ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಉತ್ಸಾಹ ನೋಡಿದ್ರೆ ನೂರಕ್ಕೆ ನೂರು ಗೆಲುವು ನಮ್ಮದೇ: ಡಾ ಮಂಜುನಾಥ್

By Ravi Janekal  |  First Published Mar 23, 2024, 4:20 PM IST

ನಾನು ದೀರ್ಘವಾಗಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. 75 ಲಕ್ಷ ಜನಕ್ಕೆ ಚಿಕಿತ್ಸೆ ನೀಡಿದ್ದೇನೆ. ಹೀಗಾಗಿ ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ನನ್ನ ಹೆಸರು ಚಿರಪರಿಚಿತವಾಗಿದೆ. ಇದಕ್ಕೆ ನಾನು ವೃತ್ತಿಯಲ್ಲಿ, ವೈಯಕ್ತಿಕ ಜೀವನದಲ್ಲಿ ನಡೆದುಬಂದ ರೀತಿಯೇ ಕಾರಣವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಮಂಜುನಾಥ ತಿಳಿಸಿದರು.


ರಾಮನಗರ (ಮಾ.23): ಇಂದು ಎರಡೂ ಪಕ್ಷದ ಅಭ್ಯರ್ಥಿಗಳೂ ಭಾಗಿಯಾಗಿದ್ದೀರಿ. ನಿಮ್ಮೆಲ್ಲರ ಉತ್ಸಾಹ ನೋಡಿದ್ರೆ ನಮ್ಮ ಗೆಲುವು ನೂರಕ್ಕೆ ನೂರು ಖಚಿತ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಮಂಜುನಾಥ ಹೇಳಿದರು.

ಇಂದು ಬಿಜೆಪಿ-ಜೆಡಿಎಸ್ ಮೈತ್ರಿ ಸಮ್ಮಿಲನ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೂಟಗಲ್ ಹೋಬಳಿ ಜೆಡಿಎಸ್ ಭದ್ರಕೋಟೆ ಆಗಿದೆ. ಅಷ್ಟೇ ಅಲ್ಲ, ಇದೀಗ  ಬಿಜೆಪಿಯೂ ಸೇರಿ ಸುಭದ್ರ ಕೋಟೆಯಾಗಿದೆ ಎಂದರು.

Tap to resize

Latest Videos

undefined

Lok Sabha Election 2024: ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಎರಡೂ ಹೃದಯ ಒಟ್ಟಾಗಿದೆ: ಡಾ.ಸಿ.ಎನ್.ಮಂಜುನಾಥ್

 ನಾನು ದೀರ್ಘವಾಗಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. 75 ಲಕ್ಷ ಜನಕ್ಕೆ ಚಿಕಿತ್ಸೆ ನೀಡಿದ್ದೇನೆ. ಹೀಗಾಗಿ ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ನನ್ನ ಹೆಸರು ಚಿರಪರಿಚಿತವಾಗಿದೆ. ಇದಕ್ಕೆ ನಾನು ವೃತ್ತಿಯಲ್ಲಿ, ವೈಯಕ್ತಿಕ ಜೀವನದಲ್ಲಿ ನಡೆದುಬಂದ ರೀತಿಯೇ ಕಾರಣವಾಗಿದೆ. ಒಂದು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಪಂಚತಾರಾ ಆಸ್ಪತ್ರೆ ರೀತಿ ಕೆಲಸ ಮಾಡಿದ್ದೇನೆ. ಆಸ್ಪತ್ರೆಯಲ್ಲಿ ಕೆಲಸ ಮಾಡಿದಷ್ಟು ದಿನ ನಾನು ಎಸಿ ರೂಮ್‌ನಲ್ಲಿ ಕುಳಿತಿದ್ದು ಕಡಿಮೆ. ನಾನು ಆಸ್ಪತ್ರೆಯ ಆವರಣದಲ್ಲಿ ಓಡಾಡುತ್ತ ಜನರ ಸ್ಥಿತಿ ಗತಿ ಅವಲೋಕನ ಮಾಡ್ತಿದ್ದೆ. ಯಾರು ಚಿಕಿತ್ಸಾ ವೆಚ್ಚ ಭರಿಸಲಾಗದೇ ಪರದಾಡ್ತಿದ್ರೂ ಅಂತವರ ಉಚಿತ ಚಿಕಿತ್ಸೆ ಕೊಡುವ ಕೆಲಸ ಮಾಡಿದ್ದೇವೆ. ಬಡವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ಅದೇ ರೀತಿ ನರೇಂದ್ರ ಮೋದಿ, ದೇವೇಗೌಡರು, ಕುಮಾರಸ್ವಾಮಿ ಅವರು ಬಡವರ ಪರವಾದ ಸರ್ಕಾರ ಕೊಟ್ಟವರು ಅಂಥವರು ಬಡವರ ಪರ ಇರುವವರು ಅಧಿಕಾರದಲ್ಲಿರಬೇಕು ಎಂದು ಅಭಿಪ್ರಾಯಪಟ್ಟರು.

 

ಕರ್ನಾಟಕದಿಂದ ಹೆಚ್ಚು ಸ್ಥಾನ ಗೆದ್ದು ಮೋದಿಗೆ ಗಿಫ್ಟ್ ಕೊಡುತ್ತೇವೆ: ನಿಖಿಲ್ ಕುಮಾರಸ್ವಾಮಿ

ನಾನು ರಾಜಕೀಯಕ್ಕೆ ಬರ್ತೀನಿ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನಾವು ಯಾರ ಜೊತೆಗೆ ಒಡನಾಟ ಇಟ್ಟುಕೊಳ್ಳುತ್ತೇವೋ ಆ ರೀತಿ ಇರುತ್ತೇವೆ.
ಶಿಕ್ಷಕರ ಜೊತೆಗೆ ಇದ್ರೆ ಶಿಷ್ಯರಾಗ ಬೇಕು ಅನ್ಸುತ್ತೆ. ಅಧಿಕಾರಿಗಳ ಜೊತೆಗೆ ಹೋದ್ರೆ ಪ್ರಪಂಚ ನಿಧಾನ ಅನಿಸುತ್ತೆ. ಅದೇ ರೀತಿಯಲ್ಲಿ ಯೋಧರ ಜೊತೆಗೆ ಇದ್ರೆ ನಾವು ಮಾಡೋ ತ್ಯಾಗ ಏನೂ ಇಲ್ಲ ಅನಿಸುತ್ತೆ. ನಿಮ್ಮ ಉತ್ಸಾಹ ನೋಡಿದ್ರೆ ನಾನು ಕಾರ್ಯಕರ್ತನಾಗಿ ಇರಬೇಕು ಅನ್ಸುತ್ತೆ ಎಂದರು.

ದೇಶ ಸುಭದ್ರವಾಗಿರಬೇಕು ಹೀಗಾಗಿ ನರೇಂದ್ರ ಮೋದಿಯವರಿಗೆ ಹ್ಯಾಟ್ರಿಕ್ ಗೆಲುವು ತಂದುಕೊಡಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡೊಣ. ಬಿಜೆಪಿಯನ್ನು ಗೆಲ್ಲಿಸೋಣ ಎಂದು ಕರೆ ನೀಡಿದರು.

click me!