Lok sabha election 2024: ಊಟಕ್ಕೆ ಕರೆದು ತಾಟು ನೀಡದೆ ಅವಮಾನ? ಪರಸ್ಪರ ಕಿತ್ತಾಡಿಕೊಂಡ ಬಿಜೆಪಿ ಕಾರ್ಯಕರ್ತರು!

By Ravi Janekal  |  First Published Mar 23, 2024, 5:07 PM IST

ಧಾರವಾಡ ಲೋಕಸಭಾ ಕ್ಷೇತ್ರ ಕುಂದಗೋಳ ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆಯಲ್ಲಿ ಊಟ ಸಿಗಲಿಲ್ಲವೆಂದು ಬಿಜೆಪಿ ಕಾರ್ಯಕರ್ತರೇ ಪರಸ್ಪರ ಕಿತ್ತಾಡಿಕೊಂಡ ಘಟನೆ ನಡೆದಿದೆ. 


ಹುಬ್ಬಳ್ಳಿ (ಮಾ.23): ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಬಿಜೆಪಿ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಭರ್ಜರಿಯಾಗಿ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ತಮ್ಮ ಕ್ಷೇತ್ರಗಳ ಮತದಾರರು, ಮುಖಂಡರನ್ನು ಹಿಡಿದಿಟ್ಟುಕೊಳ್ಳು ಮೇಲಿಂದ ಮೇಲೆ ಸಭೆ, ಕಾರ್ಯಕ್ರಮಗಳು ನಡೆಸುತ್ತಿರುವ ಚುನಾವಣಾ ಅಭ್ಯರ್ಥಿಗಳು. ಒಂದು ಕಡೆ ಕಡು ಬೇಸಗೆ ಬಿಸಲು ಇನ್ನೊಂದು ಚುನಾವಣೆ ಕಾವು ದಿನೇದಿನೆ ಏರಿಕೆಯಾಗುತ್ತಿದೆ. ಈ ನಡುವೆ ಸಾವಿರಾರು ಕಾರ್ಯಕರ್ತರು, ಮತದಾರರನ್ನು ಒಂದೆಡೆ ಸೇರಿಸಿ ತಮ್ಮ ಅಭ್ಯರ್ಥಿಗಳ ಪರವಾಗಿ ಸಭೆ, ಸಮಾವೇಶಗಳನ್ನ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ. ಆದರೆ ಸಮಾವೇಶಗಳಿಗೆ ಬರುವ ಸಾವಿರಾರು, ಒಮ್ಮೊಮ್ಮೆ ಲಕ್ಷಾಂತರ ಜನರಿಗೆ ನೀರು, ಊಟದ ವ್ಯವಸ್ಥೆ ಒದಗಿಸುವುದೇ ದೊಡ್ಡ ಸವಾಲಾಗಿದೆ. ಸಮಾವೇಶಗಳಲ್ಲಿ ಊಟ ಸಿಗದೇ ಕಿತ್ತಾಡಿಕೊಂಡ ಘಟನೆಗಳು ನಡೆದಿವೆ. ಇದೀಗ ಧಾರವಾಡ ಲೋಕಸಭಾ ಕ್ಷೇತ್ರ ಕುಂದಗೋಳ ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆಯಲ್ಲಿ ಅಂತಹದ್ದೇ ಘಟನೆ ನಡೆದಿದ್ದು, ಊಟ ಸಿಗದ್ದಕ್ಕೆ ಬಿಜೆಪಿ ಕಾರ್ಯಕರ್ತರೇ ಪರಸ್ಪರ ಕಿತ್ತಾಡಿಕೊಂಡ ಘಟನೆ ನಡೆದಿದೆ.

ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಉತ್ಸಾಹ ನೋಡಿದ್ರೆ ನೂರಕ್ಕೆ ನೂರು ಗೆಲುವು ನಮ್ಮದೇ: ಡಾ ಮಂಜುನಾಥ್

Tap to resize

Latest Videos

ಇಂದು ಧಾರವಾಡ ಲೋಕಸಭಾ ಕ್ಷೇತ್ರವಾದ ಹುಬ್ಬಳ್ಳಿ ನಗರದ ಬಿಜೆಪಿ ಕಚೇರಿಯಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆ ಕರೆಯಲಾಗಿತ್ತು. ಸಭೆ ಬಳಿಕ ಊಟಕ್ಕೆ ತೆರಳಿದ್ದ ಬಿಜೆಪಿ ಕಾರ್ಯಕರ್ತರು. ಊಟಕ್ಕೆ ಕರೆದು ತಾಟು ನೀಡದೇ ಸತಾಯಿಸಿದ್ದಾರೆ. ಮೊದಲೇ ಹಸಿವುಗೊಂಡಿದ್ದ ಕಾರ್ಯಕರ್ತರು ಇದರಿಂದ ರೊಚ್ಚಿಗೆದ್ದು ಸರಿಯಾಗಿ ಊಟದ ವ್ಯವಸ್ಥೆ ಮಾಡದಿದ್ರೆ ಸಭೆ ಯಾಕೆ ನಡೆಸಬೇಕಿತ್ತು. ನಮಗೆ ಊಟ ನೀಡದೆ ಅವಮಾನ ಮಾಡಿದ್ದಾರೆ ಎಂದು ಕಿತ್ತಾಡಿಕೊಂಡಿರುವ ಕಾರ್ಯಕರ್ತರು. ಪರಸ್ಪರ ನೂಕಾಟ ತಳ್ಳಾಟ ನಡೆದಿದೆ. ಕೊನೆಗೆ ಎಲ್ಲರಿಗೂ ತಾಟು ನೀಡಿ ಸಮಾಧಾನ ಪಡಿಸಿದ್ದಾರೆ.

click me!