ತುಮಕೂರು ಟಿಕೆಟ್‌ ಕೊಡಿಸುವಂತೆ ಹೆಚ್‌ಡಿಕೆ ಭೇಟಿ ಮಾಡಿ ಮಾತುಕತೆ ನಡೆಸಿದ ಸೋಮಣ್ಣ

By Gowthami K  |  First Published Jan 31, 2024, 1:40 PM IST

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ವಿ ಸೋಮಣ್ಣ ಭೇಟಿ ಮಾಡಿದ್ದಾರೆ. ಬಿಡದಿಯ ತೋಟದ ಮನೆಯಲ್ಲಿ ಹೆಚ್‌ಡಿಕೆ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ಸೋಮಣ್ಣ ಮಾತುಕತೆ ನಡೆಸಿದ್ದಾರೆ.


ಬೆಂಗಳೂರು (ಜ.31): ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ವಿ ಸೋಮಣ್ಣ ಭೇಟಿ ಮಾಡಿದ್ದಾರೆ. ಬಿಡದಿಯ ತೋಟದ ಮನೆಯಲ್ಲಿ ಹೆಚ್‌ಡಿಕೆ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ಸೋಮಣ್ಣ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಜೆಡಿಎಸ್‌ ಮೈತ್ರಿ ಬಳಿಕ ಎರಡನೇ  ಬಾರಿಗೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. 

ಬಿಡದಿ ತೋಟದ ನಿವಾಸದಲ್ಲಿ ಸೋಮಣ್ಣ ಮತ್ತು ಕುಮಾರಸ್ವಾಮಿ ಭೇಟಿಯಾಗಿರುವ ನಾಯಕರು, ತುಮಕೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸಿದ್ಧ ಎಂದು ಸೋಮಣ್ಣ ಹೇಳಿಕೆ ನೀಡಿದ ಬೆನ್ನಲ್ಲೇ ಕುಮಾರಸ್ವಾಮಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Tap to resize

Latest Videos

ಕನ್ನಡ ನಾಮಫಲಕ ಸುಗ್ರಿವಾಜ್ಞೆಗೆ ರಾಜ್ಯಪಾಲರು ಒಪ್ಪದ್ದಕ್ಕೆ ಕಾರಣವೇನು? ವಿಧೇಯಕ ಪಾಸ್‌ಗೆ ಮುಂದಾದ ಸರ್ಕಾರ

ಭೇಟಿ ವೇಳೆ ತುಮಕೂರು ಟಿಕೆಟ್ ಬಿಟ್ಟುಕೊಡುವಂತೆ ಕುಮಾರಸ್ವಾಮಿಗೆ ಸೋಮಣ್ಣ ಮತ್ತೆ ಮನವಿ ಮಾಡಿದ್ದಾರೆ. ನನಗೆ ಸಹಕಾರ ನೀಡಬೇಕೆಂದು ಕುಮಾರಸ್ವಾಮಿ ಬಳಿ ಸೋಮಣ್ಣ ಮನವಿ‌ ಮಾಡಿದ್ದಾರೆ. ಮಾತ್ರವಲ್ಲ ಹೈಕಮಾಂಡ್ ಬಳಿ ತನ್ನ ಪರ ಅಭಿಪ್ರಾಯ ವ್ಯಕ್ತಪಡಿಸುವಂತೆ ಸೋಮಣ್ಣ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸೋಮಣ್ಣ ಇತ್ತೀಚೆಗೆ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಈ ವೇಳೆ ರಾಜ್ಯಸಭೆ ಸ್ಥಾನ ಕೇಳಿರೋ‌ದಾಗಿ ತಿಳಿಸಿದ್ದರು. ಈಗ ತುಮಕೂರಿನಿಂದ ಅಭ್ಯರ್ಥಿಯಾಗಲು ಕಸರತ್ತು ನಡೆಸುತ್ತಿದ್ದಾರೆ.

ಹೆಸರಿನಲ್ಲಿ ರಾಮ ಇದ್ದರೆ ಸಾಲದು, ಆತನ ಸಂಸ್ಕೃತಿ, ಗುಣವೂ ಮುಖ್ಯ: ಎಚ್.ಡಿ.ಕುಮಾರಸ್ವಾಮಿ

ಕಾಂಗ್ರೆಸ್ ‌ನಿಂದ ಮುದ್ದಹನುಮೇಗೌಡಗೆ ಟಿಕೆಟ್ ಸಾಧ್ಯತೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಟಿಕೆಟ್ ಗೆ ಸೋಮಣ್ಣ ಟವಲ್ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ಮೈತ್ರಿ ಪಕ್ಷದ ಕುಮಾರಸ್ವಾಮಿ ಬಳಿ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

click me!