ಲೋಕಸಭಾ ಚುನಾವಣೆ: ರಾಜ್ಯದ 28 ಕ್ಷೇತ್ರಗಳಿಗೂ ಬಿಜೆಪಿ ಉಸ್ತುವಾರಿಗಳ ನೇಮಕ

By Web DeskFirst Published Nov 21, 2018, 7:31 PM IST
Highlights

ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ 28 ಲೋಕಸಭಾ ಕ್ಷೇತ್ರಗಳಲ್ಲಿ ಶತಾಯ ಗತಾಯ ಗೆಲುವು ಸಾಧಿಸಲೇ ಬೇಕು ಎಂದು ಪಣತೊಟ್ಟಿದೆ. ಆ ನಿಟ್ಟಿನಲ್ಲಿ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಬ್ಬರು ಪ್ರಭಾರಿ, ಒಬ್ಬರು ಸಂಚಾಲಕರ ನೇಮಿಸಿದೆ. ಹಾಗಾದ್ರೆ ಯಾರು ಯಾವ ಕ್ಷೇತ್ರಕ್ಕೆ ಎನ್ನುವ ಪಟ್ಟಿ ಇಲ್ಲಿದೆ.

ಬೆಂಗಳೂರು,[ನ.21]: 2019ರ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ಈಗಿನಿಂದಲೇ ಭರ್ಜರಿ ತಯಾರಿ ಆರಂಭಿಸಿದೆ.

ಇದಕ್ಕೆ ಪೂರಕವೆಂಬಂತೆ ಇಂದು [ಬುಧವಾರ] ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು 28 ಲೋಕಸಭಾ ಕ್ಷೇತ್ರಗಳಿಗೆ ಪ್ರಭಾರಿಗಳು ಹಾಗೂ ಸಂಚಾಲಕರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಬ್ಬರು ಪ್ರಭಾರಿ, ಒಬ್ಬರು ಸಂಚಾಲಕರ ನೇಮಿಸಿದ ಬಿಜೆಪಿ, ಒಟ್ಟು 28 ಲೋಕಸಭಾ ಕ್ಷೇತ್ರಗಳಿಗೆ 28 ಪ್ರಭಾರಿಗಳು, 28 ಸಂಚಾಲಕರನ್ನ ನೇಮಿಸಲಾಗಿದೆ.

ಸಂಭಾವ್ಯ ಬಿಜೆಪಿ ಅಭ್ಯರ್ಥಿಗಳನ್ನು ಹಾಗೂ ಹಾಲಿ ಲೋಕಸಭಾ ಸದಸ್ಯರನ್ನು ಹೊರಗಿಟ್ಟು ಪ್ರಭಾರಿಗಳನ್ನ ನೇಮಕ ಮಾಡಲಾಗಿದೆ. ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಪ್ರಭಾರಿ ಹಾಗೂ ಸಂಚಾಲಕರನ್ನ ನೇಮಿಸಿದ್ದು, ಈ ಪಟ್ಟಿಯನ್ನು ರಾಜ್ಯ ಬಿಜೆಪಿ ಹೈಕಮಾಂಡ್ ಗೆ ಕಳುಹಿಸಿದೆ. 

ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ 28 ಲೋಕಸಭಾ ಕ್ಷೇತ್ರಗಳಲ್ಲಿ ಶತಾಯ ಗತಾಯ ಗೆಲುವು ಸಾಧಿಸಲೇ ಬೇಕು ಎಂದು ಪಣತೊಟ್ಟಿದೆ. ಆ ನಿಟ್ಟಿನಲ್ಲಿ ಈಗಿನಿಂದಲೇ ಅಗತ್ಯ ಸಿದ್ದತೆಗಳನ್ನು ಕೂಡ ಮಾಡಿಕೊಳ್ಳುತ್ತಿದೆ.

