ರಾಜ್ಯದಲ್ಲಿ ಯೋಗಿ ಮಾದರಿ ಆಡ​ಳಿತ ಜಾರಿಗೊಳಿಸಲು ಸಿಎಂ ಬೊಮ್ಮಾಯಿಗೆ ತಾಕತ್ತಿಲ್ಲ: ಮಧು ಬಂಗಾ​ರಪ್ಪ

By Kannadaprabha News  |  First Published Mar 5, 2023, 10:43 PM IST

ಏರ್‌​ಪೋರ್ಟ್‌ ಉದ್ಘಾ​ಟ​ನೆಯ ಪ್ರಧಾನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೊರಬ ತಾಲೂಕಿನ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಮಲ್ಲಿಕಾರ್ಜುನ ಅವ​ರಿಗೆ ಕುಡಿಯಲು ನೀರು ದೊರೆಯದೇ ಮೃ​ತ​ಪ​ಟ್ಟಿ​ದ್ದಾರೆ. 


ಶಿಕಾರಿಪುರ (ಮಾ.05): ಏರ್‌​ಪೋರ್ಟ್‌ ಉದ್ಘಾ​ಟ​ನೆಯ ಪ್ರಧಾನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೊರಬ ತಾಲೂಕಿನ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಮಲ್ಲಿಕಾರ್ಜುನ ಅವ​ರಿಗೆ ಕುಡಿಯಲು ನೀರು ದೊರೆಯದೇ ಮೃ​ತ​ಪ​ಟ್ಟಿ​ದ್ದಾರೆ. ಆದರೆ, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡದೇ ದ್ರೋಹ ಬಗೆಯಲಾಗಿದೆ. ಈ ಹಿಂದೆ ಹರ್ಷನ ಸಾವಿಗೆ ಪರಿಹಾರ ನೀಡಿರು​ವ ಬಿಜೆಪಿ ಸರ್ಕಾರ ಮಲ್ಲಿಕಾರ್ಜುನಗೌಡ ಕುಟುಂಬ ಬಗ್ಗೆ ತಾತ್ಸಾರವೇಕೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಪ್ರಶ್ನಿಸಿದರು.

ಪಟ್ಟಣದ ಸುದ್ದಿಮನೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಗಾರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ರೈತರು ಬಡವರಿಗೆ ಹಲವು ಯೋಜನೆಯನ್ನು ಜಾರಿತಂದಿದ್ದರು. ಆಶ್ರಯ ಮನೆ, ನೀರಾವರಿಗೆ ಉಚಿತ ವಿದ್ಯುತ್‌ ಮತ್ತಿತರ ಹಲವು ಜನಪ್ರಿಯ ಯೋಜನೆ ಜಾರಿಗೊಳಿಸಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಅವಧಿಯಲ್ಲಿ ನೀಡಲಾದ ಉಚಿತ ಅಕ್ಕಿಯನ್ನು ಬಿಜೆಪಿ ಸರ್ಕಾರ 2 ಕೆಜಿ ಕಡಿತ,ಉಚಿತ ವಿದ್ಯುತ್‌ ಯೋಜನೆ ಸ್ಥಗಿತಗೊಳಿಸಿ ಬಡವರಿಗೆ ದ್ರೋಹ ಎಸಗಿದೆ ಎಂದು ಆರೋಪಿಸಿದರು.

Tap to resize

Latest Videos

ಆಡಳಿತಗಾರನಿಗೆ ತಲೆ ತಣ್ಣಗಿರಬೇಕು, ಹೃದಯ ವಿಶಾಲವಾಗಿರಬೇಕು: ಸಿಎಂ ಬೊಮ್ಮಾಯಿ

ಚನ್ನಗಿರಿ ಕ್ಷೇತ್ರ ಶಾಸಕರ ಮನೆಯಲ್ಲಿ ಕೋಟಿ ಕೋಟಿ ಅಕ್ರಮ ಹಣ ದೊರೆತಿದೆ. ಇದರಿಂದಾಗಿ ಬಿಜೆಪಿ ಭ್ರಷ್ಟಾಚಾರಿ ಜನತಾ ಪಾರ್ಟಿ ಎಂಬುದು ಸಾಬೀತಾಗಿದೆ. ಚುನಾವಣೆಯಲ್ಲಿ ಹಣ ಹಂಚಿ ಗೆಲವು ಸಾಧಿಸುವ ಬಿಜೆಪಿ ಶಕ್ತಿ ಇದರಿಂದಾಗಿ ಅನಾವರಣಗೊಂಡಿದೆ. ಭ್ರಷ್ಟಾಚಾರ ಶೇ.40ರಿಂದ ಶೇ.50ಕ್ಕೆ ಹೆಚ್ಚಾಗಿದೆ. ಕಾನೂನು ವಿರೋಧಿ ಕೃತ್ಯದಲ್ಲಿ ಪಾಲ್ಗೊಂಡವರ ಮನೆ ಕೆಡವಿ ಆಸ್ತಿ ಜಪ್ತಿ ಮಾಡುವ ಯೋಗಿ ಮಾದರಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಸಿಎಂ ಬಸ​ವ​ರಾಜ ಬೊಮ್ಮಾಯಿಗೆ ತಾಕತ್ತು, ಧಮ್ಮು ಇಲ್ಲವಾಗಿದೆ ಎಂದರು.

