ಯಡಿಯೂರಪ್ಪರನ್ನು ಕಡೆಗಣಿಸದಿದ್ರೆ ನಾವೇ ಅಧಿಕಾರದಲ್ಲಿರುತ್ತಿದ್ದೆವು: ವಿಜುಗೌಡ ಪಾಟೀಲ

By Kannadaprabha News  |  First Published Nov 12, 2023, 12:31 PM IST

ಯಡಿಯೂರಪ್ಪನವರು ಸೈಕಲ್ ತುಳಿದು ಪಕ್ಷವನ್ನು ಈ ಮಟ್ಟಕ್ಕೆ ತಂದಿದ್ದಾರೆ. ಈಗ ಅವರ ಮಗನೇ ರಾಜ್ಯಾಧ್ಯಕ್ಷರಾಗಿದ್ದು ಖುಷಿಯ ವಿಷಯ. ವಿಜಯೇಂದ್ರ ತಂದೆಯ ನೆರಳಲ್ಲೇ ಬೆಳೆದಿದ್ದರೂ, ಸ್ವಂತ ಶ್ರಮದಿಂದ ಮೇಲೆ ಬಂದಿದ್ದಾರೆ. ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಕಾರ್ಯಕರ್ತರಿಗೆ ಹಬ್ಬದ ಉಡುಗೊರೆ ನೀಡಿದಂತಾಗಿದೆ: ಬಿಜೆಪಿ ಮುಖಂಡ ವಿಜುಗೌಡ ಪಾಟೀಲ 


ವಿಜಯಪುರ(ನ.11): ಯಡಿಯೂರಪ್ಪರನ್ನು ಕಳೆದ ಚುನಾವಣೆಯಲ್ಲಿ ಕಡೆಗಣಿಸದಿದ್ರೆ ನಾವೇ ಅಧಿಕಾರದಲ್ಲಿರುತ್ತಿದ್ದೆವು. ಈಗ ಆ ತಪ್ಪಿನ ಅರಿವಾಗಿದೆ. ಯಡಿಯೂರಪ್ಪರಿಂದ ಬಿಜೆಪಿ ರಾಜ್ಯದಲ್ಲಿ ನೆಲೆ ನಿಂತಿದೆ. ವಿಜಯೇಂದ್ರ ಅದೇ ದಾರಿಯಲ್ಲಿ ಮುಂದುವರಿದು ಪಕ್ಷ ಸಂಘಟಿಸಲಿದ್ದಾರೆ. ಯುವಕರಲ್ಲಿ ಉತ್ಸಾಹ ಮೂಡಿದೆ. ಅವರ ಸಂಘಟನಾ ಶಕ್ತಿಯಿಂದ ಪಕ್ಷಕ್ಕೆ ಒಳಿತಾಗಲಿದೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಸೈಕಲ್ ತುಳಿದು ಪಕ್ಷವನ್ನು ಈ ಮಟ್ಟಕ್ಕೆ ತಂದಿದ್ದಾರೆ. ಈಗ ಅವರ ಮಗನೇ ರಾಜ್ಯಾಧ್ಯಕ್ಷರಾಗಿದ್ದು ಖುಷಿಯ ವಿಷಯ. ವಿಜಯೇಂದ್ರ ತಂದೆಯ ನೆರಳಲ್ಲೇ ಬೆಳೆದಿದ್ದರೂ, ಸ್ವಂತ ಶ್ರಮದಿಂದ ಮೇಲೆ ಬಂದಿದ್ದಾರೆ. ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಕಾರ್ಯಕರ್ತರಿಗೆ ಹಬ್ಬದ ಉಡುಗೊರೆ ನೀಡಿದಂತಾಗಿದೆ ಎಂದರು.

Tap to resize

Latest Videos

ಸಿಎಂ ಬದಲಾವಣೆ ವಿಷಯವೇ ಅಪ್ರಸ್ತುತ: ಶಾಸಕ ಯಶವಂತರಾಯಗೌಡ

ಕಾಂಗ್ರೆಸ್ ಹೇಳುವಂತೆ ಇದು ಅಪ್ಪ-ಮಕ್ಕಳ ರಾಜಕಾರಣ ಅಲ್ಲ. ಬಿಜೆಪಿ ಕಾರ್ಯಕರ್ತರ ಪಕ್ಷ. ವಿಜಯೇಂದ್ರ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ, ಯುವ ಮೋರ್ಚಾ ಅಧ್ಯಕ್ಷ ಹಾಗೂ ಪಕ್ಷದ ಉಪಾಧ್ಯಕ್ಷರಾಗಿ ಈಗ ಈ ಮಟ್ಟಕ್ಕೆ ತಲುಪಿದ್ದಾರೆ. ಕುಟುಂಬ ರಾಜಕಾರಣದ ಮಾತನಾಡುವವರು ತಮ್ಮ ಮಕ್ಕಳನ್ನು ಬೆಳೆಸುತ್ತಿಲ್ಲವೇ ಎಂದು ಪ್ರಶ್ನಿಸಿದ ವಿಜುಗೌಡ, ಈ ಬದಲಾವಣೆಯಿಂದ ಕಾಂಗ್ರೆಸ್ ನಾಯಕರಿಗೆ ಆತಂಕ ಶುರುವಾಗಿದ್ದಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾರೆ. ತನ್ನ ತಪ್ಪುಗಳನ್ನು ಆ ಪಕ್ಷ ಸರಿ ಮಡಿಕೊಳ್ಳಲಿ. ಕೊಟ್ಟಿರುವ ಗ್ಯಾರಂಟಿಗಳನ್ನು ಪೂರೈಸಿ ಜನಕ್ಕೆ ಒಳ್ಳಯದು ಮಾಡಲಿ ಎಂದು ಹೇಳಿದರು.

ಪಕ್ಷದ ವಕ್ತಾರ ಸುರೇಶಗೌಡ ಬಿರಾದಾರ ಮಾತನಾಡಿ, ಕಾಂಗ್ರೆಸ್ಸಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರಿಗೆ ಅಧಿಕಾರದ ದಾಹವಿದೆ. ಅವರ ಪಕ್ಷದಲ್ಲಿರುವಂತೆ ಯಾರನ್ನೋ ತಂದು ಇಲ್ಲಿ ಅಧಿಕಾರಕ್ಕೆ ಏರಿಸಲ್ಲ. ದುಡಿಯುವವರಿಗೆ, ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಮನ್ನಣೆ ಇದೆ ಎಂದು ಹೇಳಿದರು. ಈ ವೇಳೆ ಪಕ್ಷದ ಬಬಲೇಶ್ವರ ಮಂಡಲದ ಅಧ್ಯಕ್ಷ ವಿಠ್ಠಲ ಕಿರಸೂರು, ಸಾಮಾಜಿಕ ಜಾಲ ತಾಣದ ಸಂಚಾಲಕ ಸಂದೀಪ ಪಾಟೀಲ, ಮಾಧ್ಯಮ ಸಂಚಾಲಕ ವಿಜಯ ಜೋಷಿ ಇದ್ದರು.

click me!