ಕೊರೋನಾ ಭೀತಿ ನಡುವೆ ರಾಜಕೀಯ ಕ್ರಾಂತಿ: ಎಚ್‌ಡಿಕೆ, ಡಿಕೆಶಿ ಹಣಿಯಲು ಗೇಮ್ ಪ್ಲಾನ್

By Suvarna NewsFirst Published May 13, 2020, 5:38 PM IST
Highlights

 ಕಾಂಗ್ರೆಸ್ ಮುಖಂಡ, ಮಾಜಿ ಶಾಸಕರೊಬ್ಬರು  ಪಕ್ಷದ ನಾಯಕರ ಬಗ್ಗೆಯೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿ ಕೊರೋನಾ ಭೀತಿಯಲ್ಲಿ ರಾಜಕೀಯ ಕ್ರಾಂತಿ ಎಬ್ಬಿಸಿದ್ದಾರೆ

ರಾಮನಗರ, (ಮೇ.13): ಮಾಗಡಿ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ  ಎಚ್‌.ಸಿ ಬಾಲಕೃಷ್ಣ ನಡೆ ನೋಡಿದ್ರೆ ಮುಂದಿನ ದಿನಗಳಲ್ಲಿ ಬಿಜೆಪಿ ಸೇರಲಿದ್ದಾರಾ ಎನ್ನುವ ಚರ್ಚೆಗಳು ನಡೆದಿವೆ.

ಇದಕ್ಕೆ ಪೂಕರವೆಂಬಂತೆ ಎಚ್‌.ಸಿ ಬಾಲಕೃಷ್ಣ ಅವರು ಪರೋಕ್ಷವಾಗಿ ಸ್ವಪಕ್ಷದ ನಾಯಕರ ವಿರುದ್ದ ಬಹಿರಂಗವಾಗಿ ಬೇಸರ ಹೊರಹಾಕಿದ್ದಾರೆ.

ಲಾಕ್‌ಡೌನ್‌ನಿಂದ ಸಂಕ​ಷ್ಟ​ದ​ಲ್ಲಿ​ರುವ ಜನತೆ: ಮಣ್ಣಿನ ಮಕ್ಕಳು ಈಗ ಎಲ್ಲಿದ್ದಾರೆ?

ರಾಮನಗರ ಜಿಲ್ಲೆ ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ, ನನಗೆ ನನ್ನ ಕ್ಷೇತ್ರದ ಜನರಷ್ಟೇ ಮುಖ್ಯ, ಪಕ್ಷದ ನಾಯಕರಲ್ಲ. ನನ್ನನ್ನ ಗೆಲ್ಲಿಸೋದು ಕ್ಷೇತ್ರದ ಜನ ಮಾತ್ರ. ಪಕ್ಷದ ನಾಯಕರು ಬಂದು ನನ್ನನ್ನ ಗೆಲ್ಲಿಸಲ್ಲ. ಮಂತ್ರಿ ಸ್ಥಾನದ ಅವಕಾಶ ಬಂದಾಗ ಮಾತ್ರ ನಾಯಕರ ಅವಶ್ಯಕತೆ ಇರುತ್ತೆ ಎನ್ನುವ ಮೂಲಕ ಮಾಗಡಿ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಎಚ್‌.ಸಿ. ಬಾಲಕೃಷ್ಣ ಸ್ವಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ನನ್ನನ್ನು ಬೆಳೆಸೋದು, ಉಳಿಸೋದು ಕ್ಷೇತ್ರದ ಜನರಷ್ಟೇ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ನಾಯಕರ ನಡೆ ಬೇಸರ ತಂದಿದೆ. ನಾನು ಮೊದಲು ಬಿಜೆಪಿಯಲ್ಲಿದ್ದೆ, ನಂತರ ಜೆಡಿಎಸ್ ನಲ್ಲಿದ್ದೆ. ಎರಡೂ ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ. ಆದರೆ ಕಾಂಗ್ರೆಸ್ ನಲ್ಲಿ ನನ್ನ ಶ್ರಮಕ್ಕೆ ಬೆಲೆ ಸಿಗುತ್ತಿಲ್ಲ ಎನಿಸುತ್ತಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ಗೆ ಗುಡ್‌ಬೈ ಹೇಳುವ ಸುಳಿವು ಕೊಟ್ಟಿದ್ದಾರೆ.

