ಕಾಂಗ್ರೆಸ್‌ನವರು ದೀನ, ದಲಿತರು, ದುರ್ಬಲ ವರ್ಗದವರಿಗೆ ಅನ್ಯಾಯ ಮಾಡಿದ್ದು, ಜಾತಿ, ಧರ್ಮದ ವಿಷಯದಲ್ಲಿ ಕಾಂಗ್ರೆಸ್‌ನವರು ದ್ವೇಷದ ಹಾಗೂ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶಾಸಕ ರಮೇಶ್ ಜಾರಕಿಹೊಳಿ ಆರೋಪಿಸಿದರು.
ಸಂಕೇಶ್ವರ (ಮಾ.05): ಕಾಂಗ್ರೆಸ್‌ನವರು ದೀನ, ದಲಿತರು, ದುರ್ಬಲ ವರ್ಗದವರಿಗೆ ಅನ್ಯಾಯ ಮಾಡಿದ್ದು, ಜಾತಿ, ಧರ್ಮದ ವಿಷಯದಲ್ಲಿ ಕಾಂಗ್ರೆಸ್‌ನವರು ದ್ವೇಷದ ಹಾಗೂ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶಾಸಕ ರಮೇಶ್ ಜಾರಕಿಹೊಳಿ ಆರೋಪಿಸಿದರು. ಪಟ್ಟಣದ ಗಾಂಧಿ ಚೌಕ್‌ನಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷವು ಸರ್ವ ಜಾತಿ, ಧರ್ಮದವರನ್ನು ಗೌರವಿಸುವ ಪಕ್ಷವಾಗಿದ್ದು, ಮತದಾರರು ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಮತ್ತೆ ಬಿಜೆಪಿ ಪಕ್ಷವು ಅಧಿಕಾರರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೂರ ದೃಷ್ಟಿಯಿಂದ ಭಾರತದ ಅಭಿವೃದ್ಧಿ ಹೊಂದುತ್ತಿದ್ದು, ಅಲ್ಲದೇ ಇತರ ರಾಷ್ಟ್ರಗಳು ಭಾರತವನ್ನು ತಿರುಗಿ ನೋಡುವಂತೆ ಪ್ರಧಾನಿ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು. ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದ ಪ್ರಗತಿ ಹೊಂದುತ್ತಿದೆ. ರೈತರು, ಬಡವರು, ಯುವಜನರ ಶ್ರೇಯೋಭಿವೃದ್ಧಿಗೆ ಹಲವು ಕಾರ್ಯಕ್ರಮಗಳಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈ ಬಲ ಪಡಿಸಲು ಬಿಜೆಪಿಯ ಅಭ್ಯರ್ಥಿಗೆ ಮತ ನೀಡಬೇಕು ಎಂದು ಕೋರಿದರು.
ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಧೂಳಿಪಟ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
ಹಿರಾ ಶುಗರ್ಸ್ ಅಧ್ಯಕ್ಷ ನಿಖಿಲ್ ಕತ್ತಿ ಮಾತನಾಡಿ, ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಹಕಾರದಿಂದ ಹುಕ್ಕೇರಿ ಮತಕ್ಷೇತ್ರದಲ್ಲಿ ದಿ.ಸಚಿವ ಉಮೇಶ ಕತ್ತಿ ಅವರ ಕನಸಿನ ನೀರಾವರಿ ಯೋಜನೆಗಳಿಂದ ಕೃಷಿ ಕಾರ್ಯಗಳಿಗೆ ಪೂರಕವಾಗಿ ವರದಾನವಾಗಿದೆ ಹಾಗೂ ಹುಕ್ಕೇರಿ ಮತಕ್ಷೇತ್ರದಲ್ಲಿ ಸುಸಜ್ಜಿತ ರಸ್ತೆಗಳು ನಿರ್ಮಾಣವಾಗಿದ್ದು, ಅಭಿವೃದ್ಧಿಗೆ ಕಾರಣರಾದ ಸಚಿವ ಸಿ.ಸಿ.ಪಾಟೀಲರಿಗೆ ಹುಕ್ಕೇರಿ ಮತಕ್ಷೇತ್ರದ ಜನತೆ ಪರವಾಗಿ ಧನ್ಯವಾದಗಳು. ದಿ.