ನಿತೀಶ್ ಕುಮಾರ್ ತೆಕ್ಕೆಗೆ ಮತ್ತೆ ಬಿಹಾರ, ಭರ್ಜರಿ ಬಹುಮತ: ಸಮೀಕ್ಷೆ!

By Kannadaprabha NewsFirst Published Oct 21, 2020, 8:29 AM IST
Highlights

ಎನ್‌ಡಿಎ ಕೊರಳಿಗೆ ಮತ್ತೆ ಬಿಹಾರ: ಸಮೀಕ್ಷೆ| ನಿತೀಶ್‌ ನೇತೃತ್ವದ ಕೂಟಕ್ಕೆ ಭರ್ಜರಿ ಬಹುಮತ| ಮಹಾಗಠಬಂಧನಕ್ಕೆ ಮತ್ತೆ ಸೋಲು| ಲೋಕನೀತಿ- ಸಿಎಸ್‌ಡಿಎಸ್‌ ಚುನಾವಣಾಪೂರ್ವ ಸಮೀಕ್ಷೆ

ನವದೆಹಲಿ(ಅ.21): ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮತ್ತೊಮ್ಮೆ ಜಯಭೇರಿ ಬಾರಿಸಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆಯೊಂದು ಭವಿಷ್ಯ ನುಡಿದಿದೆ.

ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿದ್ದು, ಬಹುಮತಕ್ಕೆ 122 ಸ್ಥಾನಗಳು ಬೇಕು. ಅ.28ರಿಂದ ನ.7ರವರೆಗೆ ಮೂರು ಹಂತದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ 133ರಿಂದ 143 ಸ್ಥಾನಗಳನ್ನು ಪಡೆಯುವ ಮೂಲಕ ಬಹುಮತ ಗಳಿಸಿಕೊಳ್ಳಲಿದೆ ಎಂದು ಲೋಕನೀತಿ- ಸಿಎಸ್‌ಡಿಎಸ್‌ ಸಂಸ್ಥೆಗಳ ಸಮೀಕ್ಷೆ ತಿಳಿಸಿದೆ.

ಆರ್‌ಜೆಡಿ- ಕಾಂಗ್ರೆಸ್‌- ಎಡಪಕ್ಷಗಳನ್ನು ಒಳಗೊಂಡ ತೇಜಸ್ವಿ ಯಾದವ್‌ ನೇತೃತ್ವದ ಮಹಾಗಠಬಂಧನ 100ರ ಗಡಿ ದಾಟುವುದೂ ಕಷ್ಟವಿದ್ದು, 88ರಿಂದ 98 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ. ನಿತೀಶ್‌ ಕುಮಾರ್‌ ವಿರುದ್ಧ ಬಂಡೆದ್ದು, ಎನ್‌ಡಿಎ ಕೂಟದಿಂದ ಹೊರನಡೆದು ಪ್ರತ್ಯೇಕವಾಗಿ ಸ್ಪರ್ಧಿಸಿರುವ ಚಿರಾಗ್‌ ಪಾಸ್ವಾನ್‌ ನೇತೃತ್ವದ ಲೋಕಜನಶಕ್ತಿ ಪಕ್ಷ ತೀವ್ರ ಮುಖಭಂಗ ಅನುಭವಿಸಲಿದೆ. ಕೇವಲ 2ರಿಂದ 6 ಸ್ಥಾನಗಳನ್ನು ಮಾತ್ರವೇ ಗಳಿಸಲಿದೆ. ಇತರರು 6ರಿಂದ 10 ಸ್ಥಾನ ಪಡೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಅ.10ರಿಂದ 17ರವರೆಗೆ ಈ ಸಮೀಕ್ಷೆಯನ್ನು ನಡೆಸಲಾಗಿದೆ.

ಬಿಹಾರ

ಒಟ್ಟು ಸ್ಥಾನ 243

ಬಹುಮತ 122

ಎನ್‌ಡಿಎ 133-143

ಗಠಬಂಧನ 88-98

ಎಲ್‌ಜೆಪಿ 2-6

ಇತರರರು 6-10

click me!