ಡಾ ಮಂಜುನಾಥ್ ವಿರುದ್ಧ ಭಾರೀ ಹಿನ್ನಡೆ; ಡಿಕೆ ಶಿವಕುಮಾರ ನಿವಾಸಕ್ಕೆ ಆಗಮಿಸಿದ ಡಿಕೆ ಸುರೇಶ್

By Ravi JanekalFirst Published Jun 4, 2024, 11:10 AM IST
Highlights

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್‌ಗೆ ಭಾರೀ ಹಿನ್ನೆಲೆ ಸದಾಶಿವನಗರ ನಿವಾಸದಿಂದ ಸಹೋದರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನಿವಾಸಕ್ಕೆ ತೆರಳಿದರು. ಈ ವೇಳೆ ಕುಣಿಗಲ್ ಶಾಸಕ ರಂಗನಾಥ್ ಸಹ ಜೊತೆಗಿದ್ದರು.

ಬೆಂಗಳೂರು (ಜೂ.4): ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್‌ಗೆ ಭಾರೀ ಹಿನ್ನೆಲೆ ಸದಾಶಿವನಗರ ನಿವಾಸದಿಂದ ಸಹೋದರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನಿವಾಸಕ್ಕೆ ತೆರಳಿದರು. ಈ ವೇಳೆ ಕುಣಿಗಲ್ ಶಾಸಕ ರಂಗನಾಥ್ ಸಹ ಜೊತೆಗಿದ್ದರು.

ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್ ಎದುರು ಭಾರೀ ಹಿನ್ನಡೆಯಾಗಿದೆ. ಈ ಸಂಬಂಧ ಡಿಕೆ ಶಿವಕುಮಾರ ಜೊತೆಗೆ ಚರ್ಚಿಸಲು ನಿವಾಸಕ್ಕೆ ಆಗಮಿಸಿದ್ದಾರೆ. ನಿವಾಸದಿಂದ ಹೊರಬರುತ್ತಿದ್ದಂತೆ ಎದುರಾದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಡಿಕೆ ಸುರೇಶ್ ನಿರಾಕರಿಸಿದರು.

Latest Videos

ಡಾ . ಮಂಜುನಾಥ್ 2 ಲಕ್ಷ ಮತಗಳ ಅಂತರದಿಂದ ಗೆಲ್ತಾರೆ: ಮುನಿರತ್ನ

ಭಾರೀ ಅಂತರದಲ್ಲಿ ಮುಂದಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್. ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಯಾಗಿದ್ದ ಡಿಕೆ ಸುರೇಶರನ್ನೇ ಹಿಂದಿಕ್ಕಿದ ಡಾ ಮಂಜುನಾಥ ಭಾರೀ ಮುನ್ನಡೆ ಸಾಧಿಸಿದ್ದಾರೆ. ಗೆಲುವಿನ ನಿರೀಕ್ಷೆಯಲ್ಲಿ ಡಾ ಮಂಜುನಾಥ ನಿವಾಸದಲ್ಲೂ ಸಂಭ್ರಮದ ವಾತಾವರಣ. ಇತ್ತ ಸಾವಿರಾರು ಕಾರ್ಯಕರ್ತರು ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದಾರೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿರೋ ಡಾ. ಮಂಜುನಾಥ್ ಫಲಿತಾಂಶದ ಕೊನೆ ಹಂತದ ವೇಳೆ ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುವ ಸಾಧ್ಯತೆಯಿದೆ.

ಈ ಬಾರಿಯ ಲೋಕಸಭೆಯಲ್ಲಿ ರಾಜ್ಯದಲ್ಲಿ ಹೆಚ್ಚು ಕುತೂಹಲ ಕೆರಳಿಸಿದ್ದು, ಗಮನ ಸೆಳೆದಿದ್ದು ಬೆಂಗಳುರು ಗ್ರಾಮಾಂತರ ಲೋಕಸಭಾ ಕ್ಷೇತ್ರ. ಡಿಕೆ ಶಿವಕುಮಾರ ಸಹೋದರ ಅದರಲ್ಲೂ ಲೋಕಸಭಾ ಸಂಸದರಾಗಿದ್ದ ಡಿಕೆ ಸುರೇಶ್ ವಿರುದ್ಧ ಡಾ ಮಂಜುನಾಥ್ ಸ್ಪರ್ಧಿಸಿದ್ದು. ಪ್ರಬಲ ನಾಯಕನ ವಿರುದ್ಧ ವೈದ್ಯರೊಬ್ಬರು ಸ್ಪರ್ಧಿಸಿ ಗೆಲ್ಲುವುದುಂಟ ಎಂದು ಮಾತಾಡಿಕೊಂಡಿದ್ದರು. ಡಿಕೆ ಸುರೇಶ್ ಗೆಲ್ಲುವ ಸಾಧ್ಯತೆಯೇ ಹೆಚ್ಚು ಎಂದು ಮಾತಾಡಿಕೊಂಡಿದ್ದರೂ ಸ್ವತಃ ಡಿಕೆ ಸುರೇಶ್ ಸಹ ಬಹಳ ವಿಶ್ವಾಸದಲ್ಲಿದ್ದರು. ಇದೀಗ ಫಲಿತಾಂಶ ಬುಡಮೇಲು ಮಾಡುವಂತಾಗಿದೆ. ಬೆಳಗಿನಿಂದ ಡಾ ಮಂಜುನಾಥ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಈಗಾಗಲೇ ಕಾರ್ಯಕರ್ತರು ಸಹ ಡಾ ಮಂಜುನಾಥ ನಿವಾಸ ಆಗಮಿಸಿ ಭರ್ಜರಿ ವಿಜಯೋತ್ಸವಕ್ಕೆ ತಯಾರಿ ನಡೆಸಿದ್ದಾರೆ.

click me!