ಸಚಿವ ಉಮೇಶ ಕತ್ತಿ ಅವರು ಹುಕ್ಕೇರಿ ಮತಕ್ಷೇದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳುನ್ನು ಮಾಡಿ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ರಥಯಾತ್ರೆಯ ಸಂಚಾಲಕರು ಅರುಣ ಶಹಾಪೂರ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜೇಶ ನೇರ್ಲಿ, ಮಾಜಿ ಸಚಿವರಾದ ಶಶಿಕಾಂತ ನಾಯಿಕ, ಪ್ರಥ್ವಿ ಕತ್ತಿ, ಪವನ ಕತ್ತಿ, ಯಾತ್ರೆಯ ಸಹ ಸಂಚಾಲರು ಮಲ್ಲಿಕಾರ್ಜುನ ಬಳಿಕಾಯಿ, ಪುರಸಭೆಯ ಉಪಾಧ್ಯಕ್ಷ ಅಜೀತ ಕರಜಗಿ, ಉಜ್ವಲಾ ಬಡಾವನಾಚಿ, ಅಪ್ಪಾಸಾಹೇಬ ಶಿರಕೋಳಿ, ರಾಜೇಂದ್ರ ಪಾಟೀಲ, ಸುನೀಲ ಪರ್ವತರಾವ , ಗುರು ಕುಲಕರ್ಣಿ, ಶಿವಾನಂದ ಮುಡಶಿ, ಶ್ರೀಕಾಂತ ಹತನೂರೆ, ಸತ್ಯಪ್ಪಾ ನಾಯಿಕ, ರಾಚಯ್ಯಾ ಹಿರೇಮಠ ಭಾಗವಹಿಸಿದ್ದರು. ಯಾತ್ರೆಯು ಕನತನೂರ ಗೇಟ್‌ದಿಂದ ಸಂಕೇಶ್ವರ ಪಟ್ಟಣದ ಚನ್ನಮ್ಮ ವೃತ್ತ, ಪೊಲೀಸ್ ಠಾಣೆ ಮಾರ್ಗವಾಗಿ ಬೈಕ್ ರಾರಯಲಿ ಮೂಲಕ ಸಾಗಿ ಗಾಂಧಿ ಚೌಕ್‌ದಲ್ಲಿ ಸಮಾರಂಭ ಜರುಗಿತು.
ದೇಶಾದ್ಯಂತ ಕಾಂಗ್ರೆಸ್ ಮುಕ್ತ ಭಾರತ ಮಾಡಿ: ಕಾಂಗ್ರೆಸ್‌ನವರ ಹಣ ಮತ್ತು ತೋಳಬಲದಿಂದ ಸಮಾಜದಲ್ಲಿ ಜಾತಿಯ ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದು, ಅದು ಸಾಧ್ಯವಿಲ್ಲದ ಮಾತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಡುಗಿದರು. ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಲ್ಲಿ ಹಮ್ಮಿಕೊಂಡ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕೀಯ ಡೊಂಬರಾಟದಲ್ಲಿ ಇಂದು ಕರ್ನಾಟಕವಷ್ಟೆಅಲ್ಲ ಈಡೀ ದೇಶದಾದ್ಯಂತ ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕಾಗಿದೆ ಎಂದರು.
ಅಭಿವೃದ್ಧಿ ವಿರೋಧಿ ಸಿದ್ದರಾಮಯ್ಯ: ಸಂಸದ ಪ್ರತಾಪ್ ಸಿಂಹ ಕಿಡಿ
ಡಾ.ಬಾಬಾಸಾಹೇಬ್ ಅಂಬೇಡ್ಕರ್ ವಿರೋಧಿ ಕಾಂಗ್ರೆಸ್ ಪಕ್ಷವು ಇಂದು ಕಣ್ಣೀರು ಹಾಕುತ್ತ ಡೊಂಬರಾಟ ಮಾಡುತ್ತಿದೆ. ದಿ.ಆನಂದ ಮಾಮನಿಯವರನ್ನು ಹಾಗೂ ಅವರು ಮಾಡಿದಂತ ಅಭಿವೃದ್ಧಿ ಪರವಾದ ಕಾರ್ಯಗಳನ್ನು ನಾವು ನೆನೆಯಬೇಕಿದೆ. ಆ ನಿಟ್ಟಿನಲ್ಲಿ ಸವದತ್ತಿ ಯಲ್ಲಮ್ಮಾ ಮತಕ್ಷೇತ್ರವನ್ನು ನಾವು ಈಗಾಗಲೇ ಗೆದ್ದಂತಾಗಿದ್ದು, ಅಕ್ಕ-ಪಕ್ಕದ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಪಕ್ಷವನ್ನು ಗೆಲ್ಲಿಸುವಂತ ಕಾರ್ಯವನ್ನು ಮತಕ್ಷೇತ್ರದ ಜನತೆ ಮಾಡಬೇಕು ಎಂದು ಕೋರಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸಿದ್ದರಾಮಯ್ಯ ಚಾಮುಂಡಿ ದೇವಿಯ ಶಾಪದಿಂದ ಬನಶಂಕರಿಗೆ ಬಂದಿದ್ದು, ಈ ದೇವಿಯ ಶಾಪವು ಸಿದ್ದರಾಮಯ್ಯಗೆ ತಟ್ಟಿದೆ. ಬನಶಂಕರಿ ಬಿಟ್ಟು ಕೋಲಾರಕ್ಕೆ ಹೊರಟಿರುವ ಸಿದ್ದರಾಮಯ್ಯ ಅಲ್ಲಿಯು ಡುಮಕಿ ಹೊಡೆಯಲಿದ್ದಾರೆ ಎಂದು ಲೇವಡಿ ಮಾಡಿದರು.