27ರಲ್ಲೂ ಕಮಲ, ಮೋದಿಗೆ ನನ್ನದು 28ನೇ ಬಲ: ಕೆ.ಎಸ್‌.ಈಶ್ವರಪ್ಪ

By Kannadaprabha News  |  First Published Apr 26, 2024, 8:27 AM IST

ಜನ ನನ್ನ ಎಳೆದುಕೊಂಡು ಬಂದು ಪ್ರಚಾರ ಮಾಡುತ್ತಿದ್ದಾರೆ. ನಿಮಗೇ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಜನರ ಬೆಂಬಲ ಕಂಡು ತುಂಬಾ ಸಂತೋಷವಾಗಿದೆ ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. 
 


ಶಿವಮೊಗ್ಗ (ಏ.26): ಐದು ಬಾರಿ ನಾನು ಶಾಸಕನಾಗಿದ್ದಾಗಲೂ ಇಷ್ಟು ಬೆಂಬಲ ನನಗೆ ಸಿಕ್ಕಿರಲಿಲ್ಲ. ಜನ ನನ್ನ ಎಳೆದುಕೊಂಡು ಬಂದು ಪ್ರಚಾರ ಮಾಡುತ್ತಿದ್ದಾರೆ. ನಿಮಗೇ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಜನರ ಬೆಂಬಲ ಕಂಡು ತುಂಬಾ ಸಂತೋಷವಾಗಿದೆ ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ನಗರದಲ್ಲಿ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಒಂದಷ್ಟು ಜನ ನಮ್ಮ ಜೊತೆ ಸೇರಿದ್ದಾರೆ ಮತ್ತೆ ಕೆಲವರು ಪಕ್ಷ ಬಿಡಲು ಆಗುವುದಿಲ್ಲ ಪಕ್ಷದಲ್ಲಿ ಇದ್ದುಕೊಂಡು ನಿಮಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಾರೆ.

ಜೆಡಿಎಸ್‌ನಿಂದ ನಿರೀಕ್ಷೆ ಮೀರಿದ ಬೆಂಬಲ ಸಿಕ್ಕಿದೆ. ಬಿಜೆಪಿ ಪಕ್ಷದಿಂದ ಶೇ.60 ಇದ್ದ ಬೆಂಬಲ ಈಗ ಶೇ.79 ಆಗಿದೆ. ಎಲ್ಲಾ ಪಕ್ಷದವರು ನನಗೆ ಬೆಂಬಲ ನೀಡುತ್ತಿದ್ದಾರೆ ಎಂದರು. ಶೋರೂಮ್‌ ಗಳಿಗೆ ಭೇಟಿ ನೀಡಿದ್ದಾಗ ಎಲ್ಲರೂ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದಾರೆ. ಶೋರೂಮ್ ಮಾಲೀಕರು ನನ್ನ ಪರ ಪ್ರಚಾರ ಮಾಡಲು ಸಿಬ್ಬಂದಿ ಗಳಿಗೆ ಒಂದು ದಿನ ರಜೆ ಕೊಡುವುದಾಗಿ ಹೇಳಿ ಬೆಂಬಲ ಸೂಚಿಸಿದ್ದಾರೆ. ಮುಸಲ್ಮಾನರು ನನಗೆ ಬೆಂಬಲ ಕೊಡುತ್ತಿದ್ದಾರೆ. ನೀವು ರಾಷ್ಟ್ರದ್ರೋಹಿಗಳ ಬಗ್ಗೆ ಮಾತ್ರ ಮುಸಲ್ಮಾನ ಗೂಂಡಾಗಳು ಎಂದು ಹೇಳುತ್ತೀರಿ, ರಾಷ್ಟ್ರಪ್ರೇಮಿ ಮುಸಲ್ಮಾನರ ಬಗ್ಗೆ ನಿಮಗೆ ಗೌರವ ಇದೆ ಎಂದು ಹೇಳಿದ್ದಾರೆ. 

