ಸುಧಾಕರ್‌ಗೆ ದಲಿತರ ಬಗ್ಗೆ ಕಾಳಜಿ ಇಲ್ಲ; ನಾನು ದಲಿತರಿಗಾಗಿ ಆರಿಸಿ ಬಂದಿರೋನು: ಶಾಸಕ ಪ್ರದೀಪ್ ಈಶ್ವರ್

Published : Mar 13, 2024, 05:05 AM IST
ಸುಧಾಕರ್‌ಗೆ ದಲಿತರ ಬಗ್ಗೆ ಕಾಳಜಿ ಇಲ್ಲ; ನಾನು ದಲಿತರಿಗಾಗಿ ಆರಿಸಿ ಬಂದಿರೋನು: ಶಾಸಕ ಪ್ರದೀಪ್ ಈಶ್ವರ್

ಸಾರಾಂಶ

ಸುಧಾಕರ್ ಯಾವತ್ತೂ ಒಬ್ಬ ದಲಿತನ ಜೊತೆ ಕೂತು ಮಾತಾಡಿಲ್ಲ. ಅವರೇನಿದ್ದರೂ ಶ್ರೀಮಂತರ ನಾಯಕ. ಆದರೆ ತಾನು ದಲಿತರಿಗಾಗಿ ಆರಿಸಿ ಬಂದಿರೋನು ಎಂದು ಹೇಳಿದರು.ಕೈ ಟಿಕೆಟ್‌ಗೆ ಸುಧಾಕರ್‌ ಯತ್ನ ಎಂದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರ (ಮಾ.13): ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಮತ್ತು ಇಲ್ಲಿನ ಮಾಜಿ ಶಾಸಕ ಡಾ ಕೆ. ಸುಧಾಕರ್ ನಡುವೆ ವಿಧಾನಸಭಾ ಚುನಾವಣೆ ಸಮಯದಲ್ಲಿ ಶುರುವಾದ ಮಾತಿನ ಸಮರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿದಿದೆ. ಮಂಗಳವಾರ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳೂ ಸೇರಿದಂತೆ ವಿವಿಧ ಯೋಜನೆಗಳು,ಕಾರ್ಯಕ್ರಮಗಳ ಕುರಿತು ವಸ್ತುಪ್ರದರ್ಶನ ಮಳಿಗೆಗೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದರು.
ಪರೇಸಂದ್ರದಲ್ಲಿ ಸ್ಮಶಾನಕ್ಕೆ ಜಾಗ

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲು ಸುಧಾಕರ್ ದಲಿತ ಮತ್ತು ಹಿಂದುಳಿದವರ ಬಗ್ಗೆ ಕಾಳಜಿ ಇರುವವರ ಹಾಗೆ ಮಾತಾನಾಡುತ್ತಿದ್ದಾರೆ. ಆದರೆ, ಪರೇಸಂದ್ರ ಹೆಸರಿನ ಗ್ರಾಮದಲ್ಲಿ ದಲಿತರು ಮರಣ ಹೊಂದಿದರೆ ದೇಹವನ್ನು ಹೂಳಲು ಜಾಗವಿರಲಿಲ್ಲ. ತಾನು ವಿಷಯವನ್ನು ಸಂಪುಟದ ಮುಂದಿಟ್ಟು ಒಂದೂವರೆ ಎಕರೆ ಜಮೀನನ್ನು ಸ್ಮಶಾನಕ್ಕೆ ಮಂಜೂರು ಮಾಡಿಸಿ, ಇವತ್ತು ಅದನ್ನು ಅವರಿಗೆ ಹಸ್ತಾಂತರಿಸುವ ಕೆಲಸ ಮಾಡಿದ್ದೇನೆ ಎಂದರು.

'ಚಾಮರಾಜನಗರಕ್ಕೆ ಬಂದಷ್ಟು ನನ್ನ ಖುರ್ಚಿ ಭದ್ರವಾಗುತ್ತೆ' : ಅಧಿಕಾರ ಹೋಗುತ್ತೆ ಎಂಬ ಮೂಢನಂಬಿಕೆಗೆ ಸೆಡ್ಡು ಹೊಡೆದ ಸಿಎಂ!

ಸುಧಾಕರ್ ಯಾವತ್ತೂ ಒಬ್ಬ ದಲಿತನ ಜೊತೆ ಕೂತು ಮಾತಾಡಿಲ್ಲ. ಅವರೇನಿದ್ದರೂ ಶ್ರೀಮಂತರ ನಾಯಕ. ಆದರೆ ತಾನು ದಲಿತರಿಗಾಗಿ ಆರಿಸಿ ಬಂದಿರೋನು ಎಂದು ಹೇಳಿದರು.ಕೈ ಟಿಕೆಟ್‌ಗೆ ಸುಧಾಕರ್‌ ಯತ್ನ

ಡಾ.ಕೆ.ಸುಧಾಕರ್ ಕಾಂಗ್ರೆಸ್​ ಟಿಕೆಟ್​ಗಾಗಿ ಓಡಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಎಂಪಿ ಟಿಕೆಟ್ ಮಿಸ್ ಆದ್ರೆ, ಕಾಂಗ್ರೆಸ್​ನಿಂದ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆಗೆ ಪ್ರಯತ್ನ ಮಾಡ್ತಿದ್ದಾರೆ. ಬೆಂಗಳೂರು ಉತ್ತರದ ಕಾಂಗ್ರೆಸ್​ ಟಿಕೆಟ್​ಗಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ದೇಶದ ನೀತಿ ನಿಯತ್ತು ಕುಲಗೆಡಿಸಿದ್ದೇ ಕಾಂಗ್ರೆಸ್, ನಾನು ಇರುವ ತನಕ ಕಾಂಗ್ರೆಸ್‌ಗೆನೆಮ್ಮದಿ ಕೊಡಲ್ಲ ಎಂದ ಅನಂತ ಹೆಗ್ಡೆ!

ಹೆಗಡೆ ವಿರುದ್ಧ ವಾಗ್ದಾಳಿ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಆನೆ ಹೋಗುತ್ತಿದ್ದರೆ ನಾಯಿಗಳು ಬೋಗಳುತ್ತವೆ ಎಂದು ಹೇಳಿದ್ದಾರೆ. ಇದರಲ್ಲಿ ನಮ್ಮ ಸಿದ್ದರಾಮಯ್ಯನವರು ಆನೆ, ಆ ಇನ್ನೊಂದು ಪ್ರಾಣಿ ಅನಂತ್ ಕುಮಾರ್ ಹೆಗಡೆ ಎಂದು ಟೀಕಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