ಕಲಬುರಗಿ: ಫಲಿತಾಂಶಕ್ಕೆ ಮುನ್ನವೇ ಲಾಡು ತಯಾರಿಸಿದ ಕಾಂಗ್ರೆಸ್ ಕಾರ್ಯಕಕರ್ತರು!

By Ravi Janekal  |  First Published Jun 4, 2024, 9:03 AM IST

ಇಂದು ದೇಶಾದ್ಯಂತ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿಳಲಿದ್ದು, ಮೊದಲ ಹಂತದ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಈ ನಡುವೆ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಫಲಿತಾಂಶಕ್ಕೆ ಮುನ್ನವೇ ಕಾಂಗ್ರೆಸ್ ಕಾರ್ಯಕರ್ತರು ಲಾಡು ತಯಾರಿಸಿ ವಿಜಯೋತ್ಸವ ಆಚರಿಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ.


ಕಲಬುರಗಿ (ಜೂ.4): ಲೋಕಸಭಾ ಚುನಾವಣೆ ಫಲಿತಾಂಶ ಇನ್ನೇನು ಕೆಲವೇ ತಾಸುಗಳಲ್ಲಿ ಹೊರಬಿಳಲಿದ್ದು, ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇರುವುದರಿಂದ ಭಾರೀ ಕುತೂಹಲ ಕೆರಳಿಸಿದೆ ಈ ನಡುವೆ ಕಲಬುರಗಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆಂದು ಕಾಂಗ್ರೆಸ್ ಕಾರ್ಯಕರ್ತರು ಫಲಿತಾಂಶಕ್ಕೂ ಮುನ್ನವೇ ವಿಜಯೋತ್ಸವ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲ್ಲುತ್ತಾರೆಂಬ ಭಾರೀ ವಿಶ್ವದಲ್ಲಿರುವ ಕಾರ್ಯಕರ್ತರು ನಗರದ ಮುಸ್ಲಿಂ ಚೌಕ್ ಬಳಿ ಇರುವ ಉತ್ತರ ಕ್ಷೇತ್ರದ ಕಾಂಗ್ರೆಸ್ ಕಚೇರಿಯಲ್ಲಿ ಭರ್ಜರಿ ಲಾಡು ತಯಾರಿಸಿದ್ದಾರೆ. ಗೆಲುವು ಸಾಧಿಸುತ್ತಲೇ ಸಾರ್ವಜನಿಕರಿಗೆ ಲಾಡು ವಿತರಿಸಲು ಸಾವಿರಾರು ಲಾಡು ತಯಾರಿಸಿರುವ ಕಾರ್ಯಕರ್ತರು. 

Tap to resize

Latest Videos

LIVE: Gulbarga Lok Sabha Elections 2024: ಖರ್ಗೆಗೆ ಕಲಬುರಗಿ ಮರಳಿ ಕೊಡಿಸುವರೇ ರಾಧಾಕೃಷ್ಣ, ಪಟ್ಟು ಬಿಡದ ಜಾಧವ್

click me!