ಯಾರು ಯಾವ ಕ್ಷೇತ್ರಕ್ಕೆ ಎನ್ನುವ ಪಟ್ಟಿ ಇಲ್ಲಿದೆ
1..ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ - ಕೆ ಎಸ್. ಈಶ್ವರಪ್ಪ (ಪ್ರಭಾರಿ),ಎನ್ ವಿ ಫಣೀಶ್ (ಸಂಚಾಲಕ)
2. ಚಾಮರಾಜನಗರ- ಎಲ್ ನಾಗೇಂದ್ರ (ಪ್ರಭಾರಿ), ಬಾಲಸುಬ್ರಹ್ಮಣ್ಯ( ಸಂಚಾಲಕ)
3.ಮಂಡ್ಯ - ಇ.ಅಶ್ವಥ್ ನಾರಾಯಣ (ಪ್ರಭಾರಿ),ಮಧು ಚಂದನ್( ಸಂಚಾಲಕ)
4.ಹಾಸನ - ಸಿ.ಟಿ ರವಿ( ಪ್ರಭಾರಿ), ರೇಣು ಕುಮಾರ್ ( ಸಂಚಾಲಕ)
5.ದಕ್ಷಿಣ ಕನ್ನಡ - ಸುನೀಲ್ ಕುಮಾರ್ ( ಪ್ರಭಾರಿ), ಗೋಪಾಲಕೃಷ್ಣ ಹೇರಳೇ( ಸಂಚಾಲಕ)
6.ಉಡುಪಿ- ಚಿಕ್ಕಮಗಳೂರು- ಅರಗ ಜ್ನಾನೇಂದ್ರ( ಪ್ರಭಾವಿ), ಕೋಟಾ ಶ್ರೀನಿವಾಸ್ ಪೂಜಾರಿ( ಸಂಚಾಲಕ)
7.ಶಿವಮೊಗ್ಗ - ವಿಶ್ವೇಶ್ವರ ಹೆಗಡೆ ಕಾಗೇರಿ( ಪ್ರಭಾರಿ), ಹರತಾಳ ಹಾಲಪ್ಪ( ಸಂಚಾಲಕ)
8.ಉತ್ತರ ಕನ್ನಡ- ಲಿಂಗರಾಜ್ ಪಾಟೀಲ್( ಪ್ರಭಾರಿ), ವಿನೋದ್ ಪ್ರಭು( ಸಂಚಾಲಕ)
9.ಹಾವೇರಿ -  ಬಸವರಾಜ ಬೊಮ್ಮಾಯಿ, ( ಪ್ರಭಾರಿ), ಸಿದ್ದರಾಜ ಕಲಕೋಟಿ( ಸಂಚಾಲಕ)
10.ಧಾರವಾಡ - ಗೋವಿಂದ ಕಾರಜೋಳ( ಪ್ರಭಾರಿ) ಮಾ. ನಾಗರಾಜ್( ಸಂಚಾಲಕ)
11.ಬೆಳಗಾವಿ  - ಮಹಾಂತೇಶ್ ಕವಟಗಿಮಠ( ಪ್ರಭಾರಿ), ಈರಣ್ಣ ಕರಡಿ( ಸಂಚಾಲಕ)
12.ಚಿಕ್ಕೋಡಿ- ಸಂಜಯ್ ಪಾಟೀಲ್( ಪ್ರಭಾರಿ), ಶಶಿಕಾಂತ್ ಪಾಟೀಲ್( ಸಂಚಾಲಕ)
13.ಬಾಗಲಕೋಟೆ- ಸಿ.ಸಿ ಪಾಟೀಲ್( ಪ್ರಭಾರಿ), ವೀರಣ್ಣ ಚರಂತಿಮಠ( ಸಂಚಾಲಕ)
