
ಚಿಕ್ಕೋಡಿ (ಸೆ.11): ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರವೋ ಅಥವಾ ತಾಲಿಬಾನ್ ಸರ್ಕಾರವೋ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಎಂದು ಶ್ರೀ ರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಮದ್ದೂರಿನಲ್ಲಿ ನಡೆದ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮುಸ್ಲೀಂ ತುಷ್ಟೀಕರಣ ಮಾಡಿದೆ. ಹಿಂದೂ ವಿರೋಧಿ ಸರ್ಕಾರ ಅಂತ ಮತ್ತೋಮ್ಮೆ ಸಾಬೀತಾಗಿದೆ. ಗಲಾಟೆಯಲ್ಲಿ 500ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರಮೇಲೆ ಕೇಸ್ ದಾಖಲಾಗಿದೆ. ಕಲ್ಲು ಎಸೆದವರನ್ನ ಒದ್ದು ಒಳಗಡೆ ಹಾಕುವ ಕೆಲಸ ಮಾಡಲಿಲ್ಲ ಎಂದರು.
ಮಹಿಳೆಯರ ಮೇಲೆ ಲಾಠಿಚಾರ್ಜ್ ನಡೆದಿದೆ. ಮಹಿಳೆಯರ ಮೇಲೆ ಮಹಿಳಾ ಪೊಲೀಸ್ ಲಾಠಿ ಚಾರ್ಜ್ ಮಾಡೋಕ್ಕೆ ಮಾತ್ರ ಅವಕಾಶವಿದೆ. ಮದ್ದೂರಿನಲ್ಲಿ ಕಾನೂನು ಬಾಹಿರವಾಗಿ ಚಟುವಟಿಕೆ ನಡೆದಿದೆ. ನಾನು ಸಹ ವಕೀಲರ ತಂಡದೊಂದಿಗೆ ಮದ್ದೂರಿಗೆ ಬರ್ತೀನಿ. ನಿಮ್ಮ ಮೇಲೆ ಇರುವ ಕೇಸುಗಳನ್ನು ನಾವು ನೋಡಿಕೊಳ್ಳುತ್ತೇವೆ. ಹಿಂದೂಗಳ ಜೊತೆ ಶ್ರೀ ರಾಮ ಸೇನೆ ಇರುತ್ತದೆ ಎಂದು ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದರು.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರದಲ್ಲಿ ಸರ್ಕಾರದ ಪಾತ್ರವಿದೆ. ಸಿದ್ದರಾಮಯ್ಯ ನಾಸ್ತಿಕವಾದಿ, ಹಿಂದೂ ವಿರೋಧಿ. ಇದರ ಹಿಂದೆ ಅವರ ಕೈವಾಡ ಇದೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಆರೋಪಿಸಿದರು. ಧರ್ಮಸ್ಥಳದಲ್ಲಿ ಸೌಜನ್ಯ ಹ*ತ್ಯೆ ಪ್ರಕರಣದಲ್ಲಿ ಯಾರು ಇದ್ದಾರೋ ಅವರಿಗೆ ಗಲ್ಲು ಶಿಕ್ಷೆಯಾಗಬೇಕು. ಆದರೆ, ಅದರ ಹೆಸರಲ್ಲಿ ಬಂದೂಕು ಇಟ್ಟು ಹಿಂದೂಗಳನ್ನು, ಹಿಂದೂ ದೇವಸ್ಥಾನಗಳನ್ನು, ಧರ್ಮಸ್ಥಳವನ್ನು ಟಾರ್ಗೆಟ್ ಮಾಡುತ್ತಿರುವುದು ಸರಿಯಲ್ಲ ಎಂದರು.
ಸೆಂಥಿಲ್ ಎಂಬ ಎಂಪಿ ಬಗ್ಗೆ ಸಂಶಯವಿದೆ. ಅವನೊಬ್ಬ ಕ್ರಿಶ್ಚಿಯನ್. ಇವರ ಹೈಕಮಾಂಡ್ ಸೋನಿಯಾ ಗಾಂಧಿ, ಪ್ರಿಯಾಂಕಾ, ರಾಹುಲ್ ಗಾಂಧಿ ಕೂಡ ಕ್ರಿಶ್ಚಿಯನ್. ಇದು ಮುಗಿದ ಮೇಲೆ ಇನ್ನೊಂದು ತೆಗೆದುಕೊಳ್ಳುತ್ತಾರೆ. ಹಿಂದೂ ಶಾಂತ ಇದ್ದಾನೆ ಎಂದು ದುರ್ಲಾಭ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸಮೀರ್ ಎಂಬಾತ ಮುಸ್ಲಿಮರ ಅತ್ಯಾ*ಚಾರ, ದೌರ್ಜನ್ಯ ಬಗ್ಗೆ ತೋರಿಸಿದ್ದಾನಾ? ಮಸೀದಿ, ಮದರಸಾಗಳಲ್ಲಿ ದೌರ್ಜನ್ಯ ನಡೆದಿದೆ. ಈ ಬಗ್ಗೆ ಏನಾದರೂ ತೋರಿಸಿದ್ದಾನಾ? ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಕ್ರಿಶ್ಚಿಯನ್ನರು, ಕಮ್ಯುನಿಸ್ಟರು, ಮುಸ್ಲಿಮರು ಇದ್ದಾರೆ. ಇವರೊಂದಿಗೆ ಕಾಂಗ್ರೆಸ್‌ನ ಕೆಲವರು ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಿಮಗೆ ಧರ್ಮಸ್ಥಳವೇ ಏಕೆ ಬೇಕು? ಧರ್ಮಸ್ಥಳ ಹಿಂದೂಗಳ ಪವಿತ್ರ ಸ್ಥಳ, ಹೀಗಾಗಿ ಇದನ್ನು ಮಾಡಲಾಗುತ್ತಿದೆ. ತನಿಖೆ ಆದ ಮೇಲೆ ಕಥೆ ಕಟ್ಟಿದವರು, ಅವರಿಗೆ ಬೆಂಬಲ ನೀಡಿದವರಿಗೆ ಗುಂಡು ಹೊಡೆಯಿರಿ. ಇಲ್ಲದೇ ಹೋದರೆ ಇದೇ ಮುಂದುವರಿಯಲಿದೆ. ಇವತ್ತು ಧರ್ಮಸ್ಥಳ, ನಾಳೆ ತಿರುಪತಿ, ನಾಡಿದ್ದು ಮತ್ತೊಂದು. ನಮ್ಮ ಶ್ರದ್ಧೆ ಭಂಗ ಮಾಡುವ ಷಡ್ಯಂತ್ರ ನಡೆದಿದೆ. ಇದನ್ನು ನಾವು ವಿರೋಧಿಸುತ್ತೇವೆ. ರಾಜ್ಯದ ಜನ ಧರ್ಮಸ್ಥಳ ಪರ ನಿಂತಿದ್ದು ಸಂತಸದ ಸಂಗತಿ. ಅದಕ್ಕೆ ನಾನು ಸ್ವಾಗತಿಸುತ್ತೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.