ಬಿಜೆಪಿಯತ್ತ ಬಾಲಕೃಷ್ಣ ಮನಸ್ಸು..!
ಹೌದು... ಬಾಲಕೃಷ್ಣ ಈ ರೀತಿ ಮಾತನಾಡಿರುವುದನ್ನ ಗಮನಿಸಿದರೆ ಭವಿಷ್ಯದಲ್ಲಿ ಬಿಜೆಪಿ ಪಕ್ಷ ಸೇರುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ. ಇನ್ನು ಇದಕ್ಕೆ ಪೂರಕವೆಂಬಂತೆ ನಿನ್ನೆಯಷ್ಟೇ ಬಿಡದಿ ಟೌನ್​ಶಿಪ್ ವಿಚಾರವಾಗಿ ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನ ಬಾಲಕೃಷ್ಣ ಭೇಟಿ ಮಾಡಿರೋದು ಕಮಲ ಹಿಡಿಯುವ ಸಾಧ್ಯತೆ ಮತ್ತಷ್ಟು ಹೆಚ್ಚಾಗಿದೆ.

ಭಾರೀ ಕುತೂಹಲ ಮೂಡಿಸಿದ ಬದ್ಧ ವೈರಿಗಳ ಗೌಪ್ಯ ಸಭೆ!

ಬಿಜೆಪಿಗೆ ಇದೆ ಬೇಕಿರೋದು
ಯೆಸ್...ಜೆಡಿಎಸ್‌ ಭದ್ರಕೋಟೆ ರಾಮನಗರದಲ್ಲಿ ಕಮಲ ಅರಳಿಸಲು ಬಿಜೆಪಿ ಕಸರತ್ತು ನಡೆಸುತ್ತಿದೆಯಾದರೂ ವರ್ಕೌಟ್ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಫುಲ್ ಫೈಟ್ ಕೊಡುವ ಬಾಲಕೃಷ್ಣ ಅವರನ್ನು ಸೆಳೆದು ಕೇಸರಿ ಬಾವುಟ ಹಾರಿಸುವ ಪ್ಲಾನ್‌ ಬಿಜೆಪಿಯದ್ದಾಗಿದೆ. ಇದರಿಂದ ಅಶ್ವಥ್ ನಾರಾಯಣ ಈಗಿನಿಂದಲೇ ಈ ಆಟಕ್ಕೆ ಕೈಹಾಕಿದ್ದಾರೆ ಎನ್ನಲಾಗಿದೆ.

ವಕ್ಕಲಿಗರ ವೋಟ್‌ ಬ್ಯಾಂಕ್‌ಗೂ ಬಿಜೆಪಿ ಕಸರತ್ತು
ರಾಜ್ಯದಲ್ಲಿ ಲಿಂಗಾಯತ ಸಮುದಾಯ ಬಹುತೇಕ ಬಿಜೆಪಿಯ ವೋಟ್ ಬ್ಯಾಂಕ್ ಆಗಿದೆ. ಇದೀಗ ಮಂಡ್ಯ, ಮೈಸೂರು, ಹಾಸನ ಮತ್ತು ರಾಮನಗರದಲ್ಲಿ ವಕ್ಕಲಿಗ ಮತಗಳ ನಿರ್ಣಾಯಕವಾಗಿವೆ. ಈ ಕಾರಣಕ್ಕಾಗಿ ವಕ್ಕಲಿಗ ಸಮುದಾಯಕ್ಕೆ ಸೇರಿರುವ ಬಾಲಕೃಷ್ಣಗೆ ಸ್ಕೆಚ್ ಹಾಕಿದೆ ಎನ್ನಲಾಗಿದೆ. ಈಗಾಗಲೇ ಯಶವಂತಪುರ ಕ್ಷೇತ್ರ ಶಾಸಕರಾಗಿ ಗೆದ್ದಿರುವ ಎಸ್‌.ಸೋಮಶೇಖರ್‌ ಅವರಿಗೆ ಮಂತ್ರಿ ಸ್ಥಾನ ಕೊಡುವುದಲ್ಲದೇ ಮೈಸೂರು ಉಸ್ತುವಾರಿ ಕೊಟ್ಟಿರುವುದನ್ನು ವಕ್ಕಲಿಗ ವೋಟ್ ಸೆಳೆಯಲು ಇದೊಂದು ಉದಾಹರಣೆ ಕೂಡ.

ಒಟ್ಟಿನಲ್ಲಿ ರಾಮನಗರದಲ್ಲಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್‌ ಅವರನ್ನು ಹಣಿಯಲು ಬಿಜೆಪಿ ಈಗಿನಿಂದಲೇ ಕಸರತ್ತು ನಡೆಸುತ್ತಿದೆ.

click me!