ಚುನಾವಣೆ ಹೊತ್ತಲ್ಲಿ ಮಧ್ಯಪ್ರದೇಶ ಸಿಎಂ ರೀಲ್ಸ್‌: ಫುಲ್ ವೈರಲ್

Published : Nov 12, 2023, 12:31 PM IST
ಚುನಾವಣೆ ಹೊತ್ತಲ್ಲಿ ಮಧ್ಯಪ್ರದೇಶ ಸಿಎಂ ರೀಲ್ಸ್‌: ಫುಲ್ ವೈರಲ್

ಸಾರಾಂಶ

ಚುನಾವಣೆ ಘೋಷಿಸಲ್ಪಟ್ಟಿರುವ ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ವೈರಲ್ ಮೀಮ್ಸ್ ಮೂಲಕ ಖ್ಯಾತಿ ಗಳಿಸಿರುವ ಭೂಪೇಂದ್ರ ಜೋಗಿ, ಜೊತೆ ರೀಲ್ಸ್ ಮಾಡಿದ್ದು, ಈ ರೀಲ್ಸ್ ಈಗ ಸಖತ್ ವೈರಲ್ ಆಗಿದೆ.

ಭೋಪಾಲ್: ಚುನಾವಣೆ ಘೋಷಿಸಲ್ಪಟ್ಟಿರುವ ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ವೈರಲ್ ಮೀಮ್ಸ್ ಮೂಲಕ ಖ್ಯಾತಿ ಗಳಿಸಿರುವ ಭೂಪೇಂದ್ರ ಜೋಗಿ, ಜೊತೆ ರೀಲ್ಸ್ ಮಾಡಿದ್ದು, ಈ ರೀಲ್ಸ್ ಈಗ ಸಖತ್ ವೈರಲ್ ಆಗಿದೆ. ಈ ಮೂಲಕ ಟ್ರೋಲರ್‌ ಅಥವಾ ಮೀಮ್ಸ್ ಕ್ರಿಯೇಟರ್ ಭೂಪೇಂದ್ರ ಜೋಗಿ ಇಂಟರ್‌ನೆಟ್‌ನಲ್ಲಿ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. 2018 ರ ಮಧ್ಯಪ್ರದೇಶ ಚುನಾವಣೆಯ ಸಮಯದಲ್ಲಿಯೂ ಅವರ ಅನಿರೀಕ್ಷಿತವಾಗಿ ಪ್ರಸಿದ್ಧಿಯಾಗಿದ್ದರು. ಈಗ ಮತ್ತೆ ಅವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಜೊತೆಗಿನ ವೀಡಿಯೋದಿಂದಾಗಿ ಮುನ್ನೆಲೆಗೆ ಬಂದಿದ್ದಾರೆ.

ಈ ವೀಡಿಯೋವನ್ನು ಸ್ವತಃ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಇಂಟರ್‌ನೆಟ್‌ನಲ್ಲಿ ಫೇಮಸ್ ಆಗಿರುವ ಭೂಪೇಂದರ್ ಜೋಗಿ ಜೊತೆ ಅವರ ಈ ಆತ್ಮೀಯತೆಯನ್ನು ಈ ವೀಡಿಯೋ ಸೂಚಿಸುತ್ತಿದೆ. ವೀಡಿಯೋದಲ್ಲಿ ಸಿಎಂ ಚೌಹಾನ್ ಹಾಗೂ ಜೋಗಿ ತಮಾಷೆಯ ವೀಡಿಯೋ ಮಾಡಿದ್ದು, ಇದು 2018ರ ಅವರು ಮೊದಲು ಮುನ್ನೆಲೆಗೆ ಬಂದ ಕ್ಷಣವನ್ನು ನೆನಪಿಸುತ್ತಿದೆ. ಜೋಗಿ ಸರ್ಕಾರದ ಯೋಜನೆಗಳನ್ನು ಹಾಸ್ಯಮಯವಾಗಿ ತಿಳಿಸುವ ಮೂಲಕ ಅವುಗಳನ್ನು ಜನರ ಬಳಿ ತಲುಪಿಸುತ್ತಿದ್ದಾರೆ. 