Tap to resize

Latest Videos

undefined

ಕರ್ನಾಟಕ Election 2024 Live: ದಕ್ಷಿಣದ 14 ಜಿಲ್ಲೆಗಳಿಗೆ ಇಂದು ಮತದಾನ

ಸಾಗರದಲ್ಲಿ ಕ್ರಿಶ್ಚಿಯನ್ ಧರ್ಮ ಪಾದ್ರಿಗಳು ನನಗೆ ಆಶೀರ್ವಾದ ಮಾಡುವುದಾಗಿ ಹೇಳಿ ಬರಲು ತಿಳಿಸಿದ್ದಾರೆ. ಏ.27ರಂದು ಪಾದ್ರಿಗಳ ಆಶೀರ್ವಾದ ಪಡೆಯಲು ಹೋಗುತ್ತಿದ್ದೇನೆ. ನನಗೆ ಎಲ್ಲಾ ಧರ್ಮದವರ ಬೆಂಬಲ ಇದೆ ಎಂದು ತಿಳಿಸಿದರು. ರಾಜ್ಯದಲ್ಲಿ ಬಿಜೆಪಿ 27 ಕ್ಷೇತ್ರದಲ್ಲಿ ಗೆಲ್ಲಲಿದೆ. 28ನೇ ಕ್ಷೇತ್ರವಾಗಿ ಶಿವಮೊಗ್ಗದಲ್ಲಿ ನಾನು ಗೆಲ್ಲುವ ಮೂಲಕ ಮೋದಿಯವರನ್ನು ಪ್ರಧಾನಿ ಮಾಡಲಿದ್ದೇವೆ. ಭಾರತೀಯ ಜನತಾ ಪಕ್ಷದಲ್ಲಿರುವ ನೋವು ಜನರ ಮುಂದೆ ಇಡುತ್ತಿದ್ದೇನೆ. ಅಪ್ಪ-ಮಕ್ಕಳ ಹಿಡಿತದಿಂದ ಪಕ್ಷವನ್ನು ಶುದ್ಧೀಕರಣ ಮಾಡುವ ಸಿದ್ಧಾಂತ ಇಟ್ಟುಕೊಂಡು ಚುನಾವಣೆ ಗೆ ಸ್ಪರ್ಧೆ ಮಾಡುತ್ತಿದ್ದೇನೆ. ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡುತ್ತಿಲ್ಲ ಎಂದರು.

ಅಕ್ಷೋಭ್ಯ ತೀರ್ಥ ಮಠಕ್ಕೆ ಭೇಟಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಇಂದು ಶಿವಮೊಗ್ಗ ನಗರದ ವಿವಿಧ ಭಾಗಗಳಲ್ಲಿ ಮತಯಾಚಿಸಿದರು. ಬೆಂಕಿನಗರ, ಅಶೋಕ ನಗರ, ಗಾಡಿಕೊಪ್ಪ, ಗಾಂಧಿ ಬಜಾರ್, ಕುಂಬಾರ ಗುಂಡಿ, ಮಲ್ಲಿಕಾರ್ಜುನ ನಗರಗಳಲ್ಲಿ ಕಾರ್ಯಕರ್ತರ ಜೊತೆ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು ಗಾಂಧಿ ಬಜಾರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ಬಿಸಿಲನ್ನು ಲೆಕ್ಕಿಸದೆ ಈಶ್ವರಪ್ಪರವರಿಗೆ ಬೆಂಬಲ ಸೂಚಿಸಿದರು.

ಕರ್ನಾಟಕದಲ್ಲಿನ ಮುಸ್ಲಿಂ ಮೀಸಲು ಇಸ್ಲಾಮೀಕರಣದ ಭಾಗ: ಉತ್ತರ ಪ್ರದೇಶ ಸಿಎಂ ಯೋಗಿ ಕಿಡಿ

ಗಾಂಧಿ ಬಜಾರ್‌ನಲ್ಲಿ ಮತಯಾಚನೆ ವೇಳೆ ಮಾವಿನ ಹಣ್ಣು ಮಾರುವ ಮಹಿಳೆ ಈಶ್ವರಪ್ಪರವರಿಗೆ ಮಾವಿನ ಹಣ್ಣು ನೀಡಿ ಶುಭ ಕೋರಿದರು. ಇದೇ ಸಂದರ್ಭ ಅಭಿಮಾನಿಯೊಬ್ಬರು ಈಶ್ವರಪ್ಪರವರಿಗೆ ಕಬ್ಬಿನ ಜಲ್ಲೆ ನೀಡಿ ಶುಭ ಕೋರಿದರು. ಶಿವಮೊಗ್ಗ ನಗರದ ಬಿ.ಬಿ.ರಸ್ತೆಯಲ್ಲಿರುವ ಶ್ರೀ ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠಕ್ಕೆ ಭೇಟಿ ನೀಡಿ ಶ್ರೀ ರಘು ವಿಜಯತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.

click me!