ಏತನೀರಾವರಿ ಮೂಲಕ ರೈತರಿಗೆ ಶಾಶ್ವತ ನೀರು ಕಲ್ಪಿಸುವ ಯೋಜನೆ ಶಿಕಾರಿಪುರ, ಸೊರಬ ತಾಲೂಕಿನಲ್ಲಿ ಆರಂಭವಾಗಿ ಹಲವು ಕಾಲವಾಗಿದೆ. ಇಂದಿಗೂ ಕೆರೆ, ಕಟ್ಟೆಗಳು ಭರ್ತಿಯಾಗಿಲ್ಲ. ಇದರಿಂದಾಗಿ ಅಂತರ್ಜಲ ಹೆಚ್ಚಳವಾಗಿಲ್ಲ. ಸೂಕ್ತ ವಿದ್ಯುತ್‌ ಸೌಲ​ಭ್ಯ​ವಿ​ಲ್ಲದೇ, ಯೋಜನೆ ನಿಷ್ೊ್ರಯೋಜಕವಾಗುತ್ತಿದೆ. ನೀರಿಲ್ಲದೇ ರೈತರ 2ನೇ ಬೆಳೆ ಒಣಗುತ್ತಿದೆ. ಇಡೀ ಜಿಲ್ಲೆಗೆ ಅತಿ ಹೆಚ್ಚು ಅನುದಾನ ಪಡೆದ ತಾಲೂಕಿಗೆ ಕೂಡಲೇ ನೀರು ಹಾಯಿಸಿ ಬೇಸಿಗೆ ಬೆಳೆಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದರು.

ತಾಲೂಕು ಕಾಂಗ್ರೆಸ್‌ ವೀಕ್ಷಕ ರಮೇಶ್‌ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಗಳಿಸಿದಲ್ಲಿ ಗೃಹಲಕ್ಷ್ಮೇ ಯೋಜನೆಯಡಿ ಪ್ರತಿ ಕುಟುಂಬದ ಮುಖ್ಯ ಮಹಿಳೆ ಖಾತೆಗೆ ನೇರವಾಗಿ 2000 ವನ್ನು ನೀಡಲಾಗುವುದು. ಅನ್ನಭಾಗ್ಯ ಅಕ್ಕಿಯನ್ನು 10 ಕೆಜಿಗೆ ಹೆಚ್ಚಿಸಲಾಗುವುದು. ಪ್ರತಿ ಕುಟುಂಬಕ್ಕೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಗ್ಯಾರೆಂಟಿ ಕಾರ್ಡ್‌ ಅನ್ನು ಮನೆಮನೆಗೆ ತಲುಪಿಸಲು ಬಿಡುಗಡೆಗೊಳಿಸಲಾಯಿತು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೇಶ್‌ ಹುಲ್ಮಾರ್‌, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್‌, ಮಾಜಿ ಶಾಸಕ ಮಹಾಲಿಂಗಪ್ಪ, ಪ್ರಸನ್ನಕುಮಾರ್‌ ಪುರಸಭಾ ಸದಸ್ಯ ನಾಗರಾಜಗೌಡ, ಉಳ್ಳಿ ದರ್ಶನ್‌, ರೋಷನ್‌, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ವೀರೇಶ್‌ ಮುಖಂಡ ಉಮೇಶ್‌ ಮಾರವಳ್ಳಿ, ಚಂದ್ರಕಾಂತ ಪಾಟೀಲ್‌, ನಿರ್ಮಲಾ ಪಾಟೀಲ್‌, ಪುಷ್ಪಾ, ಭಂಡಾರಿ ಮಾಲತೇಶ್‌, ಅಸ್ಲಂ ಬಾಷಾ, ನಾಗರಾಜ್‌ ಮತ್ತಿತರರು ಉಪಸ್ಥಿತರಿದ್ದರು.

ಬಿ​ಜೆ​ಪಿ ಗೆಲು​ವಿನ ಅಶ್ವಮೇಧ ಕುದುರೆ ನಿಲ್ಲಿಸಿ ತೋರಿ​ಸಲಿ: ಕಟೀಲ್‌ ಸವಾಲು

ಕಾಂಗ್ರೆ​ಸ್‌ನ ‘ಭಾರತ್‌ ಜೋಡೋ’ ಯಾತ್ರೆ ಸಂದರ್ಭ ಅಕಾ​ಲಿಕ ನಿಧನರಾದ ರಮೇಶ್‌ ಕುಟುಂಬಕ್ಕೆ .5 ಲಕ್ಷ ಪರಿಹಾರ ಘೋಷಿಸಿ, ಅನಂತರ ಡಿ.ಕೆ. ಶಿವಕುಮಾರ್‌ ಅವ​ರು ಮನೆಗೆ ತೆರಳಿ .10 ಲಕ್ಷ ವಿತರಿಸಿದರು. ಹಿಂದೂ ಹರ್ಷನ ಹತ್ಯೆಯಾದಾಗ ಅವ​ರ ಕುಟುಂಬಕ್ಕೆ ಬಿಜೆಪಿ ಪರಿಹಾರ ನೀಡಿದಂತೆ ಮಲ್ಲಿಕಾರ್ಜುನಗೌಡ ಕುಟುಂಬಕ್ಕೆ ಏಕೆ ನೀಡ​ಲಿಲ್ಲ? ಕೋಟಿ ಕೋಟಿ ಹಣ ಲೂಟಿ ಮಾಡಿ 230 ಕ್ಷೇತ್ರದಲ್ಲಿ ಕೂಡಿಟ್ಟಿದ್ದು ಈ ಬಾರಿ ಹಣ ಉಪಯೋಗಕ್ಕೆ ಬರುವುದಿಲ್ಲ
- ಮಧು ಬಂಗಾ​ರಪ್ಪ, ಕಾಂಗ್ರೆಸ್‌ ಮುಖಂಡ

click me!