
ಹೈದ್ರಾಬಾದ್ : ಎಐಎಂಐಎಂ ಅಧ್ಯಕ್ಷ ಅಸಾದುದ್ದಿನ್ ಓವೈಸಿ ಇದೀಗ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ರ್ಯಾಲಿಯನ್ನು ರದ್ದು ಮಾಡಿ ಟಿಆರ್ ಎಸ್ ಗೆ ಬೆಂಬಲ ನೀಡಬೇಕು ಎಂದು 25 ಲಕ್ಷ ರು. ಹಣದ ಆಮಿಷ ಒಡ್ಡಲಾಗಿತ್ತು ಎಂದು ಆರೋಪ ಮಾಡಿದ್ದಾರೆ.
ನಿರ್ಮಲ್ ನಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು ಮಹೇಶ್ವರ್ ರೆಡ್ಡಿ ಎನ್ನುವವರು ತಮಗೆ ಕರೆ ಮಾಡಿ 25 ಲಕ್ಷ ನೀಡುವುದಾಗಿ ಹೇಳಿದ್ದರು. ಆದರೆ ತಾವು ಇದನ್ನು ನಿರಾಕರಿಸಿದ್ದು, ಮುಂದೊಂದು ದಿನ ಈ ವಿಚಾರವನ್ನು ನಿರಾಕರಿಸಬಹುದು ಎನ್ನುವ ಕಾರಣದಿಂದ ಕರೆಯನ್ನು ರೆಕಾರ್ಡ್ ಮಾಡಿ ಇರಿಸಿದ್ದಾಗಿಯೂ ಹೇಳಿದ್ದಾರೆ.
ಇನ್ನು ಓವೈಸಿ ಬಗ್ಗೆ ಮಾತನಾಡಿದ ಅಭಿಷೇಕ್ ಸಿಂಗ್ವಿ ತಾವು ಯಾವುದೇ ಕಾರಣಕ್ಕೂ ಕೂಡ ಓವೈಸಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ತಾವು ಎಲ್ಲಯೂ ಕೂಡ ಓವೈಸಿಯನ್ನು ಗಂಭಿರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ರೆಡ್ಡಿ ಓವೈಸಿ ಈ ಬಗ್ಗೆ ಸಾಬೀತುಪಡಿಸಲಿ. ತಾವು ಯಾವುದೇ ರೀತಿ ಹಣದ ಆಮಿಷ ಒಡ್ಡಿದಲ್ಲಿ ಅವರು ಸಾಕ್ಷಿ ಸಮೇತ ಬಹಿರಂಗ ಮಾಡಲಿ. ನಾವೇಕೆ ಇನ್ನೊಂದು ಪಕ್ಷದ ರ್ಯಾಲಿಯನ್ನು ತಡೆಯುವ ಯತ್ನವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.