ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಇಳಿಯೋದು ಗ್ಯಾರಂಟಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೊಟ್ಟ ಕಾರಣವೇನು? 

By Ravi JanekalFirst Published Mar 23, 2024, 5:39 PM IST
Highlights

ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿಯೋದು ಗ್ಯಾರಂಟಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.  ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ 28 ಸ್ಥಾನ ಗೆಲ್ಲುವ ಗುರಿಯಿದೆ. ಪಕ್ಷದಲ್ಲಿ ಆಂತರಿಕ ಕಚ್ಚಾಟಗಳಿಂದ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದರು.

ಹುಬ್ಬಳ್ಳಿ (ಮಾ.23): ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿಯೋದು ಗ್ಯಾರಂಟಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ 28 ಸ್ಥಾನ ಗೆಲ್ಲುವ ಗುರಿಯಿದೆ. ಕಳೆದ ಬಾರಿ ರಾಜಸ್ಥಾನ, ಮದ್ಯಪ್ರದೇಶ, ಗುಜರಾತ್ ನಲ್ಲಿ ಔಟ್ ಆಪ್ ಔಟ್ ಸೀಟ್ ಗೆದ್ದಿದ್ದೇವೆ. ಅದೇ ರೀತಿ ಕರ್ನಾಟಕದಲ್ಲಿ ಬಿಜೆಪಿ 28 ಗೆಲ್ಲುತ್ತೆ. ಹೀಗಾಗಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುತ್ತಾರೆ. 

Lok sabha election 2024: ಊಟಕ್ಕೆ ಕರೆದು ತಾಟು ನೀಡದೆ ಅವಮಾನ? ಪರಸ್ಪರ ಕಿತ್ತಾಡಿಕೊಂಡ ಬಿಜೆಪಿ ಕಾರ್ಯಕರ್ತರು!

ಸಿದ್ದರಾಮಯ್ಯರನ್ನು ಇಳಿಸೋದು ಅವರ ಆಂತರಿಕ ವಿಚಾರ. ಪಕ್ಷ ನಿರ್ಣಯ ಮಾಡುತ್ತೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಅದಕ್ಕೆ ಉತ್ತರ ಕೊಡಬೇಕು. ಅಧಿಕಾರಕ್ಕೆ ಬಂದಾಗಿನಿಂದ ಸಿಎಂ ಸ್ಥಾನ, ಅನುದಾನ ವಿಚಾರವಾಗಿ ಆಂತರಿಕ ಕಚ್ಚಾಟ ಇದೆ. ಸಿದ್ದರಾಮಯ್ಯಗೆ ಇದರಿಂದ ಸಮಸ್ಯೆ ಇದೆ. ಬೇರೆ ಯಾರಿಂದಲೂ ಅವರಿಗೆ ಸಮಸ್ಯೆ ಇಲ್ಲ ಎಂದರು. ಇದೇ ವೇಳೆ ಈಶ್ವರಪ್ಪ ಅಸಮಾಧಾನಗೊಂಡ ವಿಚಾರ ಪ್ರಸ್ತಾಪಿಸಿ ಅವರು ಸರಿ ಹೋಗ್ತಾರೆ ನಾನು ಈಶ್ವರಪ್ಪ ಜೊತೆ ಮಾತಾಡಿದ್ದೇನೆ. ಸಾವಕಾಶವಾಗಿ ಈಶ್ವರಪ್ಪ ಸಮಾಧಾನ ಆಗ್ತಾರೆ ಎಂದರು.

ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಉತ್ಸಾಹ ನೋಡಿದ್ರೆ ನೂರಕ್ಕೆ ನೂರು ಗೆಲುವು ನಮ್ಮದೇ: ಡಾ ಮಂಜುನಾಥ್

ಬಹಳ ಸಮಯ ಇರೋ ಕಾರಣಕ್ಕೆ ಕೆಲವು ಕಡೆ ಗೊಂದಲ ಇದೆ. ಲೋಕಸಭಾ ಚುನಾವಣೆ ಬೇರೆ, ವಿಧಾನಸಭಾ ಚುನಾವಣೆಯೇ ಬೇರೆ. ಲೋಕಸಭಾ ಚುನಾವಣೆಯಲ್ಲಿ ಜನರು ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಿ ಮತ ಹಾಕ್ತಾರೆ. ಇನ್ನು ಜಗದೀಶ್ ಶೆಟ್ಟರ್ ಟಿಕೆಟ್ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಶೆಟ್ಟರ್ ನಮ್ಮ ಪಕ್ಷದ ಹಿರಿಯ ನಾಯಕರು. ಬೆಳಗಾವಿ ಟಿಕೆಟ್ ವಿಚಾರದಲ್ಲಿ ಅವರೇ ಮುಂಚೂಣಿಯಲ್ಲಿದ್ದಾರೆ. ಅವರ ಒಬ್ಬರದೇ ಟಿಕೆಟ್ ಘೋಷಣೆ ಆಗದೆ ಹೋದರೆ ಕಥೆ ಏನು ಅಂತಾ ಕೇಳಬೇಕು. ಆದರೆ ಹಾಗೆ ಆಗೊಲ್ಲ. ಅವರಿಗೆ ಟಿಕೆಟ್ ಕೊಡಬೇಕು ಅನ್ನೋ ಅಪೇಕ್ಷೆ ಇದೆ ಎಂದರು.

click me!