ತಾವು ಇರುವ ತನಕ ಖಂಡಿತ ಕಾಂಗ್ರೆಸ್‌ಗೆ ನೆಮ್ಮದಿ ಕೊಡುವುದಿಲ್ಲ. ದೇಶವನ್ನು ಲೂಟಿ ಮಾಡಿರುವ, ದೇಶವನ್ನು ಹಾಳು ಮಾಡಿರುವ ಕಾಂಗ್ರೆಸ್‌ನವರಿಗೆ ನೆಮ್ಮದಿಯಿಂದ ಇರಲು ಬಿಡಬಾರದು ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದರು.
ಕಾರವಾರ (ಮಾ.13) : ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಹಿಂದೂ ವಿರೋಧಿ, ಅಭಿವೃದ್ಧಿ ವಿರೋಧಿ, ದೇಶ ವಿರೋಧಿ, ದಲಿತ ವಿರೋಧಿ, ಮಹಿಳಾ ವಿರೋಧಿ ಆಗಿದ್ದು, ನಮ್ಮ ದೇಶದಲ್ಲಿ ಇರಬಾರದು. ನಮಗೆ ವಿರೋಧ ಪಕ್ಷ ಬೇಕು. ಆದರೆ ಒಳ್ಳೆಯ ವಿರೋಧ ಪಕ್ಷ ಬರಬೇಕು. ಕಾಂಗ್ರೆಸ್ ಹೊರತಾಗಿ ಮತ್ತೊಂದು ರಚನಾತ್ಮಕವಾಗಿರುವ ವಿರೋಧ ಪಕ್ಷ ಗೆದ್ದು ಬರಲಿ. ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ವಿರೋಧ ಪಕ್ಷ ಇರಬೇಕು. ಆದರೆ ಈ ರೀತಿಯ ಮನೆಮುರುಕ ಕಾಂಗ್ರೆಸ್ ಇರಬಾರದು. ದೇಶದಲ್ಲಿ ಕಾಂಗ್ರೆಸ್ ಮಾಡಿರುವ ಅವಾಂತರಗಳನ್ನು ನೋಡಿದರೆ ಯಾರಿಗೂ ನಿದ್ದೆ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾರ್ಯಕರ್ತರೇ ನನ್ನ ದೊಡ್ಡ ಶಕ್ತಿ: ಯದುವೀರ್ ಒಡೆಯರ್ ಬಗ್ಗೆ ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?
ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ನಡುವೆ ಕೆಲವರು ಹೋಲಿಕೆ ಮಾಡುತ್ತಿದ್ದಾರೆ. ಆದರೆ ಆನೆಗೂ ಕುರಿಗೂ ಇರುವಂತಹ ಅಜಗಜಾಂತರ ವ್ಯತ್ಯಾಸ ಬುದ್ಧಿವಂತರಿಗೆ ಗೊತ್ತಾಗಿದೆ. ಆನೆ ಮತ್ತು ಕುರಿಯನ್ನು ಯಾರೂ ಕೂಡಾ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು.
ಸಂವಿಧಾನ ಬದಲಿಸಿದ್ರೆ ರಕ್ತಪಾತವಾಗುತ್ತೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ!
ಉತ್ತರ ಕನ್ನಡದಲ್ಲಿ ಕಳೆದ ಬಾರಿ ಸಿಕ್ಕ ಲೀಡ್ ದಕ್ಷಿಣ ಭಾರತದಲ್ಲೇ ದಾಖಲೆಯಾಗಿತ್ತು. ಹಳೆಯ ದಾಖಲೆಯನ್ನು ಅಳಿಸಿ ಹೊಸ ದಾಖಲೆಯನ್ನು ಬರೆಯಬೇಕು. ಬಿಜೆಪಿ ಮತ್ತೆ ಅಜೇಯ ಶಕ್ತಿಯಾಗಿ ಬೆಳೆದು ಬರಬೇಕು. ಅಭ್ಯರ್ಥಿ ಯಾರೇ ಇರಲಿ, ಬಿಜೆಪಿ ಗೆಲುವು ಸಾಧಿಸಬೇಕು ಎಂದರು.