ಕೊಲೆ ಆಗಿದ್ದ ಬಾಲಕ ಸುಪ್ರೀಂಕೋರ್ಟ್‌ ಮುಂದೆ ಹಾಜರಾಗಿ ಬದುಕಿದ್ದೇನೆ ಎಂದ..!

ಜೋಗಿ ಅವರು 2018 ರಲ್ಲಿ ಲಾಲನ್‌ಟಾಪ್ ನ್ಯೂಸ್‌ ತಂಡದೊಂದಿಗಿನ ಸಂಭಾಷಣೆಯ ಸಮಯದಲ್ಲಿ ವ್ಯಾಪಕವಾಗಿ ಜನರ ಗಮನ ಸೆಳೆದಿದ್ದರು. ಅಮೆರಿಕಾಗೆ ಹೋಲಿಸಿದರೆ  ಮಧ್ಯಪ್ರದೇಶದ ರಸ್ತೆಗಳ ಗುಣಮಟ್ಟ  ಬಹಳ ಚೆನ್ನಾಗಿದೆ ಎಂದ ಬಿಜೆಪಿಯ ಹೇಳಿಕೆಗಳಿಗೆ ಅವರು ಪ್ರತಿಕ್ರಿಯಿಸಿದ್ದರು. ಅವರ ನೇರ ಮಾತು ರಾತ್ರೋರಾತ್ರಿ ಅವರನ್ನು ಇಂಟರ್‌ನೆಟ್‌ನಲ್ಲಿ ಫೇಮಸ್ ಆಗುವಂತೆ ಮಾಡಿತ್ತು.  ಇದಾದ ನಂತರ ಜೋಗಿ ಬಹಳಷ್ಟು ಖ್ಯಾತಿ ಗಳಿಸಿದ್ದಾರೆ. ಇದು ಅವರಿಗೆ ಈ ಡಿಜಿಟಲ್ ಯುಗದಲ್ಲಿ ಹೊಸ ಬದುಕು ನೀಡಿದೆ. 

ಐಸಿಸ್ ಉಗ್ರ ಜಾಲದೊಂದಿಗೆ ನಂಟು ಶಂಕೆ: ಅಲಿಗಢ ವಿವಿಯ 4 ವಿದ್ಯಾರ್ಥಿಗಳ ಬಂಧನ

ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಮಧ್ಯಪ್ರದೇಶ ಸಿಎಂ ಅವರು ಭೂಪೇಂದರ್ ಜೋಗಿ ಅವರ ಬಳಿ ನಿಮ್ಮ ಹೆಸರೇನು ಎಂದು  ಕೇಳುತ್ತಾರೆ. ಇದಕ್ಕೆ ಜೋಗಿ ತನ್ನ ಹೆಸರು ಶಿವರಾಜ್ ಸಿಂಗ್ ಚೌಹಾಣ್ ಎಂದು ಉತ್ತರಿಸುತ್ತಾರೆ. ಇದಾದ ನಂತರ ಚೌಹಾಣ್ ತಮ್ಮ ಸರ್ಕಾರದ ಕೆಲವು ಯೋಜನೆಗಳನ್ನು ಹೇಳುವಂತೆ ಕೇಳುತ್ತಾರೆ. ಆದರೆ ಇದಕ್ಕೆ ಜೋಗಿ ಹಾಸ್ಯಮಯವಾಗಿ  ಪ್ರತಿಕ್ರಿಯಿಸುತ್ತಾ ತಮ್ಮ ಹೆಸರನ್ನೇ ಹೇಳುತ್ತಾರೆ. 2 ದಿನದ ಹಿಂದೆ ಶೇರ್ ಮಾಡಿದ ಈ ವೀಡಿಯೋವನ್ನು 6 ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು, 8 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕರು ಕಾಮೆಂಟ್ ಮಾಡಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