್ರೆ ಎಲ್ಲ ನಾವೇ ಮಾಡುತ್ತೇವೆ ಅಂತ ಅಲ್ಲ. ನಮಗೂ ಒಂದು ಹೋಬಳಿ ವಹಿಸಿದ್ದಾರೆ. ಹೀಗಾಗಿ ನಾವು ನೋಡಿಕೊಳ್ಳುತ್ತಿದ್ದೇವೆ ಅಷ್ಟೇ. ಈಗಾಗಲೇ ಎರಡು ಸಭೆ ಮಾಡಿ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದೇವೆ. ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಿದ್ದಾರೆ. ಕ್ಯಾಂಡಿಡೇಟ್ ಅನೌನ್ಸ್ ಆದಾಗ ತಿಳಿಸುತ್ತೇವೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದರು.
ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಿದ್ರೆ ಸರ್ವನಾಶ ಆಗುತ್ತಾರೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ರಾಜಕೀಯವಾಗಿ ಜೀವನದಲ್ಲಿ ಅವರ ವಿರುದ್ಧ ಮಾತನಾಡಿದವರನ್ನ ಸರ್ವನಾಶ ಮಾಡಿಕೊಂಡೆ ಬಂದಿದ್ದಾರೆ. ಸೂರ್ಯ ಚಂದ್ರ ಇರುವವರೆಗೂ ಈ ಭೂಮಿ ಮೇಲೆ ಅವರೇ ಇರಲಿ. ನಾವೇಲ್ಲ ಸರ್ವನಾಶ ಆಗ್ತೇವೆ. ಹೆಸರು ಮರುನಾಮಕರಣ ಈಗಾಗಲೇ ಕ್ಯಾಬಿನೆಟ್‌ನಲ್ಲಿ ಅಂಗೀಕಾರವಾಗಿದೆ. ಗೆಜೆಟ್‌ನಲ್ಲಿ ಅಂಗೀಕಾರ ಮಾತ್ರ ಬಾಕಿ ಇದೆ. ಇನ್ನು ಜಿಲ್ಲೆ ಹೆಸರು ಮರುನಾಮಕರಣ ಮಾಡದಂತೆ ರಾಜ್ಯಪಾಲರಿಗೆ ಸಂಘಟನೆಗಳಿಂದ ಮನವಿ ಮಾಡಲಾಗಿದೆ. ಅವರವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ, ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಯಾವುದೇ ರಾಜಕೀಯ ತಿರ್ಮಾನಗಳಾದಾಗ ಪರ ವಿರೋಧಗಳು ಇರುತ್ತವೆ ಎಂದು ತಿಳಿಸಿದರು.
ಕನ್ನಡ ನಾಡಿನ ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಊಟದ ತಟ್ಟೆ; ಡಿಸಿಎಂ ಡಿ.ಕೆ. ಶಿವಕುಮಾರ್
ನಾವೆಲ್ಲ ಹುಟ್ಟಿದ್ದಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ಇತ್ತು. ಮಧ್ಯದಲ್ಲಿ ಜಿಲ್ಲೆ ವಿಭಾಗವಾಯಿತು. ಗ್ರಾಮಾಂತರ ಜಿಲ್ಲೆಯಲ್ಲಿ 8 ತಾಲೂಕುಗಳಿದ್ದವು. ಅದರಲ್ಲಿ ತಲಾ 4 ತಾಲೂಕುಗಳನ್ನು ಹಂಚಿಕೆ ಮಾಡಿದರು. ರಾಮನಗರ ಜಿಲ್ಲಾ ಕೇಂದ್ರ ಮಾಡಿ ಬೆಂಗಳೂರು ದಕ್ಷಿಣ ಅಂತ ಹೆಸರಿಡಿ ಎಂದಿದ್ದೆವು. ಕೆಂಪೇಗೌಡರ ನಾಡು, ನಮಗೂ ಆ ಹೆಸರಿಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ಹೆಸರು ಬದಲಾಯಿಸಬೇಡಿ ಎಂದಿದ್ದೆವು. ಅಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ನಮ್ಮ ಮಾತಿಗೆ ಮರ್ಯಾದೆ ಕೊಡದೆ ಹೆಸರು ಬದಲಾಯಿಸಿದ್ದರು. ಈಗ ಬೆಂಗಳೂರು ದಕ್ಷಿಣ ಅಂತ ಹೆಸರಿಟ್ಟಿದ್ದೇವೆ. ಅಂದು ಹೆಸರು ಬದಲಾವಣೆ ಮಾಡಿದ್ದು ಕುಮಾರಸ್ವಾಮಿ ಅಲ್ಲ. ಹೆಚ್.ಡಿ. ರೇವಣ್ಣ ಮಾಡಿದ್ದು. ಅಂದು ಏನೇ ತಿರ್ಮಾನ ಆಗಬೇಕಿದ್ದರೂ, ರೇವಣ್ಣ ಅವರ ಮಾತು ನಡೆಯುತ್ತಿತ್ತು. ಹೀಗಾಗಿ ಕುಮಾರಸ್ವಾಮಿ ತಿರ್ಮಾನ ಅಂತಿಮ ಆಗುತ್ತಿರಲಿಲ್ಲ. ಕುಮಾರಸ್ವಾಮಿ ಆ ವಿಚಾರಕ್ಕೆಲ್ಲ ತಲೆ ಕೂಡ ಕೆಡಿಸಿಕೊಳ್ಳುತ್ತಿರಲಿಲ್ಲ ಎಂದು ರಾಜಕೀಯ ದಾಳ ಉರುಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.