14.ವಿಜಯಪುರ- ಲಕ್ಷ್ಮಣ ಸವಧಿ( ಪ್ರಭಾರಿ) ಅರುಣ್ ಶಾಹಾಪುರ( ಸಂಚಾಲಕ)
15.ಬೀದರ್,- ಅಮರನಾಥ್ ಪಾಟೀಲ್( ಪ್ರಭಾರಿ), ಸುಭಾಷ್ ಕಲ್ಲೂರ್( ಸಂಚಾಲಕ)
16. ಕಲಬುರಗಿ- ಎನ್ ರವಿ ಕುಮಾರ್, ( ಪ್ರಭಾರಿ), ಮಾಲೀಕಯ್ಯ ಗುತ್ತೆದಾರ( ಸಂಚಾಲಕ)
17. ರಾಯಚೂರು- ಹಾಲಪ್ಪ ಆಚಾರ( ಪ್ರಭಾರಿ) ರಮಾನಂದ ಯಾದವ್(ಸಂಚಾಲಕ)
18. ಕೊಪ್ಪಳ - ಶ್ರೀರಾಮುಲು(ಪ್ರಭಾರಿ) ಅಣ್ಣಪ್ಪ ಪದಕಿ (ಸಂಚಾಲಕ]
19.ಬಳ್ಳಾರಿ - ಜಗದೀಶ್ ಶೆಟ್ಟರ್ ( ಪ್ರಭಾರಿ) ಮೃತ್ಯುಂಜಯ ಜಿನಗಾ( ಸಂಚಾಲಕ
20.ದಾವಣಗೆರೆ - ಆಯನೂರು ಮಂಜುನಾಥ್( ಪ್ರಭಾರಿ) ಜೀವನಮೂರ್ತಿ( ಸಂಚಾಲಕ)
21.ಚಿತ್ರದುರ್ಗ - ವೈ.ರ ನಾರಾಯಣ ಸ್ವಾಮಿ( ಪ್ರಭಾರಿ) ಟಿ.ಜಿ ನರೇಂದ್ರನಾಥ( ಸಂಚಾಲಕ)
22.ತುಮಕೂರು- ಅರವಿಂದ ಲಿಂಬಾವಳಿ ( ಪ್ರಭಾರಿ) ಬೆಟ್ಟಸ್ವಾಮಿ( ಸಂಚಾಲಕ)
23.ಬೆಂ.ಗ್ರಾಮಾಂತರ- ಅಶ್ವಥ ನಾರಾಯಣ( ಪ್ರಭಾರಿ), ತುಳಸಿ ಮುನಿರಾಜಗೌಡ( ಸಂಚಾಲಕ)
24.ಚಿಕ್ಕಬಳ್ಳಾಪುರ - ವಿ.ಸೋಮಣ್ಣ, ( ಪ್ರಭಾರಿ) ಎಸ್.ಆರ್ ವಿಶ್ವನಾಥ್( ಸಂಚಾಲಕ)
25. ಕೋಲಾರ- ಕಟ್ಟಾ ಸುಭ್ರಮಣ್ಯನಾಯ್ಡು( ಪ್ರಭಾರಿ] ವೈ ಸಂಪಂಗಿ( ಸಂಚಾಲಕ)
26 .ಬೆಂಗಳೂರು ದಕ್ಷಿಣ- ಸುಬ್ಬನರಸಿಂಹ, ( ಪ್ರಭಾರಿ) ಆರ್.ಅಶೋಕ್( ಸಂಚಾಲಕ)
27. ಬೆಂಗಳೂರು ಕೇಂದ್ರ- ಡಾ.ಅಶ್ವಥ್ ನಾರಾಯಣ( ಪ್ರಭಾರಿ) ಸಚ್ಚಿದಾನಂದ ಮೂರ್ತಿ( ಸಂಚಾಲಕ
28. ಬೆಂಗಳೂರು ಉತ್ತರ- ಬಿ.ಹೆಚ್ ಕೃಷ್ಣಾ ರೆಡ್ಡಿ (ಪ್ರಭಾರಿ)

click me!